ಮನೆಯಿಂದ ಹೊರಹೋಗುವಾಗ ಇವುಗಳನ್ನು ಕಂಡರೆ ನಿಮ್ಮ ಕೆಲಸ ಯಶಸ್ವಿಯಾಗುತ್ತದೆ

Webdunia
ಮಂಗಳವಾರ, 2 ಜನವರಿ 2024 (08:52 IST)
ಬೆಂಗಳೂರು: ಮನೆಯಿಂದ ಹೊರಹೋಗುವಾಗ ಎಲ್ಲಿಗೆ ಎಂದು ಕೇಳಬಾರದು ಎನ್ನುತ್ತಾರೆ. ಹಾಗೆ ಕೇಳಿದರೆ ಕೆಲಸ ಕೆಡುತ್ತದೆ ಎನ್ನುವುದು ನಮ್ಮ ನಂಬಿಕೆ. ಅದೇ ರೀತಿ ಮನೆಯಿಂದ ಹೊರಹೋಗುವಾಗ ಯಾವ ಸಮಯ ಉತ್ತಮ ಮತ್ತು ಯಾವ ಕೆಲವು ವಸ್ತು, ವಿಚಾರಗಳನ್ನು ನೋಡಿದರೆ ಶುಭ ಎಂದು ನೋಡೋಣ.

ಶುಭ ಕೆಲಸಕ್ಕೆ ಯಾವತ್ತೂ ಅಪರಾಹ್ನದ ಮೊದಲು ಅಂದರೆ ಬೆಳಗ್ಗಿನ ಅವಧಿಯಲ್ಲಿ ಮನೆಯಿಂದ ಹೊರಟರೆ ಉತ್ತಮ. ಅದೇ ರೀತಿ ಮನೆಯಿಂದ ಹೊರಹೋಗುವಾಗ ಈ ಕೆಲವು ವಿಚಾರಗಳು ಅಥವಾ ವಸ್ತುಗಳನ್ನು ನೋಡಿದರೆ ನಿಮ್ಮ ಕಾರ್ಯಸಿದ್ಧಿಯಾದಂತೆಯೇ ಲೆಕ್ಕ.

ಮನೆಯಿಂದ ಹೊರಹೋಗುವಾಗ ಹಾಲು, ಕರುವಿನ ಜೊತೆಗಿರುವ ಹಸು ಇರುವುದನ್ನು ನೋಡಿದರೆ ಶುಭ. ಅದರಲ್ಲೂ ಮದುವೆ ವಿಚಾರಕ್ಕೆ ಹೊರಹೋಗುವಾಗ ಕರು ತನ್ನ ತಾಯಿ ಹಸುವಿನ ಹಾಲು ಕುಡಿಯುವುದನ್ನು ನೋಡಿದರೆ ತುಂಬಾ ಶುಭಪ್ರದ. ಅದೇ ರೀತಿ ಜೇನುತುಪ್ಪ ನೋಡಿದರೆ ಕೆಲಸ ಯಶಸ್ವಿಯಾಗುತ್ತದೆ.

ಮಸಣದತ್ತ ಹೋಗುವ ಮೃತಶರೀರವೂ ನಮಗೆ ಶುಭಪ್ರದ ಎಂದರೆ ನೀವು ನಂಬಲೇಬೇಕು! ಅಷ್ಟೇ ಅಲ್ಲ, ಮನೆಯಿಂದ ಹೊರಹೋಗುವ ವೇಳೆಗೆ ಯಾರಾದರೂ ಸನ್ಯಾಸಿಗಳು ಬಂದು ಏನಾದರೂ ಬೇಡಿದರೆ ಅವರಿಗೆ ದಾನ ಮಾಡಿ ಕಳುಹಿಸಿದರೆ ನಿಮ್ಮ ಕೆಲಸ ಯಶಸ್ವಿಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments