Select Your Language

Notifications

webdunia
webdunia
webdunia
webdunia

ನಿಮ್ಮ ಕಣ್ಣುಗಳ ಕಾಂತಿಯುಕ್ತವಾಗಬೇಕಾ? ಕಾಂತಿ ಹೆಚ್ಚಿಸುವ ಸೂಪರ್ ಫುಡ್‌ಗಳು ಯಾವವು. ಓದಿ

ನಿಮ್ಮ ಕಣ್ಣುಗಳ ಕಾಂತಿಯುಕ್ತವಾಗಬೇಕಾ? ಕಾಂತಿ ಹೆಚ್ಚಿಸುವ ಸೂಪರ್ ಫುಡ್‌ಗಳು ಯಾವವು. ಓದಿ
ದೆಹಲಿ , ಸೋಮವಾರ, 25 ಏಪ್ರಿಲ್ 2016 (16:38 IST)
ಪ್ರತಿಯೊಬ್ಬರಿಗೂ ಕಣ್ಣುಗಳು ಅಂದವಾಗಿ ಕಾಣಿಸಬೇಕು ಅಂತ ಎಲ್ಲರಿಗೂ ಆಸೆ ಇರುತ್ತೆ. ಆದರೆ ಯಾರಿಗೂ ಬ್ಯಾಲೆನ್ಸ್ ಆಗಿ ಡಯೇಟ್ ಮಾಡೋಕೆ ಆಗಲ್ಲ. ಆದರೆ ನಮ್ಮೆಲ್ಲರಿಗೂ ಹಸಿರು ತರಕಾರಿಗಳ ಬಳಕೆ ಮಾಡುವುದು ಗೊತಿಲ್ಲ, ನಿಯಮಿತ ತರಕಾರಿಗಳನ್ನು ಬಳಕೆ ಮಾಡುವುದರಿಂದ ನಿಮ್ಮ ಕಣ್ಣಿನ ಸೌಂದರ್ಯವನ್ನು ಹೆಚ್ಚಿಸಬಹುದು. ಯಾವ್ಯಾವ ಸೂಪರ್ ಫುಡ್ ಗಳನ್ನು ತೆಗೆದುಕೊಳ್ಳಬೇಕು..? ಐದು ಸೂಪರ್ ಫೂಡ್‌ಗಳ ಕುರಿತು ಮಾಹಿತಿ ಇಲ್ಲಿದೆ. 
ಗ್ರೀನ್ ವೆಜೆಟೆಬಲ್ಸ್, : ಹಸಿರು ಪಲ್ಯಾ, ಬಸಳೆ ಸೊಪ್ಪು ಸೇರಿದಂತೆ ಹಲವು ತಾಜಾ ತರಕಾರಿಗಳನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ ನಿಮ್ಮ ಕಣ್ಣಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.. ಹೀಗೆ ಮಾಡುವುದರಿಂದ ನಿಮ್ಮ ಕಣ್ಣಿನ ವೃದ್ಧಾಪ್ಯವಾಗುವುದಿಲ್ಲ,  ಅಲ್ಲದೇ ಕಣ್ಣಿನ ಸೌಂದರ್ಯದ ಬೆಳವಣಿಗೆಗೆ ಪಾಲಕ್ ಸೊಪ್ಪು ಸೇರಿದಂತೆ ಹಸಿರು ತರಕಾರಿಗಳನ್ನು ಸೇವಿಸಬೇಕು.
webdunia
ಎಳೆಗೆಂಪು ಮೌಂಸವಿರುವ ಮೀನು: ಫಿಶ್ ಕಣ್ಣಿನ ಆರೋಗ್ಯಕ್ಕೆ ಉತ್ತಮ ಮೆಡಿಸನ್.. ಎಳೆಗೆಂಪು ಮೀನು ನಿಮ್ಮ ಕಣ್ಣಿನ ರೆಟಿನಾ ಭಾಗವನ್ನ ಕಾಪಾಡುತ್ತದೆ. ಅಲ್ಲದೇ ಅಲ್ಲದೇ ಕಣ್ಣಿನ ಶುಷ್ಕತೆಯನ್ನು ಕಾಪಾಡುತ್ತದೆ. ಕಣ್ಣಿನ ಅಂಧತೆಯನ್ನ ಕಡಿಮೆ ಮಾಡುವ ಗುಣಗಳಿಗೆ ಇದರಲ್ಲಿ. ಆದ್ದರಿಂದ ಎಳೆಗೆಂಪು ಮಿನನ್ನು ನಿಯಮಿತಡವಾಗಿ ಸೇವಿಸಿ. 
webdunia
 
ಕ್ಯಾರೆಟ್,: ನಿಯಮಿತವಾಗಿ ಕ್ಯಾರೆಟ್ ಬಳಕೆಯಿಂದ ಕಣ್ಣನ ರಕ್ಷಣೆ ಅಗತ್ಯ. ಕ್ಯಾರೆಟ್ ಕಣ್ಣಿನ ಆರೋಗ್ಯಕ್ಕೆ ಉತ್ತಮ ಎಂದು ನಿಮೆಲ್ಲರಿಗೂ ಗೊತ್ತು. ಕ್ಯಾರೇಟ್‌ನಲ್ಲಿ ವಿಟಾಮಿನ್ A ಇರುವುದರಿಂದ ಅದು ನಿಮ್ಮ ಕಣ್ಣನ್ನು ರಕ್ಷಣೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. 
webdunia
 
ಬೆರಿಹಣ್ಣು: ದಿನಕ್ಕೆ ಎಂದು ಬಾರಿ ಬೆರಿಹಣ್ಣನ್ನು ಸೇವಿಸುವುದರಿಂದ ಕಣ್ಣಿನ ಅಂದವನ್ನು ಮತ್ತಷ್ಟುಹೆಚ್ಚಿಸಿಕೊಳ್ಳಬಹುದು.. 
webdunia
ದಪ್ಪ ಮೆಣಸಿನಕಾಯಿ: ಕಣ್ಣಿನ ಅಕ್ಷಿಪಟಲವನ್ನು ಕಾಪಾಡುವಲ್ಲಿ ದಪ್ಪ ಮೆಣಸು ಪ್ರಮುಖ ಪಾತ್ರ ವಹಿಸುತ್ತದೆ. ದಿನಕ್ಕೆ ಒಂದು ಬಾರಿಯಾದರೂ, ಇಲ್ಲವೇ ವಾರಕ್ಕೆ ಎರಡು ಬಾರಿಯಾದರೂ ದಪ್ಪ ಮೆಣಸಿನಕಾಯಿಯನ್ನು ಸೇವಿಸುವುದರಿಂದ ಕಣ್ಣಿನ ಅಂದವನ್ನು ಹೆಚ್ಚಿಸಿಕೊಳ್ಳಬಹುದು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada