Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 18 ಆಗಸ್ಟ್ 2023 (08:10 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ನಿಮ್ಮ ಬಹುಕಾಲದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಿದ್ದೀರಿ. ನಿರ್ಧಾರ ತೆಗೆದುಕೊಳ್ಳಲು ಗೊಂದಲಗಳು ಕಾಡೀತು. ಸಂಗಾತಿಯೊಂದಿಗೆ ತಾಳ್ಮೆಯಿಂದ ಮಾತುಕತೆ ನಡೆಸಿ.

ವೃಷಭ: ಇಷ್ಟ ವಸ್ತುಗಳ ಖರೀದಿ ಪ್ರಯುಕ್ತ ಖರ್ಚು ವೆಚ್ಚ ಮಾಡಲಿದ್ದೀರಿ. ಮನಸ್ಸಿನ ಮಾತುಗಳಿಗೆ ಅನಿವಾರ್ಯವಾಗಿ ಕಡಿವಾಣ ಹಾಕಬೇಕಾಗುತ್ತದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ವಿವಾಹ ಯೋಗ.

ಮಿಥುನ: ಪ್ರೀತಿ ಪಾತ್ರರು ನಿಮಗಾಗಿ ತಂದಿದ್ದ ವಸ್ತುಗಳು ಬೇರೆಯವರ ಪಾಲಾಗುವ ಸಾಧ‍್ಯತೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗ.

ಕರ್ಕಟಕ: ಕಾರ್ಯರಂಗದಲ್ಲಿ ನಿಮ್ಮ ದಕ್ಷತೆಗೆ ತಕ್ಕ ಮನ್ನಣೆ ಸಿಗಲಿದೆ. ಕ್ರಿಯಾತ್ಮಕ ಕೆಲಸಗಳಿಂದ ಇತರರ ಗಮನ ಸೆಳೆಯಲಿದ್ದೀರಿ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಕಿರು ಸಂಚಾರ ಮಾಡಲಿದ್ದೀರಿ.

ಸಿಂಹ: ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ಷೇರು ವ್ಯವಹಾರಗಳಿಂದ ಲಾಭವಾಗಲಿದೆ. ಸಾಲಗಾರರ ಕಾಟದಿಂದ ಮುಕ್ತಿ ಸಿಗುವುದು. ದಿನದಂತ್ಯಕ್ಕೆ ನೆಮ್ಮದಿ.

ಕನ್ಯಾ: ನಿಮ್ಮ ಮನಸ್ಸಿನ ಬೇಸರ ಕಳೆಯಲು ಹೊಸ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಸಂಗಾತಿಯ ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಅನಿರೀಕ್ಷಿತ ಖರ್ಚು ವೆಚ್ಚಗಳು ಕಂಡುಬರಲಿದೆ. ದೇವತಾ ಪ್ರಾರ್ಥನೆ ಮಾಡಲಿದ್ದೀರಿ.

ತುಲಾ: ನಿಮ್ಮ ಮೆಚ್ಚಿನ ವ್ಯಕ್ತಿಗಳನ್ನು ಭೇಟಿಯಾಗುವ ಯೋಗ. ಪ್ರೀತಿ ಪಾತ್ರರಿಗೆ ಅನಿರೀಕ್ಷಿತ ಉಡುಗೊರೆಗಳ ಮೂಲಕ ಖುಷಿ ನೀಡಲಿದ್ದೀರಿ. ಮನರಂಜನಾ ಕ್ಷೇತ್ರದಲ್ಲಿರುವವರಿಗೆ ಮುನ್ನಡೆಯ ಯೋಗ. ಅನಗತ್ಯ ಚಿಂತೆ ಬೇಡ.

ವೃಶ್ಚಿಕ: ಸಹೋದ್ಯೋಗಿಗಳ ಸಹಕಾರದಿಂದ ಕೆಲಸದಿಂದ ಮುನ್ನಡೆ. ಉದ್ಯೋಗದಲ್ಲಿ ತೃಪ್ತಿಕರ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಯಿರಲಿ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಂಡುಬಂದೀತು.

ಧನು: ಅನಿರೀಕ್ಷಿತ ಶುಭವಾರ್ತೆಗಳು ನಿಮ್ಮ ದಿನವನ್ನು ಉಲ್ಲಾಸದಾಯಕವಾಗಿಸುತ್ತದೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಸಾಂಸಾರಿಕವಾಗಿ ಸುಖ, ಸಮೃದ್ಧಿ ಕಂಡುಬರಲಿದೆ. ದಿನದಂತ್ಯಕ್ಕೆ ನೆಮ್ಮದಿ.

ಮಕರ: ಕೌಟುಂಬಿಕವಾಗಿ ಅತಿಥಿಗಳ ಆಗಮನಕ್ಕೆ ಸಿದ್ಧತೆ ನಡೆಸಲಿದ್ದೀರಿ. ಇಷ್ಟ ಮಿತ್ರರನ್ನು ಭೇಟಿಯಾಗುವ ಯೋಗ. ನಿಮ್ಮ ಧೈರ್ಯವೇ ನಿಮಗೆ ಅಸ್ತ್ರವಾಗಲಿದೆ. ನೆರೆಹೊರೆಯವರಿಂದ ಸಹಾಯ ನಿರೀಕ್ಷಿಸಬಹುದು.

ಕುಂಭ: ಹಣಕಾಸಿನ ವಿಚಾರಗಳಲ್ಲಿ ಹೊಸ ಯೋಜನೆಗಳನ್ನು ಹಾಕಿಕೊಳ್ಳುವ ಮೊದಲು ಸಂಗಾತಿಯ ಸಲಹೆ ಪಾಲಿಸುವುದು ಉತ್ತಮ. ಪಾಲುದಾರಿಕೆ ಕ್ಷೇತ್ರದಲ್ಲಿ ಲಾಭ ಕಂಡುಕೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಶುಭ.

ಮೀನ: ವ್ಯವಹಾರದಲ್ಲಿ ದಾಕ್ಷಿಣ್ಯಕ್ಕೆ ಒಳಗಾಗಬೇಡಿ. ಉದ್ಯಮಿಗಳಿಗೆ ಸಾಲ ಮಾಡಬೇಕಾದ ಅನಿವಾರ್ಯತೆ. ದೇವತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಹಳೆಯ ಮಿತ್ರರ ಸಮಾಗಮವಾಗುವ ಸಾಧ‍್ಯತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿಷ್ಣು ದಶಾವತಾರ ಸ್ತೋತ್ರ ಮತ್ತು ಓದುವುದರ ಫಲವೇನು ನೋಡಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸಂತಾನ ಗಣಪತಿ ಮಂತ್ರ ಕನ್ನಡದಲ್ಲಿ ಇಲ್ಲಿದೆ: ಈ ಸಮಸ್ಯೆಯಿದ್ದವರು ತಪ್ಪದೇ ಓದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Durga Mantra: ದುರ್ಗಾಷ್ಟಕಮ್ ಸ್ತೋತ್ರಂ ಪ್ರತಿನಿತ್ಯ ಪಠಿಸಿ

ಮುಂದಿನ ಸುದ್ದಿ
Show comments