ಬೆಂಗಳೂರು: ಭಗವಂತನಿಗೆ ನಾವು ಮಾಡುವ ವಿವಿಧ ಆರತಿಯಿಂದ ಸಂತುಷ್ಠನಾಗುತ್ತಾನೆಂಬ ನಂಬಿಕೆಯಿದೆ. ಯಾವ ಯಾವ ಆರತಿ ಮಾಡಿದರೆ ಏನು ಫಲ ನೋಡೋಣ. ಏಕಾರತಿ: ಮಾಡುವುದರಿಂದ ಪೂಜೆಯ ಪೂರ್ಣ ಫಲ ದೊರೆಯುತ್ತದೆ. ದ್ವಿ ಆರತಿ: ಮಾಡುವುದರಿಂದ ದಾಂಪತ್ಯ ಸುಖ ಸಿಗುತ್ತದೆ. ತ್ರಯ ಆರತಿ: ಮಾಡುವುದರಿಂದ ಕುಟುಂಬ ಅಭಿವೃದ್ಧಿಯಾಗುತ್ತದೆ. ಪಂಚ ಆರತಿ: ಸಸ್ಯ ವೃದ್ಧಿ ಆಗುತ್ತದೆ. ನವ ಆರತಿ: ಇಡೀ ವರ್ಷ ವೃದ್ಧಿ ಫಲ ದೊರೆಯುತ್ತದೆ. ಏಕಾದಶಿ ಆರತಿ: ಮಹಾಲಕ್ಷ್ಮಿ ಸುಪ್ರೀತಳಾಗುತ್ತಾಳೆ. ದ್ವಾದಶ ಆರತಿ: ಸುಖ ನೆಮ್ಮದಿ ಪ್ರಾಪ್ತಿ. ಷೋಡಶ ಆರತಿ: ವಿಶೇಷ ಧನಲಾಭ ಏಕವಿಂಶತಿ ಆರತಿ; ರಾಜ್ಯ ಲಾಭ ದೊರೆಯುತ್ತದೆ. ಚತುರ್ವಿಂಶತಿ ಆರತಿ: ಉತ್ತಮ ಬೆಳೆ, ಮಳೆ ದೊರೆಯುತ್ತದೆ. ನಕ್ಷತ್ರ ಆರತಿ: ಸಕಲ ದೇವತೆಗಳ ಅನುಗ್ರಹ ಲಭಿಸುತ್ತದೆ. ನಾಗ ಆರತಿ: ಸಂತಾನ ವೃದ್ಧಿಗೆ ಕೂರ್ಮ ಆರತಿ: ಧೈರ್ಯ, ಸ್ಥೈರ್ಯ ಉಂಟಾಗುತ್ತದೆ. ಅಷ್ಟೋತ್ತರ ಶತದೀಪ ಆರತಿ: ಲಕ್ಷ್ಮೀನಾರಾಯಣನ ಕೃಪಾಕಟಾಕ್ಷ ದೊರೆಯುತ್ತದೆ. ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.