Select Your Language

Notifications

webdunia
webdunia
webdunia
webdunia

ಕಾಲಸರ್ಪ ಯೋಗ ಮತ್ತು ಪರಿಹಾರ

ಕಾಲಸರ್ಪ ಯೋಗ ಮತ್ತು ಪರಿಹಾರ
WDWD
ಜನ್ಮಕುಂಡಲಿಯಲ್ಲಿನ ಗ್ರಹಗತಿಗಳು ವ್ಯಕ್ತಿಯ ಶ್ರೇಯಸ್ಸಿಗೆ ಧಕ್ಕೆ ತರಲು ಸಾಧ್ಯವೇ ? ವ್ಯಕ್ತಿಯನ್ನು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಸಿ ಜೀವನದಲ್ಲಿ ಜರ್ಜರಿತನನ್ನಾಗಿ ಮಾಡುತ್ತವೆಯೆ ? ಇಂತಹ ವಿಚಾರಗಳ ಕುರಿತು ಮಾತನಾಡುವುದು ಆಗಲಿ ಅಭಿಪ್ರಾಯ ವ್ಯಕ್ತಪಡಿಸುವುದು ಆಗಲಿ ಸಾಧ್ಯವಿಲ್ಲದ ಮಾತು. ಕೆಲವರು ಇದು ಶುದ್ದ ಸುಳ್ಳು ಎಂದು ವಾದಿಸಬಹುದು. 21 ನೇ ಶತಮಾನದಲ್ಲಿ ಇದ್ದರೂ ಸಾವಿರಾರು ಜನರು ಗ್ರಹದೋಷಗಳನ್ನು ನಂಬುತ್ತಾರೆ.ಅಂತಹ ನಂಬಿಕೆಯಲ್ಲಿ ಕಾಲಸರ್ಪ ಯೋಗವೂ ಒಂದು.

ನಂಬಿಕೆ, ಅಪನಂಬಿಕೆಗಳ ನಡುವೆ ಸಾಗುತ್ತಿರುವ ನಮ್ಮ ಪಯಣ ಸದ್ಯ ತ್ರ್ಯಂಬಕೇಶ್ವರ ಎಂಬ ಗ್ರಾಮಕ್ಕೆ ಬಂದು ನಿಂತಿದೆ. ಮಹಾರಾಷ್ಟ್ರದ ನಾಸಿಕ್ಜಿಲ್ಲೆಯ ವ್ಯಾಪ್ತಿಗೆ ಬರುವ ಈ ಗ್ರಾಮ ಕಾಲ ಸರ್ಪ ಯೋಗ ವಿಮೋಚನೆಗೆ ಪ್ರಸಿದ್ದಿ ಪಡೆದಿದೆ ಎಂಬ ಪ್ರತೀತಿ ಇದೆ. ಗ್ರಾಮಕ್ಕೆ ತೆರಳಿ ಅಲ್ಲಿ ನಡೆಯುವ ಸರ್ಪದೋಷ ವಿಮೋಚನೆಗಳನ್ನು ಕಣ್ಣಾರೆ ಕಾಣಬೇಕು ಎಂಬ ಉತ್ಸಾಹ ಮೇಲಾಗಿ ತಣಿಯದ ಕುತೂಹಲ ನಮ್ಮನ್ನಿಂದು ತ್ರ್ಯಂಬಕ ಗ್ರಾಮಕ್ಕೆ ಬರುವಂತೆ ಮಾಡಿದೆ. ಗ್ರಾಮಕ್ಕೆ ಹೋಗುವುದಕ್ಕೆ ಎಂದು ನಾವು ಟ್ಯಾಕ್ಸಿಗೆ ಕಾಯುತ್ತಿದ್ದೆವು. ಅಲ್ಲಿಗೆ ಬಂದ ಒಂದು ಟ್ಯಾಕ್ಸಿಯನ್ನೇರಿ ತ್ರ್ಯಂಬಕದತ್ತ ಸಾಗಿತು ನಮ್ಮ ನಂಬಿಕೆ, ಅಪನಂಬಿಕೆಗಳ ಪಯಣ

ಟ್ಯಾಕ್ಸಿ ಡ್ರೈವರ್ ಗಣಪತ್ ವಾಚಾಳಿ ಬಾಯಿಗೆ ಬಂದದ್ದು ಬಡಬಡಿಸುತ್ತ ನೀವೆಲ್ಲಿಂದ ಬಂದಿದ್ದಿರಾ? ಏನು ಸಮಸ್ಯೆ? ನಾರಾಯಣ ನಾಗಬಲಿ ಮಾಡಿಸುತ್ತೀರಾ ? ಪೂಜಾರಿಯನ್ನು ಗೊತ್ತು ಮಾಡಿದ್ದೀರಾ ? ಇಲ್ಲದೇ ಇದ್ದರೆ ನನಗೆ ಗೊತ್ತಿರುವವರು ಒಬ್ಬರು ಇದ್ದಾರೆ. ಅವರ ಬಳಿ ಕರೆದುಕೊಂಡು ಹೊಗುತ್ತೇನೆ. ಈ ಎಲ್ಲ ಮಾತುಗಳಿಗೆ ನಮ್ಮದು ಒಂದೇ ಉತ್ತರ ಅದು ಮೌನ.

ತ್ರ್ಯಂಬಕೇಶ್ವರ ಮಂದಿರದಲ್ಲಿ ಕಾಳಸರ್ಪದೋಷ ನಿವಾರಣೆ ಕುರಿತ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

webdunia
WDWD
ಇಲ್ಲಿಗೆ ಪ್ರತಿವರ್ಷ ಸಾವಿರಾರು ಜನರು ಸರ್ಪ ದೋಷ ನಿವಾರಣೆಗೆ ಬರುತ್ತಾರೆ ಎಂದೂ ಹೇಳಿದ. ಅವನ ಮಾತಿಗೆ ಕೊನೆ ಅಂತೂ ಇರಲಿಲ್ಲ. ಪಯಣಕ್ಕೂ ಅಂತ್ಯ ಇಲ್ಲದೆ ನಮಗೆ ಬೇಕಿದ್ದ ತ್ರ್ಯಂಬಕ ಬಂದಿತು. ಗಣಪತ್ಗೆ ಬಾಡಿಗೆಯನ್ನು ನೀಡಿ ಅವನ ಕೊರೆತದಿಂದ ಅಂತೂ ಮುಕ್ತಿ ಪಡೆದು ದೇವಸ್ಥಾನದ ಪ್ರಾಂಗಣಕ್ಕೆ ಕಾಲಿಟ್ಟೆವು. ಇಡೀ ವಾತಾವರಣ ಮಹಾಮೃತ್ಯುಂಜಯ ಮಂತ್ರ ಮತ್ತು ಶಿವಸ್ತುತಿಗಳಿಂದ ಪ್ರತಿಧ್ವನಿಸುತ್ತಿತ್ತು. ಹತ್ತಿರದಲ್ಲಿ ಇದ್ದ ಕುಶ್ವರತ್ ತೀರ್ಥದಲ್ಲಿ ಮಿಂದ ಭಕ್ತರು ಮತ್ತು ದೋಷ ಪರಿಹಾರಕ್ಕೆ ಎಂದು ಬಂದವರು ಶುಭ್ರ ವಸ್ತ್ರ ಧರಿಸಿ ಕಾಲ ಸರ್ಪ ಯೋಗ ಪೂಜೆಗೆ ಸನ್ನದ್ದರಾಗುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಅಕ್ಷರಸ್ಥ ಜನರೇ ಹೆಚ್ಚಾಗಿ ಅತಿಲೌಕಿಕ ವಿಷಯಗಳತ್ತ ಆಕರ್ಷಿತರಾಗುತ್ತಿದ್ದಾರೆ. ಈ ಕುರಿತು ನೀವೇನು ಹೇಳುವಿರಿ? ಇಲ್ಲಿ ಚರ್ಚಿಸಿ.

webdunia
WD
ಅಲ್ಲಿಯೇ ಹತ್ತಿರದಲ್ಲಿ ಇದ್ದ ಸುರೇಶ ಖಂಡೆ ಎನ್ನುವ ಕುಟುಂಬವನ್ನು ನಿದಾನವಾಗಿ ಮಾತಿಗೆ ಎಳೆದೆವು. ಮಗಳು ಶ್ವೇತಾಗೆ ಸಮಸ್ಯೆಗಳು ಕಾಡುತ್ತಿವೆ. ಅವಳಿಗೆ ಕಂಕಣ ಬಲ ಕೂಡಿಬರುತ್ತಿಲ್ಲ. ಜ್ಯೋತಿಷಿಯ ಸಲಹೆ ಮೇರೆಗೆ ಅವಳನ್ನು ಕಾಡುತ್ತಿರುವ ಕಾಲಸರ್ಪ ವಿಮೋಚನೆಗಾಗಿ ಇಲ್ಲಿಗೆ ಆಗಮಿಸಿದ್ದೇವೆ. ನನ್ನ ಸಂಬಂಧಿಯೊಬ್ಬಳಿಗೆ ಇದೇ ಸಮಸ್ಯೆ ಇತ್ತು. ಪೂಜೆಯ ನಂತರ ಸುಖ ಜೀವನ ನಡೆಸುತ್ತಿದ್ದಾಳೆ ಎಂದು ಶ್ವೇತಾ, ತಾಯಿ ದನಿಗೂಡಿಸಿದಳು. ಖಂಡೆಯಂತೆ ಸಾವಿರಾರು ಜನರು ಇಲ್ಲಿಗೆ ಬರುತ್ತಿದ್ದಾರೆ. ಅದರಲ್ಲೂ ಕೆಲವರು ಉನ್ನತ ಶಿಕ್ಷಣ ಪಡೆದವರು ಇದ್ದುದು ನಮಗೆ ಅಚ್ಚರಿ ತರಿಸಿತ್ತು.

ಕಾಲ ಸರ್ಪಯೋಗ ಅಂದರೆ ಎನು ? ಅದು ಹೇಗೆ ಆಗುತ್ತದೆ ಎಂದು ತಿಳಿದುಕೊಳ್ಳುವುದಕ್ಕಾಗಿ ಕಮಲಾಕರ್ ಎನ್ನುವ ಪೂಜಾರಿಯನ್ನು ಮಾತಿಗೆ ಎಳೆಯುವ ಪ್ರಯತ್ನ ಫಲ ನೀಡಿತು. ಜನ್ಮ ಕುಂಡಲಿಯಲ್ಲಿನ ಏಳು ಗ್ರಹಗಳು ರಾಹು ಮತ್ತು ಕೇತುವಿನ ದೃಷ್ಟಿ ಪಥದಲ್ಲಿ ಇದ್ದರೆ ಕಾಲಸರ್ಪಯೋಗ ಕೂಡಿಬರುತ್ತದೆ. ಇಂದಿನ ದಿನಗಳಲ್ಲಿ ಕಾಲಸರ್ಪಯೋಗದಿಂದ ಬಳಲುವವರೇ ಸಂಖ್ಯೆ ಹೆಚ್ಚಾಗುತ್ತಿದೆ. ಪೂರ್ವ ಪಿತೃಗಳ ಶ್ರಾದ್ಧ ಕರ್ಮಗಳನ್ನು ಸರಿಯಾಗಿ ನೆರವೇರಿಸದಿದ್ದರೆ ಇಂತಹ ಸಮಸ್ಯೆ ಎದುರಾಗುವುದು ಸಹಜ ಎಂದು ಹೇಳಿದರು.

ತ್ರ್ಯಂಬಕೇಶ್ವರ ಮಂದಿರದಲ್ಲಿ ಕಾಳಸರ್ಪದೋಷ ನಿವಾರಣೆ ಕುರಿತ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

webdunia
WD
ಕಾಲಸರ್ಪ ವಿಮೋಚನೆಯ ಪೂಜೆಯು ಗಣಪತಿಯ ಪೂಜೆಯೊಂದಿಗೆ ಪ್ರಾರಂಭವಾಗಿ, ನಾಗಪೂಜೆ ಮತ್ತು ಅಂತ್ಯದಲ್ಲಿ ಹವನದೊಂದಿಗೆ ಮುಕ್ತಾಯವಾಗುತ್ತದೆ ಎಂದು ಕಮಲಾಕರ್ ಹೇಳಿದರು.

ಪೂಜೆಯ ವಿಧಾನಗಳನ್ನು ನೋಡಿದ ಮೇಲೆ ನಾವು ಗ್ರಾಮ ಪ್ರದಕ್ಷಿಣೆಗೆ ಸಿದ್ದರಾಗಿ ಹೊರಗೆ ಬಂದೆವು.ಈ ಪೂಜೆಯನ್ನು ಬಹುತೇಕ ಇಲ್ಲಿನ ಎಲ್ಲ ಅರ್ಚಕರು ಮಾಡುತ್ತಾರೆ. ಕೆಲ ಮನೆಗಳಲ್ಲಿ, ಸುಮಾರು 20ಕ್ಕೂ ಹೆಚ್ಚು ಕುಟುಂಬಗಳು ಒಂದೇ ಸಮಯದಲ್ಲಿ ಪೂಜೆಗೆ ಕುಳಿತಿದ್ದು, ಇಬ್ಬರೂ, ಮೂವರು ಅರ್ಚಕರು ಮೈಕ್ ಎದುರು ಮಂತ್ರ ಪಠಿಸುತ್ತಿರುವುದು ಕಂಡುಬಂದಿತು.

ಇಷ್ಟೆಲ್ಲ ನೋಡಿದ ಮೇಲೆ ನಮ್ಮ ತಲೆಗೆ ಹೊಳೆದಿದ್ದು ಒಂದೇ ಸಂಗತಿ. ಜನರಿಗೆ ಪ್ರಾರ್ಥನೆ ಉಪಯೋಗವಾಗುತ್ತೊ ಇಲ್ಲವೋ ಗೊತ್ತಿಲ್ಲ. ಅರ್ಚಕರಿಗಂತೂ ದುಡ್ಡು ಪಕ್ಕದ ಗೋದಾವರಿಯ ಹಾಗೆ ಸದಾಕಾಲ ಹರಿದುಬರುತ್ತಿದೆ. ಎಲ್ಲ ಶಿವ ಮಹಿಮೆ ನಂಬಿದರೆ ನಂಬಿ ಬಿಟ್ಟರೆ ಬಿಡಿ ...

ಇತ್ತೀಚಿನ ದಿನಗಳಲ್ಲಿ ಅಕ್ಷರಸ್ಥ ಜನರೇ ಹೆಚ್ಚಾಗಿ ಅತಿಲೌಕಿಕ ವಿಷಯಗಳತ್ತ ಆಕರ್ಷಿತರಾಗುತ್ತಿದ್ದಾರೆ. ಈ ಕುರಿತು ನೀವೇನು ಹೇಳುವಿರಿ? ಇಲ್ಲಿ ಚರ್ಚಿಸಿ.

Share this Story:

Follow Webdunia kannada