Webdunia - Bharat's app for daily news and videos

Install App

ನಿಂದನೆ ಮಾತಿಗೆ ಈ ರೀತಿ ಪ್ರತಿಕ್ರಿಯಿಸಿದರೆ ಅದು ನಮ್ಮ ಮೇಲೆ ಪರಿಣಾಮ ಬೀರದು!

Webdunia
ಮಂಗಳವಾರ, 19 ಫೆಬ್ರವರಿ 2019 (09:08 IST)
ಬೆಂಗಳೂರು: ನಿಂದನೆ ಎನ್ನುವುದು ಲೋಕಾರೂಢಿ. ನಿಂದಕರಿರಬೇಕು ಜಗದೊಳಗೆ ಎಂಬ ಮಾತಿಲ್ಲವೇ? ಹಾಗಾಗಿ ಯಾರಾದರೂ ನಮ್ಮನ್ನು ನಿಂದಿಸಿದರೆ ಅದನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎನ್ನುವುದರ ಮೇಲೆ ಅದರ ಪರಿಣಾಮ ನಮ್ಮ ಮೇಲೆ ಎಷ್ಟು ಬೀರುತ್ತದೆ ಎಂಬುದು ನಿರ್ಧಾರವಾಗುತ್ತದೆ.


ಬೈದಾಗ, ಹಂಗಿಸಿದಾಗ, ಅವಮಾನಿಸಿದಾಗ ಹೀಗೊಂದು ಮನಸ್ಥಿತಿಯನ್ನು ರೂಢಿಸಿಕೊಂಡರೆ ಜಗತ್ತನ್ನೇ ಗೆಲ್ಲಬಹುದು. ಅದಕ್ಕೆ ಮನಸ್ಸಿಗೆ ಒಂದು ಶಿಕ್ಷಣವನ್ನು ಹಾಕಿಕೊಳ್ಳಬೇಕು. ಅದು ಹೇಗೆ? ಇಲ್ಲಿ ನೋಡಿ.

ನಿಂದೆಯ ಪ್ರಕ್ರಿಯೆಯನ್ನು ಎರಡು ರೀತಿಯಲ್ಲಿ ಇಟ್ಟುಕೊಳ್ಳಬೇಕು. ಮೊದಲನೆಯದು, ನಿಂದೆಯ ಅಂಶಗಳು ನಮಗೆ ಹೊಂದುತ್ತದೆಯೇ ಎಂದು ಪರಿಶೀಲಿಸಬೇಕು. ಹೊಂದಿಕೊಳ್ಳುತ್ತಿದೆಯಾದರೆ ಅದು ನಿಂದನೆ ಅಲ್ಲ, ಜೀವನ ಮಾರ್ಗದರ್ಶನ ಎಂದುಕೊಳ್ಳಬೇಕು.

ಎರಡನೆಯದು, ನಿಂದೆ ಹೊಂದಿಕೊಳ್ಳದಿದ್ದರೆ ಅದು ನಿಂದಿಸಿದವರ ತಪ್ಪು ಗ್ರಹಿಕೆ. ಅವನಿಗಿನ್ನೂ ನಮ್ಮ ವ್ಯಕ್ತಿತ್ವದ ಅರಿವು ಸಿಕ್ಕಿಲ್ಲ ಎಂದರ್ಥ. ಸಾಧ್ಯವಾದರೆ ಅವನಿಗೆ ನಮ್ಮ ವ್ಯಕ್ತಿತ್ವದ ಪರಿಚಯ ಮಾಡಿಸೋಣ. ಇಲ್ಲವಾದರೆ ಅಯ್ಯೋ ಪಾಪ ಎಂದುಕೊಳ್ಳೋಣ. ಈ ಎರಡು ಮಾರ್ಗ ಅನುಸರಿಸಿದರೆ ಮನಸ್ಸು ಎಂದೂ ಕುಗ್ಗದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

Durga Mantra: ದುರ್ಗಾ ಚಾಲೀಸ ಮಂತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

Shiva Mantra: ಶಿವನ ದ್ವಾದಶ ಲಿಂಗ ಸ್ತೋತ್ರ ತಪ್ಪದೇ ಇಂದು ಓದಿ

Shani chalisa: ಶನಿ ಚಾಲೀಸಾ ಕನ್ನಡದಲ್ಲಿ ಇಲ್ಲಿದೆ, ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments