Webdunia - Bharat's app for daily news and videos

Install App

2018ರ ಭವಿಷ್ಯ-ನಿಮ್ಮ ರಾಶಿಗಳ ಮೇಲೆ ಏನು ಪ್ರಭಾವ?

Webdunia
ಗುರುವಾರ, 30 ನವೆಂಬರ್ 2017 (15:42 IST)
2017ರ ಕಹಿ ನೆನೆಪುಗಳನ್ನು ಮರೆಯುವುದರೊಂದಿಗೆ ಹೊಸ ವರ್ಷವನ್ನು ತಮಾಷೆ, ಸಂಭ್ರಮ ಮತ್ತು ಸಂತಸದಿಂದ ಬರಮಾಡಿಕೊಳ್ಳುತ್ತೇವೆ. ಹೊಸವರ್ಷದಿಂದ ಹೊಸ ಜೀವನವನ್ನು ಆರಂಭಿಸಬೇಕು ಎನ್ನುವ ತುಡಿತ ಎಲ್ಲರಲ್ಲಿ ಮನೆ ಮಾಡಿರುತ್ತದೆ.


2017ರ ಸಿಹಿ-ಕಹಿನೆನಪುಗಳನ್ನು ಮೆಲುಕು ಹಾಕುತ್ತ, ಹೊಸ ವರ್ಷದಲ್ಲಿ ಕಹಿನೆನಪುಗಳು ಮರುಕಳಿಸದಿರಲಿ ಎಂದು ನಂಬಿದ ದೇವರಲ್ಲಿ ಬೇಡಿಕೊಳ್ಳುತ್ತೇವೆ. ಹೊಸವರ್ಷದಲ್ಲಿ ನಿಮ್ಮ ರಾಶಿಗಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎನ್ನುವುದನ್ನು ನೋಡುವಾ ಬನ್ನಿ. 
 
ಮೇಷ: ಈ ರಾಶಿಯ ವ್ಯಕ್ತಿಗಳಿಗೆ ಹೊಸ ವರ್ಷ ಹೊತಸಾದ ಉಲ್ಲಾಸವನ್ನು ತರಲಿದೆ. ಇತರರಿಗೆ ಮಾದರಿಯಾಗಲಿದ್ದೀರಿ. ಆತ್ಮೀಯ ಗೆಳೆಯರ ಸಂಪರ್ಕದೊಂದಿಗೆ ತಮಾಷೆ, ಹರಟೆಯಲ್ಲಿ ಭಾಗಿಯಾಗುವ ಸಾಧ್ಯತೆ. ನಿಮ್ಮ ಇಷ್ಟದ ಸ್ಥಳಕ್ಕೆ ಅಚ್ಚರಿಯ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ. ವಿಶೇಷ ಔತಣಕೂಟಗಳಲ್ಲಿ ಪಾಲ್ಗೊಳ್ಳುತ್ತೀರಿ. ನಿಮ್ಮ ವೈವಾಹಿಕ ಜೀವನ ಸುಖಮಯವಾಗಲಿದೆ. ಯುವತಿಯರು ಇಷ್ಟಪಟ್ಟ ವ್ಯಕ್ತಿಯೊಂದಿಗೆ ವಿವಾಹ ಬಂಧನ ನೆರವೇರಲಿದೆ. ಚಿನ್ನಾಭರಣಗಳ ಖರೀದಿ ಸಾಧ್ಯತೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಹಿರಿಯರನ್ನು ಗೌರವಿಸಿದಲ್ಲಿ ನಿಮ್ಮ ಗೌರವಗಳು ಹೆಚ್ಚಾಗಲಿವೆ. ಕೆಲ ಸಮಾರಂಭಗಳಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳುವ ಅವಕಾಶಗಳಿವೆ. 
 
ವೃಷಭ: ಈ ರಾಶಿಯವರು ಕೆಲಮಟ್ಟಿಗೆ ನಾಚಿಕೆಪಡುವ, ವಾಸ್ತವತೆಯನ್ನು ಅರಿಯುವ ಸರಳ ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ. ಐಷಾರಾಮಿ ಜೀವನ ಬಯಸುವುದಿಲ್ಲ. ಸರಳವಾಗಿ ಯಾರ ಹಂಗಿಲ್ಲದ ಬದುಕನ್ನು ಬಯಸುತ್ತಾರೆ. ದುಂದುವೆಚ್ಚ ಮಾಡುವವರಲ್ಲ. ನಿಸರ್ಗದ ಚೆಲುವಿಗೆ, ಪುಸ್ತಕಗಳಿಗೆ ಮಾರುಹೋಗುವ ಗುಣವನ್ನು ಹೊಂದಿರುತ್ತಾರೆ. ನಿಮ್ಮ ಅಭಿಲಾಷೆಗಳು ಪ್ರಸಕ್ತ ವರ್ಷದಲ್ಲಿ ಈಡೇರಲಿವೆ. ನೀವು ಮೆಚ್ಚಿದ ಯುವಕ ಅಥವಾ ಯುವತಿಯೊಂದಿಗೆ ವಿವಾಹ ನೇರವೇರುತ್ತದೆ. ದೂರದ ಊರಿನಿಂದ ಉದ್ಯೋಗದ ಕರೆ ಬರುವ ನಿರೀಕ್ಷೆಗಳಿವೆ. ಇತರರೊಂದಿಗೆ ಹಣದ ವ್ಯವಹಾರ ನಿಮಗೆ ನಷ್ಟ ತರಲಿದೆ. ಗೆಳೆಯರನ್ನು ನಂಬಿ ಹಣ ನೀಡಬೇಡಿ. ಪತಿ ಮತ್ತು ಪತ್ನಿಯ ಮಧ್ಯೆ ಪ್ರೇಮ ಸಲ್ಲಾಪ ಹೆಚ್ಚಾಗಲಿದೆ. ದುಂದು ವೆಚ್ಚ ನಿಮಗೆ ಸಂಕಷ್ಟ ತರಲಿದೆ ಎನ್ನುವುದು ಮರೆಯಬೇಡಿ. 
 
ಮಿಥುನ: ಈ ರಾಶಿಯವರಿಗೆ ಉಡುಗೊರೆ ತುಂಬಾ ಇಷ್ಟವಾಗುತ್ತದೆ. ಕಣ್ಣಿಗೆ ಆಕರ್ಷಕವಾಗಿ ಕಾಣುವ ಉಡುಗೊರೆ ಇವರ ಮನವನ್ನು ಸೆಳೆಯುತ್ತದೆ. ನೀವು ಪ್ರೀತಿಸುವ ವ್ಯಕ್ತಿಗಳಿಗೆ ಹೊಸ ವರ್ಷದಲ್ಲಿ ನೀಡಿದ ಕೊಡುಗೆ ತುಂಬಾ ಸ್ಮರಣಿಯವಾಗಿರಲಿದೆ. ನಿಮ್ಮ ಆಸೆಗಳು ಈಡೇರಲಿವೆ. ಬಯಸಿದ ವ್ಯಕ್ತಿಯೊಂದಿಗೆ ನಿಮ್ಮ ಮದುವೆಯಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ನಿಮ್ಮನ್ನು ಪ್ರಿತಿಸುವವರಿಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಉಡುಗೊರೆಯಾಗಿ ನೀಡಿ. ದುಂದು ವೆಚ್ಚ ಬೇಡ. ಗೆಳೆಯರನ್ನು ನಂಬಿ ಹಣಕಾಸಿನ ವ್ಯವಹಾರ ಬೇಡ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ.ಗುರು ಹಿರಿಯರನ್ನು ಗೌರವಿಸಿ. ಉತ್ತಮ ಆರೋಗ್ಯ ವಿದೇಶ ಪ್ರವಾಸ ಸಾಧ್ಯತೆ. 
 
ಕಟಕ: ಈ ರಾಶಿಯವರಿಗೆ ಹೊಸ ವರ್ಷದ ಉಡುಗೊರೆಯಾಗಿ ಯಾವ ವಸ್ತುಗಳನ್ನು ನೀಡಿದರೂ ಪ್ರೀತಿಯಿಂದ ಸ್ವೀಕರಿಸುತ್ತಾರೆ. ಉಡುಗೊರೆಯ ಮೌಲ್ಯಕ್ಕಿಂತ ಉಡುಗೊರೆ ನೀಡಿದ ವ್ಯಕ್ತಿ ಪ್ರಮುಖವಾಗುತ್ತಾನೆ. ನಿಮ್ಮ ಜೀವನದಲ್ಲಿ ಹೊಸ ಅವಕಾಶಗಳು ಎದುರಾಗಲಿವೆ. ವಿವಾಹ ಬಂಧನ ಸಾಧ್ಯತೆ. ದುಂದು ವೆಚ್ಚ ಬೇಡ. ಗೆಳೆಯರನ್ನು ನಂಬಿ ಹಣಕಾಸಿನ ವ್ಯವಹಾರ ಮಾಡಬೇಡಿ. ನೀವು ಪ್ರೀತಿಸಿದವರೊಂದಿಗೆ ನಿಮ್ಮ ವಿವಾಹವಾಗುವ ಸಾಧ್ಯತೆಗಳಿವೆ. ವಿದೇಶಿ ಪ್ರವಾಸದ ಯೋಗವಿದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಹಿರಿಯರನ್ನು ಗೌರವಿಸುವುದರಿಂದ ನಿಮ್ಮ ಘನತೆ ಗೌರವ ಹೆಚ್ಚಾಗಲಿದೆ.
 
ಸಿಂಹ: ಈ ರಾಶಿಯ ವ್ಯಕ್ತಿಗಳು ವಿಶ್ವಾಸಪಾತ್ರ ವ್ಯಕ್ತಿಗಳಾಗಿರುತ್ತಾರೆ. ಸದಾ ಕೇಂದ್ರಬಿಂದುವಾಗಲು ಬಯಸುತ್ತಾರೆ. ಕೆಲ ಬಾರಿ ಮಕ್ಕಳಂತೆ ಕೂಡಾ ವರ್ತಿಸಿ ತಮಾಷೆಗೆ ಶರಣಾಗುತ್ತಾರೆ. ಆಕರ್ಷಕ ಉಡುಗೊರೆಗಳನ್ನು ನೀಡಿದಲ್ಲಿ ತುಂಬಾ ಸಂತಸದಿಂದ ಸ್ವೀಕರಿಸುತ್ತಾರೆ. ಸಂಜೆಯ ಸಮಯದಲ್ಲಿ ಪ್ರೀತಿ ಪಾತ್ರರೊಂದಿಗೆ ಕಳೆಯುವುದು ತುಂಬಾ ಇಷ್ಟವಾಗುತ್ತದೆ. ವಿದೇಶ ಪ್ರಯಾಣ ಯೋಗವಿದೆ. ನಿಮ್ಮ ಬಾಳಲ್ಲಿ ಹೊಸ ಸಂತಸ ಮೂಡಿಬರಲಿದೆ. ದುಂದುವೆಚ್ಚದಿಂದ ದೂರವಿರಿ. ಗೆಳೆಯರನ್ನು ನಂಬಿ ಹಣಕಾಸಿನ ವೆಚ್ಚ ಬೇಡ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. 
 
ಕನ್ಯಾ: ಈ ರಾಶಿಯ ವ್ಯಕ್ತಿಗಳು ಇತರರ ಜೀವನೋದ್ಧಾರಕ್ಕಾಗಿ ಶ್ರಮಿಸುತ್ತಾರೆ. ಇಂತಹ ವ್ಯಕ್ತಿಗಳಿಗೆ ಭಾರಿ ಮೌಲ್ಯದ ಉಡುಗೊರೆಗಳು ಇಷ್ಟವಾಗುತ್ತವೆ. ಶಿಸ್ತುಬದ್ಧ ಜೀವನದಿಂದಾಗಿ ಇತರರಿಗೆ ಮಾದರಿಯಾಗಿ ಕಾಣಿಸುತ್ತಾರೆ. ನೃತ್ಯ, ಪುಸ್ತಕಗಳನ್ನು ತುಂಬಾ ಇಷ್ಟಪಡುತ್ತಾರೆ. ರುಚಿ, ರುಚಿಯಾದ ಅಡುಗೆ ಮಾಡುವುದರಲ್ಲೂ ಪ್ರವೀಣರಾಗಿರುತ್ತಾರೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಗೆಳೆಯರೊಂದಿಗೆ ಹಣಕಾಸಿನ ವ್ಯವಹಾರಗಳಲ್ಲಿ ಇತಿ ಮಿತಿಗಳಿರಲಿ. ಇಲ್ಲವಾದಲ್ಲಿ ನಷ್ಟವಾಗುವ ಸಾಧ್ಯತೆಗಳಿವೆ. ನೀವು ಇಷ್ಟಪಟ್ಟ ವ್ಯಕ್ತಿಗಳೊಂದಿಗೆ ನಿಮ್ಮ ವಿವಾಹವಾಗಲಿದೆ. ದೂರದ ಊರಿನಿಂದ ಉದ್ಯೋಗಕ್ಕಾಗಿ ಕರೆ ಬರುವ ಸಾಧ್ಯತೆಗಳಿವೆ.
 
ತುಲಾ: ಈ ರಾಶಿಯ ವ್ಯಕ್ತಿಗಳಿಗೆ ಸುಂದರವಾದ, ಕಲಾಕೃತಿಯ ಉಡುಗೊರೆಗಳು ತುಂಬಾ ಇಷ್ಟವಾಗುತ್ತವೆ. ಸುಂದರವಾದ ಹೂವುಗಳು, ಫ್ಯಾಶನ್ ಬಟ್ಟೆಗಳು, ಚಿನ್ನಾಭರಣ ಮತ್ತು ಸುಗಂಧ ದ್ರವ್ಯಗಳು ಇಷ್ಟವಾಗುತ್ತವೆ. ಹೊಸ ವರ್ಷದಲ್ಲಿ ನಿಮಗೆ ಇಷ್ಟವಾದ ಸ್ಥಳಕ್ಕೆ ಪ್ರವಾಸಕ್ಕೆ ತೆರಳುವ ಅವಕಾಶಗಳಿವೆ. ನೀವು ಮೆಚ್ಚಿದವರೊಂದಿಗೆ ವಿವಾಹವಾಗಲಿದೆ. ಗೆಳೆಯರನ್ನು ನಂಬಿ ಹಣದ ವಹಿವಾಟು ಮಾಡದಿರುವುದು ಲೇಸು. ದುಂದು ವೆಚ್ಚ ನಿಮಗೆ ನಷ್ಟ ತರಲಿದೆ. ಮನೆಯಲ್ಲಿರುವ ಹಿರಿಯರನ್ನು ಗೌರವಿಸಿದಲ್ಲಿ ಮುಂದಿನ ದಿನಗಳಲ್ಲಿ ನಿಮಗೆ ಶುಭವಾಗಲಿದೆ. ಸಂತಸದ ಕ್ಷಣಗಳು ನಿಮ್ಮದಾಗಲಿವೆ.
 
ವೃಶ್ಚಿಕ: ಈ ರಾಶಿಯವರು ವಿಶೇಷ ಸಂದರ್ಭಗಳಲ್ಲಿ ತುಂಬಾ ತಮಾಷೆಯ ಗುಣವನ್ನು ಹೊಂದಿರುತ್ತಾರೆ. ತಾವು ನಕ್ಕು ಇತರರನ್ನು ನಗಿಸುವ ಸ್ವಭಾವದವರು. ಧಾರ್ಮಿಕ ಮತ್ತು ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಹೊಂದಿರುತ್ತಾರೆ. ಆಕರ್ಷಕ ವಸ್ತುಗಳನ್ನು ಉಡುಗೊರೆಯಾಗಿ ಬಯಸುತ್ತಾರೆ. ಯಾವುದೇ ಉದ್ಯೋಗದಲ್ಲಿರಲಿ ತುಂಬಾ ಬಿಜಿಯಾಗಿರಲು ಬಯಸುತ್ತಾರೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ನೀವು ಪ್ರೀತಿಸಿದ ವ್ಯಕ್ತಿಯೊಂದಿಗೆ ಮದುವೆಯಾಗುವ ಸಾಧ್ಯತೆಗಳಿವೆ. ಗುರುಹಿರಿಯರನ್ನು ಗೌರವಿಸಿ. ಗೆಳೆಯರನ್ನು ನಂಬಿ ಹಣಕಾಸಿನ ವ್ಯವಹಾರ ಮಾಡಬೇಡಿ. ದುಂದುವೆಚ್ಚ ಮಾಡಿದಲ್ಲಿ ತುಂಬಾ ನಷ್ಟ ಉಂಟಾಗುವ ಸಾಧ್ಯತೆಗಳಿವೆ. 
 
ಧನಸ್ಸು: ಈ ರಾಶಿಯವರು ಐಷಾರಾಮಿ ಬದುಕನ್ನು ಬಯಸುವವರು. ಹೊಸ ವರ್ಷದಲ್ಲಿ ಹೊಸತೊಂದು ಪ್ರಯತ್ನಕ್ಕೆ ಕೈ ಹಾಕುತ್ತಾರೆ. ನಾಯಿ ಮತ್ತು ಕುದುರೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಸಾಹಿತ್ಯ, ರಾಜಕೀಯ, ಮಾನವತೆ, ಧಾರ್ಮಿಕ ಭಾವನೆಗಳನ್ನು ಹೆಚ್ಚಾಗಿ ಗೌರವಿಸುತ್ತಾರೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ನಿಮ್ಮ ಪ್ರೇಮ ಸಲ್ಲಾಪಗಳು ಮುಂದುವರಿಯಲಿವೆ. ನೀವು ಪ್ರೀತಿಸಿದ ವ್ಯಕ್ತಿಯೊಂದಿಗೆ ವಿವಾಹವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಅವಿವಾಹಿತರಿಗೆ ವಿವಾಹ ಯೋಗ ಶೀಘ್ರದಲ್ಲಿ ಕೂಡಿಬರಲಿದೆ. ದಾಂಪತ್ಯ ಜೀವನ ಸುಖಮಯವಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ದುಂದು ವೆಚ್ಚ ಬೇಡ. ನೆರೆಹೊರೆಯವರನ್ನು ಮತ್ತು ಗೆಳೆಯರ ಸಲಹೆಗಳಿಗೆ ಸ್ಪಂದಿಸಿ. 
 
ಮಕರ: ಈ ರಾಶಿಯವರು ಸುಮಧುರ ಸಂಗೀತ, ನಗೆ ಚಟಾಕಿ, ಕ್ರೀಡಾಪಟುವಿನ ಗುಣಗಳನ್ನು ಹೊಂದಿರುತ್ತಾರೆ. ಉಪಯೋಗಕ್ಕೆ ಬರುವ ಉಡುಗೊರೆಗಳನ್ನು ಮಾತ್ರ ಇಷ್ಟಪಡುತ್ತಾರೆ. ಆಭರಣಗಳು, ಬ್ರೀಫ್‌ಕೇಸ್, ಸಾಹಿತ್ಯ, ಸುಗಂಧ ದ್ರವ್ಯಗಳನ್ನು ತುಂಬಾ ಇಷ್ಟಪಡುತ್ತಾರೆ. ಮನೆಯಲ್ಲಿ ಕುಟುಂಬದವರ ಇಚ್ಚೆಗೆ ಅನುಸಾರವಾಗಿ ನಡೆದು ಪ್ರೀತಿಗೆ ಪಾತ್ರರಾಗುತ್ತಾರೆ. ಹಿರಿಯರನ್ನು ಗೌರವಿಸಿದಲ್ಲಿ ಕುಟುಂಬದಲ್ಲಿ ನಿಮ್ಮ ಘನತೆ, ಗೌರವಗಳು ಹೆಚ್ಚಾಗುತ್ತವೆ. ವಿದೇಶ ಪ್ರಯಾಣದ ಯೋಗವಿದೆ. ಗೆಳೆಯರನ್ನು ನಂಬಿ ದುಂದು ವೆಚ್ಚ ಮಾಡಿದಲ್ಲಿ ನಷ್ಟ ಎದುರಿಸುವ ಸಾಧ್ಯತೆಗಳಿವೆ. ಅವಿವಾಹಿತರಿಗೆ ಶೀಘ್ರದಲ್ಲಿ ಕಂಕಣಬಲ ಕೂಡಿ ಬರಲಿದೆ. ನಿರುದ್ಯೋಗಿಗಳಿಗೆ ಶೀಘ್ರದಲ್ಲಿ ಉದ್ಯೋಗದ ಅವಕಾಶಗಳು ದೊರೆಯಲಿವೆ.
 
ಕುಂಭ: ಈ ರಾಶಿಯ ವ್ಯಕ್ತಿಗಳ ವ್ಯಕ್ತಿತ್ವ ಅಳೆಯುವುದು ಸುಲಭವಲ್ಲ. ಹೊಸವರ್ಷದಲ್ಲಿ ಅವರಿಗೆ ಇಷ್ಟವಾದ ವಸ್ತುಗಳನ್ನು ಗಮನಿಸಿ ಉಡುಗೊರೆ ಕೊಡುವುದು ಉಚಿತ. ಭವಿಷ್ಯದ ಬದಲಾವಣೆಗಳ ಬಗ್ಗೆ ಹೆಚ್ಚು ಆಸಕ್ತರಾಗಿರುತ್ತಾರೆ. ವಿಜ್ಞಾನ, ತಂತ್ರಜ್ಞಾನ ಮತ್ತು ರಾಜಕೀಯ ಬದಲಾವಣೆಗಳನ್ನು ಗಮನಿಸುತ್ತಿರುತ್ತಾರೆ. ಪ್ರೀತಿಸಿದ ವ್ಯಕ್ತಿಯೊಂದಿಗೆ ಸಂಜೆ ವಿಹಾರಕ್ಕೆ ತೆರಳಿ ಮನಬಿಚ್ಚಿ ಮಾತನಾಡಿದಲ್ಲಿ ತುಂಬಾ ಸಂತೋಷವಾಗುತ್ತದೆ.ಏಕಾಂಗಿಯಾಗಿರಲು ಇಷ್ಟಪಡದೆ ಸದಾ ಗುಂಪಿನಲ್ಲಿರಲು ಬಯಸುತ್ತಾರೆ. ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳುವ ಯೋಗವಿದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆಯಿರಲ ಅಪಘಾತವಾಗುವ ಸಾಧ್ಯತೆಗಳು ಹೆಚ್ಚು. 
 
ಮೀನ: ಈ ರಾಶಿಯ ವ್ಯಕ್ತಿಗಳು ಸೂಕ್ಷ್ಮಮತಿಯರಾಗಿರುತ್ತಾರೆ. ಇತರರು ತಮಗೆ ಇಷ್ಟವಾದ ಉಡುಗೊರೆಯನ್ನು ನೀಡಬೇಕು ಎಂದು ಬಯಸುತ್ತಾರೆ. ಕಡಿಮೆ ಮೌಲ್ಯದ ವಸ್ತುಗಳನ್ನು ಬಯಸುವುದರಿಂದ ಇತರರಿಗೆ ತೊಂದರೆಯಾಗುವುದಿಲ್ಲ. ವರ್ಷದ ಆರಂಭದಿಂದ ಅಂತ್ಯದವರೆಗೆ ಶುಭಫಲಗಳು ದೊರೆಯಲಿವೆ. ಗೆಳೆಯರನ್ನು ನಂಬಿ ಮೋಸಹೋಗಬೇಡಿ, ದುಂದು ವೆಚ್ಚ ಸಲ್ಲದು. ಮುಂದಿನ ದಿನಗಳಲ್ಲಿ ಹಣಕಾಸಿನ ವ್ಯವಹಾರದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ. ಅವಿವಾಹಿತರಿಗೆ ಶೀಘ್ರದಲ್ಲಿ ವಿವಾಹಯೋಗವಿದೆ. ನಿರುದ್ಯೋಗಿಗಳಿಗೆ ದೂರದ ಉರಿನಿಂದ ಉದ್ಯೋಗವಕಾಶಗಳು ದೊರೆಯಲಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾರ್ಯ ಸಿದ್ಧಿಯಾಗಬೇಕಾದರೆ ಗಣಪತಿಯ ಈ ಸ್ತೋತ್ರ ಪಠಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ತುಳಸಿ ಪೂಜೆ ಮಾಡುವುದರಿಂದ ನಿಮ್ಮ ಈ ಸಂಕಷ್ಟ ದೂರವಾಗುತ್ತದೆ

ದೈವಿಕ ಕೃಪೆಯನ್ನು ಸಿದ್ಧಿಸಲು ಈ ಮಂತ್ರವನ್ನು ಪಠಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments