ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 27 ಆಗಸ್ಟ್ 2023 (06:30 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಒಂದೇ ವಿಷಯದ ಬಗ್ಗೆ ಮನಸ್ಸಿನಲ್ಲಿ ಯೋಚನೆಗಳು ಕಾಡುತ್ತಿರುತ್ತವೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಗದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಕೌಟುಂಬಿಕವಾಗಿ ಕೆಲವು ಭಿನ್ನಾಭಿಪ್ರಾಯಗಳು ಕಂಡುಬಂದೀತು. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿ ಬೇಡ. ಹೊಸ ಕೆಲಸಗಳಿಗೆ ಕೈ ಹಾಕುವಾಗ ವಿಘ್ನಗಳು ಸಾಮಾನ್ಯ. ತಾಳ್ಮೆಯಿಂದ ಮುನ್ನಡೆಯಿರಿ.

ಮಿಥುನ: ಹೊಸದಾಗಿ ಕೆಲಸಕ್ಕೆ ಸೇರಿಕೊಂಡಿದ್ದವರಿಗೆ ಸವಾಲುಗಳು ಎದುರಾದೀತು. ಕೌಟುಂಬಿಕ ಸಂಘರ್ಷಗಳಿಗೆ ರಾಜೀ ಸಂಧಾನ ಸೂತ್ರಕ್ಕೆ ಮೊರೆ ಹೋಗಲಿದ್ದೀರಿ. ನೆರೆಹೊರೆಯವರಿಂದ ಸಹಾಯವೊದಗಿಬರಲಿದೆ.

ಕರ್ಕಟಕ: ಬಹಳ ದಿನಗಳ ನಂತರ ಆತ್ಮೀಯರನ್ನು ಭೇಟಿಯಾದ ಸಂತೋಷ ನಿಮ್ಮದಾಗಲಿದೆ. ಇಷ್ಟಮಿತ್ರರೊಂದಿಗೆ ಸಮಯ ಕಳೆಯುವ ಯೋಗ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ದರೆ ಆರೋಗ್ಯ ಸಮಸ್ಯೆಯಾದೀತು.

ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಮುನ್ನಡೆಗೆ ಕೆಲವು ಕ್ರಮಗಳನ್ನು ಕೈಗೊಳ್ಳಲಿದ್ದೀರಿ. ಮಹಿಳೆಯರಿಗೆ ಉದರ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಮಕ್ಕಳ ಸಂತೋಷದಲ್ಲಿ ಭಾಗಿಯಾಗಲಿದ್ದೀರಿ.

ಕನ್ಯಾ: ಸಹೋದರಾದಿ ಸಂಬಂಧಿಗಳಿಗೆ ಹಿತೋಪದೇಶ ಮಾಡುವಿರಿ. ಹಣಕಾಸಿನ ಹರಿವಿಗೆ ತೊಂದರೆಯಾಗದು. ಹೂಡಿಕೆ ವ್ಯವಹಾರಗಳಲ್ಲಿ ಲಾಭ ಕಂಡುಕೊಳ್ಳಲಿದ್ದೀರಿ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವ ಯೋಗ.

ತುಲಾ: ನಿರುದ್ಯೋಗಿಗಳಿಗೆ ಎಷ್ಟೇ ಪ್ರಯತ್ನಪಟ್ಟರೂ ಬಯಸಿದ ಉದ್ಯೋಗ ಸಿಗುತ್ತಿಲ್ಲವೆಂದು ನಿರಾಸೆ ಕಾಡೀತು. ವ್ಯಾಪಾರಿಗಳಿಗೆ ಆರ್ಥಿಕವಾಗಿ ಮುನ್ನಡೆ ಕಂಡುಬರಲಿದೆ. ದಿನದಂತ್ಯಕ್ಕೆ ಸಂತೋಷದಾಯಕ ಸುದ್ದಿ.

ವೃಶ್ಚಿಕ: ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಸುಧಾರಣೆಗೆ ಮುಂದಾಗಲಿದ್ದೀರಿ. ಕ್ರಿಯಾತ್ಮಕ ಯೋಜನೆಗಳು ಫಲಗೂಡಲಿವೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ.

ಧನು: ಇಷ್ಟ ವಸ್ತು ಖರೀದಿಗೆ ಖರ್ಚು ವೆಚ್ಚ ಮಾಡಿದರೂ ಬಳಿಕ ಖರ್ಚಿನ ಬಗ್ಗೆ ಚಿಂತೆ ಮಾಡಲಿದ್ದೀರಿ. ನೆರೆಹೊರೆಯವರಿಂದ ಕೇಳಿಬರುವ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಸಂಗಾತಿಯ ಸಲಹೆ ಪಾಲಿಸಿ.

ಮಕರ: ಸರಕಾರೀ ಉದ್ಯೋಗಿಗಳಿಗೆ ಬಿಡುವಿನದ ದಿನದ ಖುಷಿ ಸಿಗುವುದು. ಸ್ವಯಂ ವೃತ್ತಿಯವರು ಲಾಭ ಮಾಡಲು ಹೊಸ ದಾರಿ ಹುಡುಕಿಕೊಳ್ಳಲಿದ್ದೀರಿ. ಸಾಲ ಮರುಪಾವತಿಗೆ ಮುಂದಾಗುವಿರಿ. ದೇವತಾ ಪ್ರಾರ್ಥನೆ ಮಾಡಿ.

ಕುಂಭ: ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾದ ಸಂತೋಷ ಸಿಗುವುದು. ಅನ್ಯರ ವಿಚಾರದಲ್ಲಿ ಮೂಗು ತೂರಿಸಲು ಹೋಗಿ ತೊಂದರೆ ಮೈಮೇಲೆಳೆದುಕೊಳ್ಳಬೇಡಿ.

ಮೀನ: ನಿಮ್ಮ  ವಿವೇಚನೆಗೆ ತಕ್ಕುದಾಗಿ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಅನಗತ್ಯ ಚಿಂತೆ ಬೇಡ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ನವಗ್ರಹ ಪೂಜಾ ಫಲ: ಒಂಬತ್ತು ಗ್ರಹಗಳ ಅನುಗ್ರಹ ಮತ್ತು ಅದ್ಭುತ ಪ್ರಯೋಜನಗಳು

ಕಾಶೀ ವಿಶ್ವನಾಥಾಷ್ಟಕಂ ಸ್ತೋತ್ರ ಇಂದು ತಪ್ಪದೇ ಓದಿ

ಶನಿ ಚಾಲೀಸಾ ಪಠಣದ ಅದ್ಭುತ ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕ ಪ್ರಯೋಜನಗಳು

ಕನಕಧಾರಾ ಸ್ತೋತ್ರ ಓದುವುದರ ಮಹತ್ವ ಗೊತ್ತಾದರೆ ತಪ್ಪದೇ ಓದುತ್ತೀರಿ

ವಿಷ್ಣುಸಹಸ್ರನಾಮ ಓದುವುದರ ಫಲ ತಿಳಿದರೆ ದಂಗಾಗುತ್ತೀರಿ

ಮುಂದಿನ ಸುದ್ದಿ
Show comments