Webdunia - Bharat's app for daily news and videos

Install App

ಗುರುಬಲವೊಂದಿದ್ದರೆ ಸಾಕು ನಿಮ್ಮ ಇಷ್ಠಾರ್ಥ ಸಿದ್ದಿಯಾಗುತ್ತದೆ

Webdunia
ಮಂಗಳವಾರ, 4 ಅಕ್ಟೋಬರ್ 2016 (14:06 IST)
ಪರಮೇಶ್ವರ ಶೃಂಗೇರಿ
 
ಪ್ರತಿಯೊಬ್ಬನಿಗೂ ಗುರು ಬಲವೆಂಬುದು ಒಂದು ವಿಶಿಷ್ಟವಾದ ಸಾಧನೆಗೆ ಪೂರಕವಾದ ಅಂಶ. ಧನಕಾರಕ, ಜ್ಞಾನಕಾರಕ, ಪುತ್ರಕಾರನೂ ಆದ ಗುರುವು ಮಾನವನ ಜೀವನದ ಪ್ರಮುಖ ಅಂಶಗಳನ್ನು ನಿರ್ಣಯಿಸುವ ಪ್ರಭಾವಿ ಗ್ರಹವೆಂದರೂ ತಪ್ಪಲ್ಲ.ಹಾಗಾಗಿ ಗುರುವು ಜಾತಕದ ಕೇಂದ್ರಸ್ಥಾನವೆಂದು ಕರೆಯಲ್ಪಡುವ ಲಗ್ನ,ಚತುರ್ಥ,ಸಪ್ತಮ,ದಶಮ ಭಾವಗಳಲ್ಲಿ ಇದ್ದರೆ ಎಲ್ಲಾ ಬಗೆಯ ದೋಷವನ್ನೂ ನಾಶಮಾಡುತ್ತಾನೆ ಎಂಬ ಅಭಿಪ್ರಾಯ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ವ್ಯಕ್ತವಾಗಿವೆ.
 
ಲಗ್ನದಲ್ಲಿ ಗುರುವಿದ್ದರೆ ಜಾತಕನು ಸೌಂದರ್ಯವಂತನೂ,ದಾನ ಧರ್ಮಾದಿಗಳಲ್ಲಿ ಆಸಕ್ತಿ ಹೊಂದಿದವನೂ ಆಗಿದ್ದು, ದೀರ್ಘಾಯಸ್ಸು ಹೊಂದುವುದರ ಜೊತೆಗೆ ಸುಖಜೀವನ ನಡೆಸುತ್ತಾನೆ.ಅದೇ ರೀತಿ ದ್ವಿತೀಯದಲ್ಲಿದ್ದಾಗ ಸದ್ವಿಚಾರವಂತನೂ,ವಾಕ್ಚಾತುರ್ಯ ಹೊಂದಿದವನೂ,ಧನವಂತನೂ ಆಗಿದ್ದು ಶಾಸ್ತ್ರಗಳ ಅಧ್ಯಯನ ತತ್ಪರನಾಗಿರುತ್ತಾನೆ. ತೃತೀಯದಲ್ಲಿ ಗುರುವಿದ್ದರೆ ಉತ್ತಮ ಸಹೋದರನನ್ನು ಹೊಂದಿದ್ದರೂ ಪಾಪಕರ್ಮಗಳಲ್ಲಿ ನಿರತನಾಗಿದ್ದು ಜ್ಞಾನಹೀನನೂ, ಜಿಪುಣನೂ ಆಗುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ. ಚತುರ್ಥದಲ್ಲಿ ಗುರುವಿದ್ದರೆ ಎಲ್ಲಾ ಬಗೆಯ ಪ್ರಾಪಂಚಿಕ ಸುಖ ಹೊಂದುವವನೂ,ತಾಯಿ,ಸಂಬಂಧಿಕರಲ್ಲಿ ಪ್ರೀತಿ ಉಳ್ಳವನೂ ಆಗುತ್ತಾನೆ.
 
ಪಂಚಮದಲ್ಲಿ ಗುರುವಿದ್ದಾಗ ಸಮಾಜದಲ್ಲಿ ಉತ್ತಮಸ್ಥಾನ ಗಳಿಸುವುದರ ಜೊತೆಗೆ ಉನ್ನತ ಅಧಿಕಾರವನ್ನು ಅನುಭವಿಸುತ್ತಾನೆ.ಆದರೆ ಪುತ್ರ ವರ್ಗದಿಂದ ಅತಿಶಯವಾದ ದುಃಖ ಅನುಭವಿಸುತ್ತಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Anjaneya Mantra: ಶನಿದೋಷವಿದ್ದವರು ಆಂಜನೇಯನ ಈ ಸ್ತೋತ್ರವನ್ನು ಓದಿ

Lakshmi Mantra: ಮನಸ್ಸಿನ ಭಯ ದೂರ ಮಾಡಲು ಧೈರ್ಯ ಲಕ್ಷ್ಮಿ ಸ್ತೋತ್ರ ಇಲ್ಲಿದೆ ನೋಡಿ

Vishnu Mantra: ಶ್ರೀ ವಿಷ್ಣು ಅಷ್ಟೋತ್ತರ ನಾಮಾವಳಿ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಓದಿ

Lakshmi Mantra: ರಾಜ್ಯದಲ್ಲಿ ಸರಾಸರಿ ಗರಿಷ್ಠ ತಾಪಮಾನ 34 ಡಿಗ್ರಿಯಷ್ಟಿರಲಿದೆ ಎಂದು ವರದಿಗಳು ಹೇಳುತ್ತಿವೆ.

Subramanya mantra: ನಾಗದೋಷ, ವಿವಾಹಕ್ಕೆ ಸಮಸ್ಯೆಯಾಗಿದ್ದ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments