Select Your Language

Notifications

webdunia
webdunia
webdunia
webdunia

ಫೇಸ್ ಪ್ಯಾಕಿನ ಉಪಯೋಗಗಳ ಬಗ್ಗೆ ಗೊತ್ತೆ ನಿಮಗೆ ?

ಫೇಸ್ ಪ್ಯಾಕಿನ ಉಪಯೋಗಗಳ ಬಗ್ಗೆ ಗೊತ್ತೆ ನಿಮಗೆ ?
, ಬುಧವಾರ, 8 ಜನವರಿ 2014 (10:24 IST)
PR
ಸಾಮಾನ್ಯವಾಗಿ ಎಲ್ಲರೂ ಮುಖದ ಚರ್ಮವನ್ನು ರಕ್ಷಣೆ ಮಾಡಿಕೊಳ್ಳಲು ಫೇಸ್ ಮಾಸ್ಕ್ ಹೆಚ್ಚು ಸೂಕ್ತ ಎಂದು ಹೇಳುತ್ತಾರೆ. ಆದರೆ ಫೇಸ್ ಮಾಸ್ಕ್ ಅಥ್ವಾ ಫೇಸ್ ಪ್ಯಾಕ್ ಉಪಯೋಗ ಏನು, ಅದು ಯಾವ ರೀತಿ ಕೆಲಸ ಮಾಡುತ್ತದೆ ಎನ್ನುವ ಅಂಶ ಯಾರಿಗೂ ತಿಳಿದಿರುವುದಿಲ್ಲ. ಈ ರೀತಿಯ ಮಾಸ್ಕ್ ಗಳನ್ನು ಬಳಕೆ ಮಾಡುವುದರಿಂದ ನಿಮ್ಮ ಚರ್ಮಕ್ಕೆ ಉತ್ತಮ ಉಪಚಾರ ನೀಡಿದಂತಾಗುತ್ತದೆ.

ಇದು ನಿಮ್ಮ ಮುಖಕ್ಕೆ ಪುಟ್ಟ ಫೇಶಿಯಲ್ ನಂತೆ ಕಾರ್ಯ ನಿರ್ವಹಿಸುತ್ತದೆ. ಈ ರೀತಿಯ ಪ್ಯಾಕ್ ಬಳಕೆ ಮಾಡುವುದರಿಂದ ಉಪಯೋಗಗಳ ಬಗ್ಗೆ ಇಲ್ಲಿ ನೀಡಿದೆ. ಈ ರೀತಿಯ ಪ್ಯಾಕ್ ಬಳಕೆ ಮಾಡುವುದರಿಂದ ಚರ್ಮದಲ್ಲಿ ತಾಜಾತನ, ಹೊಳಪು , ಬಣ್ಣ ಮತ್ತು ಬಿಗಿತ್ವ ಉಂಟಾಗುತ್ತದೆ. ಆ ರೀತಿಯ ಫಲಿತಾಂಶ ದೊರಕುವಂತೆ ಪ್ಯಾಕ್ಗಳಲ್ಲಿ ಮಿಶ್ರವಾಗಿರುವ ಪದಾರ್ಥಗಳು ಕೆಲಸ ಮಾಡುತ್ತದೆ ಎಂಬ ಸಂಗತಿ ನಿಮಗೆ ತಿಳಿದಿರಲಿ.

ಆರಾಮದಾಯಕ : ಮತ್ತೊಂದು ಮುಖ್ಯ ಕಾರಣವೆಂದರೆ ಈ ರೀತಿಯ ಪ್ಯಾಕ್ ಗಳ ಬಳಕೆ ಮಾಡುವುದರಿಂದ ಚರ್ಮಕ್ಕೆ ಆರಾಮ ಉಂಟಾಗುತ್ತದೆ. ಹಾಯೆನ್ನಿಸುತ್ತದೆ. ಅಲ್ಲದೆ ಕಳೆಯಿಲ್ಲದಂತೆ ಇರುವ ಜೀವಕೋಶಗಳಿಗೆ ಶಕ್ತಿ ದೊರಕುತ್ತದೆ. ಪುನರ್ಜೀವ ಪಡೆಯುತ್ತದೆ.

ನೀವು ಕ್ರೀಮ್ ಇಲ್ಲವೇ ಹರ್ಬಲ್ ಗಳಿಂದ ಮಾಡಿದ ಫೇಸ್ ಪ್ಯಾಕ್ ಯಾವುದನ್ನೇ ಆಗಲು ಬಳಸಿದ ಬಳಿಕ ಚರ್ಮಕ್ಕೆ ರಿಲಾಕ್ಸ್ ಆಗುತ್ತದೆ. ನೀವು ಕ್ರೀಮ್ ಫೇಸ್ ಪ್ಯಾಕ್ ಬಳಕೆ ವಿಷಯಕ್ಕೆ ಬರುವುದಾದರೆ ನಿಮಗೆ ಅಗತ್ಯ ಇರುವ ಸ್ಥಳಗಳಲ್ಲಿ ಅದರ ಬಳಕೆ ಮಾಡಿ ಪ್ರಯೋಜನ ಪಡೆಯ ಬಹುದಾಗಿದೆ. ಉದಾಹರಣೆ ಕಣ್ಣಿನ ಕೆಳಗೆ ಕಪ್ಪು ವರ್ತುಲ ಇದೆ ಎಂದು ಕೊಳ್ಳಿ. ಅಗತ್ಯ ಇರುವ ಕಡೆ ಮಾತ್ರ ಕ್ರೀಮ್ ಪ್ಯಾಕ್ ಉಪಯೋಗಿಸುವುದರಿಂದ ಅಲಿ ಪ್ರಯೋಜನ ಪಡೆಯ ಬಹುದು. ಅತ್ಯಂತ ಸರಳ ಮತ್ತು ಸುಲಭವಾದ ಚರ್ಮ ಆರೈಕೆಯ ವಿಧಾನವಾಗಿದೆ. ನೀವು ಕೆಲವು ನಿಮಿಷಗಳಲ್ಲಿ ಇದರಿಂದ ತಾಜಾತನ ಹೋಂಡಾ ಬಹುದಾಗಿದೆ. ನೀವು ಯಾವುದೇ ಬಗೆ ಫೇಸ್ ಪ್ಯಾಕ್ ಬಳಕೆ ಮಾಡಿದರು ಸಹ ಉತ್ತಮ ಪ್ರಯೋಜನವನ್ನು ಅತಿ ಶೀಘ್ರವಾಗಿ ನಿಮ್ಮದಾಗಿಸಿಕೊಳ್ಳ ಬಹುದಾಗಿದೆ.

Share this Story:

Follow Webdunia kannada