ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

Webdunia
ಮಂಗಳವಾರ, 27 ಆಗಸ್ಟ್ 2019 (08:39 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ತಾತ್ಕಾಲಿಕ ಉದ್ಯೋಗಿಗಳಿಗೆ ಹುದ್ದೆ ಖಾಯಂ ಆಗುವುದು. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯಿರುತ್ತದೆ. ಆದರೆ ಅನಗತ್ಯ ವಿಚಾರಗಳಿಂದ ಮನಸ್ಸಿಗೆ ಗೊಂದಲ ಮಾಡಿಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ಆಲಸ್ಯತನ ಕಂಡುಬರಬಹುದು. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಆರೋಗ್ಯದಲ್ಲಿ ತುಸು ಚೇತರಿಕೆ ಕಂಡುಬಂದು ಮನಸ್ಸಿಗೆ ನೆಮ್ಮದಿಯಾಗುವುದು. ಸಾಂಸಾರಿಕವಾಗಿ ಕಷ್ಟದ ಸಮಯದಲ್ಲಿ ಸಂಗಾತಿಯಿಂದ ಸೂಕ್ತ ಸಲಹೆ ಸಿಗುವುದು. ನಿರುದ್ಯೋಗಿಗಳು ಕೆಲವು ದಿನ ಕಾಯಬೇಕಾಗುತ್ತದೆ. ದಿನದಂತ್ಯಕ್ಕೆ ಅಚ್ಚರಿಯ ವಾರ್ತೆಯಿದೆ.

ಮಿಥುನ: ಕಾರ್ಯದೊತ್ತಡದಿಂದ ಮನಸ್ಸಿಗೆ ಬೇಸರ, ದೇಹ ಹೈರಾಣಾಗುವುದು. ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಸಾಂಸಾರಿಕವಾಗಿ ಕೆಲವೊಂದು ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಖರ್ಚು ವೆಚ್ಚದ ಬಗ್ಗೆ ಕಾಳಜಿ ವಹಿಸಿ.

ಕರ್ಕಟಕ: ದೈವಾನುಕೂಲದಿಂದ ಇಂದು ನೀವು ಕೈ ಹಿಡಿದ ಕಾರ್ಯಗಳು ಸುಗಮವಾಗಿ ನೆರವೇರುವುದು. ಬಂಧು ಮಿತ್ರರ ಆಗಮನದಿಂದ ಮನಸ್ಸಿಗೆ ಸಂತಸವಾಗುವುದು. ಕಾರ್ಯನಿಮಿತ್ತವಾಗಿ ಅನಿರೀಕ್ಷಿತವಾಗಿ ದೂರ ಸಂಚಾರ ಮಾಡಬೇಕಾಗಿ ಬರುತ್ತದೆ.

ಸಿಂಹ: ವೃತ್ತಿರಂಗದಲ್ಲಿ ಒಂದಲ್ಲ ಒಂದು ರೀತಿಯ ಕಿರಿ ಕಿರಿ ತಪ್ಪದು. ಹಿತ ಶತ್ರುಗಳು ಬೆನ್ನ ಹಿಂದೆಯೇ ಇರುತ್ತಾರೆ. ಎಚ್ಚರಿಕೆಯಿಂದಿರಬೇಕಾಗುತ್ತದೆ. ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.

ಕನ್ಯಾ: ಸಾಮಾಜಿಕವಾಗಿ ನಿಮ್ಮ ಕೆಲಸಗಳಿಂದ ಗೌರವ ಸಂಪಾದಿಸಲಿದ್ದೀರಿ. ಅಧಿಕಾರಿ ವರ್ಗದವರಿಗೆ ವರ್ಗಾವಣೆ ಭೀತಿಯಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಅಗತ್ಯ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ತುಲಾ: ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಮುನ್ನಡೆ ತೋರಿಬರಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ತಯಾರಿ ನಡೆಸಲಿದ್ದೀರಿ. ವಿದ್ಯಾರ್ಥಿಗಳಿಗೆ ನಿರಾಸೆಯ ಸುದ್ದಿ ಕಾದಿದೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ದೊರಕುವುದು. ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡಬೇಡಿ.

ವೃಶ್ಚಿಕ: ಹೆಚ್ಚಿನ ದೈವಾನುಕೂಲ ನಿಮ್ಮ ಮೇಲಿದ್ದು, ಆರ್ಥಿಕವಾಗಿ ಹಂತ ಹಂತವಾಗಿ ಚೇತರಿಕೆ, ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ತೋರಿಬರಲಿದೆ. ಸಂತಾನಾಪೇಕ್ಷಿತ ದಂಪತಿಗಳಿಗೆ ಶುಭ ಸೂಚಕ ಫಲ ದೊರೆಯಲಿದೆ. ಆರೋಗ್ಯದದಲ್ಲಿ ಏರುಪೇರಾಗಬಹುದು. ಎಚ್ಚರಿಕೆ ಅಗತ್ಯ.

ಧನು: ನಿಮ್ಮ ಹಿತಶತ್ರುಗಳಿಂದಾಗಿ ಮಿತ್ರರೊಂದಿಗೆ ಕಲಹವಾದೀತು. ತಾಳ್ಮೆಯಿಂದಿರುವುದು ಮುಖ್ಯ. ಆರ್ಥಿಕವಾಗಿ ಸಕಾಲದಲ್ಲಿ ನೆರವು ದೊರಕುತ್ತದೆ. ಸಾಲಗಳು ಪಾವತಿಯಾಗಲಿವೆ. ನಿಮ್ಮ ಕ್ರಿಯಾಶೀಲತೆ ಪ್ರಶಂಸೆಗೊಳಗಾಗಲಿದೆ. ಆತ್ಮವಿಶ್ವಾಸದಿಂದ ಮುಂದುವರಿಯಿರಿ.

ಮಕರ: ಸಂಗಾತಿಯೊಂದಿಗಿದ್ದ ಮುನಿಸು ದೂರವಾಗುವುದು. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸುವಿರಿ. ಆದರೆ ಅತಿಯಾಗಿ ಯಾರನ್ನೂ ನಂಬಲು ಹೋಗಬೇಡಿ. ಅವಿವಾಹಿತರಿಗೆ ವೈವಾಹಿಕ ಪ್ರಸ್ತಾಪಗಳು ಬರಲಿವೆ. ದೇವತಾ ಪ್ರಾರ್ಥನೆ ಮಾಡಿ.

ಕುಂಭ: ಭಾವುಕರಾಗಿ ಯೋಚನೆ ಮಾಡುವುದರಿಂದ ಮಾನಸಿಕವಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಂಗಾತಿಯೊಂದಿಗೆ ಮನಸ್ತಾಪಗಳಾಗಬಹುದು. ಕಾರ್ಯಕ್ಷೇತ್ರದಲ್ಲಿ ಅಧಿಕ ಕಾರ್ಯದೊತ್ತಡವಿರುತ್ತದೆ. ಆದರೆ ಎಲ್ಲವೂ ನಿಮ್ಮ ನಿರೀಕ್ಷೆಯಂತೇ ನಡೆಯುವುದರಿಂದ ಚಿಂತೆ ಬೇಡ.

ಮೀನ: ಸಾಮಾಜಿಕವಾಗಿ ಉನ್ನತ ಸ್ಥಾನ ತಲುಪಲಿದ್ದೀರಿ. ಸಾಂಸಾರಿಕ ಸಮಸ್ಯೆಗಳು ನಿವಾರಣೆಯಾಗಲಿವೆ. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡುವಿರಿ. ಆಸ್ತಿ ವಿವಾದಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೇವಿ ಅಪಾರಜಿತ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಸೋಮವಾರ ಶಿವನ ಕುರಿತ ಈ ಸ್ತೋತ್ರವನ್ನು ತಪ್ಪದೇ ಓದಿ

ಮನೆಯಲ್ಲಿ ಶಂಖ ಊದುತ್ತಿದ್ದರೆ ತಿಳಿದುಕೊಳ್ಳಬೇಕಾದ ಅಂಶಗಳು

ಶನಿ ಅಷ್ಟೋತ್ತರ ಶತನಾಮಾವಳಿ ಸ್ತೋತ್ರ

ಶುಕ್ರವಾರ ಈ ವಸ್ತುಗಳನ್ನು ಮನೆಗೆ ತರಬೇಡಿ

ಮುಂದಿನ ಸುದ್ದಿ
Show comments