Select Your Language

Notifications

webdunia
webdunia
webdunia
webdunia

ಮೊಡವೆಗಳಿಗೆ ಗುಡ್ ಬೈ ಹೇಳಿ

ಮೊಡವೆಗಳಿಗೆ ಗುಡ್ ಬೈ ಹೇಳಿ
, ಬುಧವಾರ, 22 ಜೂನ್ 2016 (16:57 IST)
ಯುವ ವಯಸ್ಸಿನಲ್ಲಿ ಮೊಡವೆಗಳ ಸಮಸ್ಯೆ ಸಹಜ. ನಿಮಗೂ ಮೊಡವೆಗಳು ಕಾಡುತ್ತಿವೆಯೇ. ಈ ಮುಂದಿನ ಕೆಲ ಪರಿಣಾಮಕಾರಿ ಮಾರ್ಗಗಳು ನಿಮ್ಮನ್ನು ಮೊಡವೆಯಿಂದ ರಕ್ಷಿಸಬಲ್ಲದು. 

*ಸೌತೆಕಾಯಿ ರಸವನ್ನು ಮುಖ, ಕತ್ತು, ಕುತ್ತಿಗೆ ಹಾಗ ಕಣ್ಣಿನ ಸುತ್ತಲೂ ಹಚ್ಚುವುದರಿಂದ ಮುಖಕ್ಕೆ ಕಾಂತಿ ಬರುತ್ತದೆ. ಸುಸ್ತಾದ ಚರ್ಮವನ್ನು ತೇಜೋಭರಿತವನ್ನಾಗಿ ಮಾಡುವುದಲ್ಲದೆ, ಮೊಡವೆ, ಕಲೆಗಳನ್ನು ಕಡಿಮೆ ಮಾಡುತ್ತದೆ. 
 
 *20ರಿಂದ 25 ದಿನಗಳ ಕಾಲ ನಿಂಬೆರಸ, ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಂದೆರಡು ಗಂಟೆ ಕಾಲ ಬಿಟ್ಟು ತೊಳೆದರೆ ಮೊಡವೆ ಕಡಿಮೆಯಾಗುತ್ತದೆ.
 
* ಮೊಟ್ಟೆಯ ಲೋಳೆಯನ್ನು ಹಾಗೆಯೇ ಮುಖಕ್ಕೆ ಹತ್ತಿಯ ಸಹಾಯದಿಂದ ಹಚ್ಚಿ ಸ್ವಲ್ಪ ಕಾಲ ಬಿಟ್ಟು ತೊಳೆದರೆ ಇದು ಮುಖದ ಹೆಚ್ಚಿ ಎಣ್ಣೆಯಂಶವನ್ನು ತೆಗೆಹಾಕಿ, ರಂಧ್ರಗಳ ವರೆಗೂ ಇಳಿದು ಮೊಡವೆಯನ್ನು ಕಡಿಮೆ ಮಾಡುತ್ತದೆ.
 
*ಕೊಬ್ಬಿನ ಆಮ್ಲ, ಪ್ರೋಟಿನ್ ಮತ್ತು ನಾರಿನಂಶವನ್ನು ಒಳಗೊಂಡಿರುವ ಬಾದಾಮಿ ಸೇವನೆ ಮೊಡವೆಗಳ ಚಿಕಿತ್ಸೆಗೆ  ಉತ್ತಮ ಪರಿಣಾಮ ಬೀರುತ್ತದೆ.
 
*ಆಕ್ಸಿಜನ್ ಫೇಶಿಯಲ್‌ನಿಂದ ಮುಖದ ಮೇಲಿನ ಗೆರೆಗಳು ಹಾಗೂ ಮೊಡವೆ ಕಲೆಗಳು ಮಾಯವಾಗುತ್ತವೆ. ಇದು ಮೊಡವೆಗಳ ಆಳಕ್ಕೆ ಹೋಗಿ ಪುನಃ ಮೊಡವೆಗಳು ಉತ್ಪತ್ತಿಯಾಗದಂತೆ ತಡೆಯುತ್ತದೆ.
 
 *ಸಾಮಾನ್ಯವಾಗಿ ಚರ್ಮದಲ್ಲಿರುವ ತೆರೆದ ರಂಧ್ರಗಳಿಂದ ಒಸರುವ ಜಿಡ್ಡಿನಿಂದ ಮೊಡವೆಯಾಗುತ್ತದೆ. ಆದರೆ ಆಕ್ಸಿಜನ್ ಫೇಶಿಯಲ್ ಈ ರಂಧ್ರಗಳನ್ನು ಸಂಕುಚಿತಗೊಳಿಸಿ ಆಳವಾಗಿ ಸ್ವಚ್ಛಗೊಳಿಸುತ್ತದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ರೆಸಿಪಿ: ಆಲೂಗಡ್ಡೆ ಸಲಾಡ್