Webdunia - Bharat's app for daily news and videos

Install App

ಅಶ್ವತ್ಥಾಮ ಇನ್ನೂ ಬದುಕಿದ್ದಾನೆಯೇ?

ಇಳಯರಾಜ
Shruthi AgarwalWD
ಅಸೀರಗಢದ ಕೋಟೆ... ಇದು ನಿಗೂಢತೆಗಳ ಮತ್ತು ರಹಸ್ಯಗಳನ್ನು ಒಡಲಲ್ಲಿ ಇರಿಸಿಕೊಂಡ ಕೋಟೆ. ಇದರಲ್ಲಿರುವ ಶಿವಮಂದಿರದಲ್ಲಿ ಚಿರಂಜೀವಿಗಳಲ್ಲೊಬ್ಬನಾದ ಮಹಾಭಾರತದ ಅಶ್ವತ್ಥಾಮನನ್ನು ಇಂದಿಗೂ ಪೂಜಿಸಲಾಗುತ್ತಿದೆ. ಇದು ನಿಜವೇ, ಸುಳ್ಳೇ ಎಂದು ಪರೀಕ್ಷಿಸುವ ಇರಾದೆ ನಮ್ಮದು. ಅಸೀರಗಢ ಕೋಟೆಯು ಮಧ್ಯಪ್ರದೇಶದ ಇಂದೋರ್ನ ದಕ್ಷಿಣ ಭಾಗದಲ್ಲಿರುವ ಖಂಡ್ವಾ ಜಿಲ್ಲೆಯ ಬುರ್ಹಾನ್ಪುರದಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ. ಮೊದಲಾಗಿ ನಾವು ಈ ಕೋಟೆ ಸುತ್ತಮುತ್ತಲಿರುವ ಜನರನ್ನು ಈ ಕುರಿತು ವಿಚಾರಿಸಿ ಮಾಹಿತಿ ಕಲೆ ಹಾಕಿದೆವು.

ಕೋಟೆಯ ಬಗ್ಗೆ ಒಬ್ಬೊಬ್ಬರಿಂದ ಒಂದೊಂದು ಕಥೆ ಕೇಳಿಬಂತು. ಅಶ್ವತ್ಥಾಮನನ್ನು ಹಲವಾರು ಬಾರಿ ಇಲ್ಲಿ ನೋಡಿದ್ದಾಗಿ ತಮ್ಮಜ್ಜ ಹೇಳುತ್ತಿದ್ದರೆಂದು ಕೆಲವರು ಹೇಳಿದರೆ, ಕೊಳದಲ್ಲಿ ಮೀನು ಹಿಡಿಯಲು ಹೋದಾಗ, ತನ್ನನ್ನು ಯಾರೋ ಕೊಳಕ್ಕೆ ನೂಕಿದರು ಎಂದು ಮತ್ತೊಬ್ಬ ಹೇಳಿದ. ತನ್ನನ್ನು ತಳ್ಳಿದವನೇ ಅಶ್ವತ್ಥಾಮ ಎಂಬುದು ಆತನ ಬಲವಾದ ನಂಬಿಕೆ. ಈ ಅಶ್ವತ್ಥಾಮನನ್ನು ನೋಡಿದವರೆಲ್ಲರೂ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಾರೆ ಎಂದು ಮತ್ತೆ ಹಲವರು ನುಡಿದರು. ಅವರವರ ವಿಶ್ವಾಸದ ಭಾವನೆಗಳನ್ನು ಸಂಗ್ರಹಿಸಿ ನಾವು ಈ ನಿಗೂಢ ಕೋಟೆಯತ್ತ ಪ್ರಯಾಣ ಬೆಳೆಸಿದೆವು. ಅದೊಂದು ಪುರಾತನ ಶಿಲಾಯುಗದ ಸ್ಮಾರಕದಂತೆ ತೋರುತ್ತಿತ್ತು. ಸಂಜೆ 6 ಗಂಟೆಯಾಗುತ್ತಿದ್ದಂತೆಯೇ ಈ ಕೋಟೆಯು ಭಯಾನಕ ತಾಣವಾಗಿ ಪರಿವರ್ತಿತವಾಗುತ್ತದೆ. ಕೆಲವರು ಹಳ್ಳಿಗರು ಕೂಡ ನಮ್ಮನ್ನು ಹಿಂಬಾಲಿಸಿದರು.
WDWD


ಈ ಕೋಟೆಯ ಕುರಿತ ಫೋಟೋ ಗ್ಯಾಲರಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ನಮ್ಮೊಂದಿಗೆ ಬಂದವರಲ್ಲಿ ಕೆಲವರೆಂದರೆ ಹಳ್ಳಿಯ ಮುಖಂಡ ಹರೂನ್ ಬೇಗ್, ಮಾರ್ಗದರ್ಶಕ (ಗೈಡ್) ಮುಖೇಶ್ ಗಹಡ್ವಾಲ್ ಮತ್ತು ಇತರರು. ಸಂಜೆ 6 ಗಂಟೆಯಾಗಿತ್ತು. ಅರ್ಧ ಗಂಟೆ ನಡೆದ ಬಳಿಕ ನಾವು ಕೋಟೆಯ ಮುಖ್ಯದ್ವಾರದ ಬಾಗಿಲು ಬಡಿದೆವು. ಬಾಗಿಲು ತೆರೆದುಕೊಂಡಿತು. ಒಳಗೆ ಪ್ರವೇಶಿಸಿದಾಗ ಕೋಟೆಯೊಳಗೆ ಸ್ಮಶಾನ ಕಂಡುಬಂತು. ಅಲ್ಲಿ ತುಂಬಾ ಹಳೆಯ ಸಮಾಧಿಯೊಂದಿತ್ತು. ಈ ಸಮಾಧಿ ಬ್ರಿಟಿಷರ ಕಾಲದ್ದು ಎಂದು ಮುಖೇಶ್ ವಿವರಿಸಿದ.

ಅಲ್ಲಿ ನಿಂತು ನೋಡಿದ ಬಳಿಕ ನಮ್ಮ ಪ್ರಯಾಣ ಮುಂದುವರಿಸಿದೆವು. ಕೊಳವೊಂದು ಹಲವು ಭಾಗಗಳಾಗಿ ವಿಭಜನೆಯಾದಂತೆ ತೋರುತ್ತಿತ್ತು. ಶಿವ ಮಂದಿರಕ್ಕೆ ತೆರಳುವ ಮುನ್ನ ಅಶ್ವತ್ಥಾಮ ಇದೇ ಕೊಳದಲ್ಲಿ ಸ್ನಾನ ಮಾಡುತ್ತಾನೆ ಎಂದು ಗೈಡ್ ವಿವರಿಸಿದ. ಆದರೆ ಕೆಲವರು ಹೇಳುವಂತೆ ಅಶ್ವತ್ಥಾಮನು ಮಂದಿರ ಪ್ರವೇಶಿಸುವ ಮೊದಲು ಸ್ನಾನ ಮಾಡುವುದು ಉತಾವಳಿ ನದಿಯಲ್ಲಿ. ಈ ಕೊಳದಲ್ಲಿ ಮಳೆ ನೀರು ತುಂಬಿದ್ದರೂ, ಅದು ಹಸಿರು ಹಸಿರಾಗಿ ಕಾಣಿಸುತ್ತಿತ್ತು. ಬುರ್ಹಾನ್ಪುರದ ಕುದಿಯುವ ತಾಪಮಾನದ ಸಂದರ್ಭದಲ್ಲೂ ಈ ಕೊಳವು ಒಣಗುವುದಿಲ್ಲ ಎಂಬುದನ್ನು ಕೇಳಿದಾಗ ನಮಗೆ ಆಶ್ಚರ್ಯವಾಯಿತು.

ನೀವು ಈ ಬಗ್ಗೆ ಏನಂತೀರ ಿ?... ಇಲ್ಲಿ ಚರ್ಚೆ ನಡೆಸಿ...

WDWD
ಇನ್ನೂ ಮುಂದುವರಿದಾಗ, ಕಬ್ಬಿಣದ ಕೋನಾಕಾರದ ಎರಡು ಫಲಕಗಳನ್ನು ಕಂಡೆವು. ಇದು ನೇಣುಕಂಬ ಎಂದು ಗೈಡ್ ವಿವರಿಸಿದ. ಇಲ್ಲಿ ತಪ್ಪಿತಸ್ಥರನ್ನು ನೇಣಿಗೇರಿಸಲಾಗುತ್ತಿತ್ತು ಮತ್ತು ಸತ್ತ ನಂತರ ಹೆಣಗಳಿಗೂ ನೇಣು ಹಾಕಲಾಗುತ್ತಿತ್ತಂತೆ. ಕೊನೆಯಲ್ಲಿ, ತಪ್ಪಿತಸ್ಥನ ಅಸ್ಥಿಪಂಜರವನ್ನು ಕೋಟೆಯಲ್ಲಿಯೇ ಇರುವ ಕಣಿವೆಯೊಂದಕ್ಕೆ ಎಸೆಯಲಾಗುತ್ತಿತ್ತಂತೆ.

ಇನ್ನಷ್ಟು ಮುಂದುವರಿದಾಗ, ಕೊಳ್ಳಗಳಿಂದಲೇ ಸುತ್ತುವರಿದ ಗುಪ್ತೇಶ್ವರ ಮಹಾದೇವ ಮಂದಿರ ಕಾಣಿಸಿತು. ಈ ಮಂದಿರಕ್ಕೆ ಖಾಂಡವ ವನದ (ಖಾಂಡ್ವಾ ಜಿಲ್ಲೆ) ಮೂಲಕ ಬರಬಹುದಾದ ರಹಸ್ಯ ಮಾರ್ಗವೊಂದಿದೆ ಎಂದು ಹೇಳಲಾಗುತ್ತಿದೆ. ಕಣಿವೆಯನ್ನು ಸುತ್ತುವರಿದ ವೃತ್ತಾಕಾರದ ಮೆಟ್ಟಿಲುಗಳ ಮೂಲಕ ನಾವು ಈ ಮಂದಿರ ಪ್ರವೇಶಿಸಿದೆವು. ಒಂದು ಸಣ್ಣ ತಪ್ಪು ಕೂಡ ನಮ್ಮನ್ನು ಸಾವಿನ ಬಾಯಿಗೆ ತಳ್ಳುವಂತಿತ್ತು ಈ ದುರ್ಗಮ ಕಣಿವೆ ಮಾರ್ಗ.

ಮಂದಿರ ಪ್ರವೇಶಿಸಿದ ಬಳಿಕ, ಯಾರೋ ನಿರಂತರ ಪೂಜೆ ಪುನಸ್ಕಾರ ನೆರವೇರಿಸುತ್ತಾರೆ ಎಂಬುದು ಗಮನಕ್ಕೆ ಬಂತು. ಶಿವಲಿಂಗದ ಮೇಲೆ ಕೆಂಪು ಹೂವಿನ ಪಕಳೆಗಳು ಮತ್ತು ಶ್ರೀಫಲ (ತೆಂಗಿನಕಾಯಿ)ಯನ್ನು ನಾವಲ್ಲಿ ಕಂಡೆವು. ಈ ಮಂದಿರದಲ್ಲೇ ಇಡೀ ರಾತ್ರಿ ಕಳೆಯಲು ನಿರ್ಧರಿಸಿದೆವು ನಾವು. ಮಧ್ಯರಾತ್ರಿಯಾದಾಗ ಹೆದರಿದಂತಿದ್ದ ಮುಖೇಶ್, ಆದಷ್ಟು ಬೇಗ ಇಲ್ಲಿಂದ ಹೊರಡುವಂತೆ ಒತ್ತಾಯಿಸಿದನಾದರೂ, ಅವನನ್ನು ಹಿಡಿದು ಕುಳ್ಳಿರಿಸುವಲ್ಲಿ ನಾವು ಸಫಲರಾದೆವು.
WDWD


ಈ ನಿಗೂಢ ಕೋಟೆಯ ಫೋಟೋ ಗ್ಯಾಲರಿ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಮಧ್ಯರಾತ್ರಿ ಕಳೆದು 2 ಗಂಟೆಯ ಸುಮಾರಿಗೆ ಆ ಪ್ರದೇಶದಲ್ಲಿ ಉಷ್ಣತೆಯು ದಿಢೀರನೆ ಕೆಳಗಿಳಿಯುತ್ತಾ ಇತ್ತು. ಆಗ ಯಾವುದೋ ಒಂದು ಪುಸ್ತಕದಲ್ಲಿ ಓದಿದ್ದ ಸಂಗತಿಯೊಂದು ನೆನಪಾಯಿತು ನನಗೆ. "ಎಲ್ಲಿ ಆತ್ಮಗಳು ಇರುತ್ತವೆಯೋ, ಆ ಪ್ರದೇಶದಲ್ಲಿ ಈ ರೀತಿಯಾಗಿ ದಿಢೀರನೆ ವಾತಾವರಣದ ಉಷ್ಣತೆ ತಗ್ಗುತ್ತದೆ" ಅಂತ! ನಮ್ಮೊಡನಿದ್ದವರು ಕೆಲವರು ಭಯದಿಂದ ನಲುಗಲಾರಂಭಿಸಿದರು.

ನೀವು ಈ ಬಗ್ಗೆ ಏನಂತೀರಿ?... ಇಲ್ಲಿ ಚರ್ಚೆ ನಡೆಸಿ...

WDWD
ಆಗ ಆ ಪ್ರದೇಶವೇ ಭಯಾನಕವಾಗಿ ಪರಿವರ್ತನೆಗೊಂಡಿತ್ತು. ಮುಂಜಾವ 4 ಗಂಟೆಯವರೆಗೂ ಅಲ್ಲೇ ಇದ್ದೆವು. ಸೂರ್ಯ ನಿಧಾನವಾಗಿ ಕಣ್ಣು ಬಿಡಲಾರಂಭಿಸಿದ. ಈ ಸಂದರ್ಭದಲ್ಲಿ ಕೊಳದಲ್ಲಿ ಯಾವ ರೀತಿ ಇರುತ್ತದೆ ಎಂಬುದನ್ನು ನೋಡುವಂತೆ ಹರೂನ್ ಹೇಳಿದ. ನಾವು ಕೊಳದತ್ತ ಹೆಜ್ಜೆ ಹಾಕತೊಡಗಿದೆವು. ನಾವು ಕೊಳವನ್ನು ಗಮನವಿಟ್ಟು ನೋಡಿದೆವು. ಶಂಕೆಗೆ ಆಸ್ಪದವಾಗುವಂಥದ್ದೇನೂ ಕಂಡುಬರಲಿಲ್ಲ. ಮಂದಿರದತ್ತ ತೆರಳಿದೆವು. ಆದರೆ...! ಅಲ್ಲಿ ಶಿವಲಿಂಗದ ಮೇಲೊಂದು ಗುಲಾಬಿ ಹೂವಿತ್ತು! ಆ ಲಿಂಗದ ಮೇಲೆ ಯಾರು ಹೂವು ಇರಿಸಿದರು ಎಂಬುದು ನಮಗೆ ಗೊತ್ತಾಗಲಿಲ್ಲ. ಅದು ಅಶ್ವತ್ಥಾಮ ಆಗಿರಬಹುದೇ? ಅಥವಾ ಬೇರಾವುದೇ ಆಗಂತುಕ ಇರಬಹುದೇ?

ಈ ನಿಗೂಢ ಕೋಟೆಯ ಫೋಟೋ ಗ್ಯಾಲರಿ ನೋಡಲು ಇಲ್ಲಿ ಕ್ಲಿಕ್ ಮಾಡಿ.

ನಿಗೂಢತೆ ಆರಂಭ:
ಬುರ್ಹಾಂಪುರದ ಸೇವಾಸದನ ಮಹಾವಿದ್ಯಾಲಯದ ಪ್ರೊಫೆಸರ್ ಡಾ. ಮಹಮದ್ ಶಫಿ ಅವರು ಈ ನಿಗೂಢ ಸಂಗತಿಯು ಆರಂಭವಾದ ಕುರಿತು ನಮಗೆ ವಿವರಣೆ ನೀಡಿದರು.
Shruthi AgarwalWD
ಬುರ್ಹಾಂಪುರದ ಇತಿಹಾಸವು ಮಹಾಭಾರತ ಕಾಲದೊಂದಿಗೆ ಸಂಬಂಧ ಹೊಂದಿದೆ. ಈ ಹಿಂದೆ ಈ ಪ್ರದೇಶವು ಮಹಾಭಾರತದಲ್ಲಿ ಉಲ್ಲೇಖಿತ ಖಾಂಡವ ವನದೊಂದಿಗೆ ಗುರುತಿಸಿಕೊಂಡಿತ್ತು. ಕೋಟೆಗೆ ದನಗಾಹಿ ಅಹೀರ್ ಎಂಬವನ ಹೆಸರು ನೀಡಲಾಗಿದೆ. ಈ ಕೋಟೆಯನ್ನು ಕಟ್ಟಿದ್ದು 1380ರಲ್ಲಿ ಫಾರೂಖಿ ರಾಜಮನೆತನ. ಅಶ್ವತ್ಥಾಮ ಇಲ್ಲಿರುವ ಸಂಗತಿಗೆ ಸಂಬಂಧಿಸಿದಂತೆ, ತಾನು ಬಾಲ್ಯದಿಂದಲೂ ತನ್ನ ಹಿರಿಯರ ಬಾಯಿಯಿಂದ ಈ ಕಥೆ ಕೇಳಿದ್ದಾಗಿ ಅವರು ವಿವರಿಸಿದರು. ಇದೆಲ್ಲಾ ನಮ್ಮ ನಮ್ಮ ನಂಬಿಕೆಯ ಪ್ರಶ್ನೆ. ಆದರೆ ಈ ಕೋಟೆಯಲ್ಲಿ ಸಾಕಷ್ಟು ಸುರಂಗಗಳಿವೆ ಮತ್ತು ಈ ಸುರಂಗ ಮಾರ್ಗಗಳ ಅಂತ್ಯ ಎಲ್ಲಿ ಆಗುತ್ತದೆ ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ ಎನ್ನುತ್ತಾರವರು.

ನೀವು ಈ ಬಗ್ಗೆ ಏನಂತೀರಿ?... ಇಲ್ಲಿ ಚರ್ಚೆ ನಡೆಸಿ...

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments