ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 13 ಜುಲೈ 2023 (08:00 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಗುರುಹಿರಿಯರ ಆಶೀರ್ವಾದದಿಂದ ನೀವು ಅಂದುಕೊಂಡಿದ್ದ ಕೆಲಸ ನಡೆಯುವುದು. ಸಾಂಸಾರಿಕವಾಗಿ ನೀವು ಮಾಡುವ ತಪ್ಪುಗಳನ್ನು ತಿದ್ದಿಕೊಳ್ಳಬೇಕಾಗುತ್ತದೆ. ಮಕ್ಕಳಿಂದ ಸಂತೋಷ ಸಿಗುವುದು.

ವೃಷಭ: ಹಣಕಾಸಿನ ವಿಚಾರವಾಗಿ ನಿಮ್ಮ ಇದುವರೆಗಿನ ಕಷ್ಟಗಳು ದೂರವಾಗಲಿದೆ. ಸಂಗಾತಿಯ ಸಹಕಾರ ಸಿಗುವುದು. ಹಿರಿಯರಿಗೆ ದೇಹಾರೋಗ್ಯದಲ್ಲಿ ಸಣ್ಣ ಪುಟ್ಟ ತೊಂದರೆ ಎದುರಾದರೂ ಚಿಂತೆ ಬೇಕಿಲ್ಲ.

ಮಿಥುನ: ಉದ್ಯೋಗ, ವ್ಯವಹಾರ ನಿಮಿತ್ತ ಅಧಿಕ ಓಡಾಟ ನಡೆಸಲಿದ್ದೀರಿ. ಕೈ ಹಿಡಿದ ಕೆಲಸಗಳು ಸುಸ್ರೂತ್ರವಾಗಿ ನಡೆಯಬೇಕಾದರೆ ಕ್ರಿಯಾತ್ಮಕವಾಗಿ ಯೋಚಿಸಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ಕುಟುಂಬದಲ್ಲಿ ಸುಖ, ಸಮೃದ್ಧಿ ಕಂಡುಬರಲಿದೆ. ಇಷ್ಟಭೋಜನ ಮಾಡುವ ಯೋಗವಿದೆ. ಹಳೆಯ ಬಾಕಿ ತೀರಿಸಲಿದ್ದೀರಿ. ಸಂಗಾತಿಯ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಅನಗತ್ಯ ಚಿಂತೆ ಬೇಡ.

ಸಿಂಹ: ಪಾಲು ಬಂಡವಾಳ ಹೂಡಿಕೆ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಹಳೆಯ ಮಿತ್ರರನ್ನು ಭೇಟಿಯಾಗುವ ಯೋಗ. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗಲಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಕನ್ಯಾ: ಹಿಂದಿನ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಿ. ಸಹೋದರಾದಿ ಸಂಬಂಧಿಗಳಿಗೆ ಸಹಾಯ ಮಾಡಿದ ತೃಪ್ತಿ ಕಂಡುಬರಲಿದೆ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿಂದಿರಿ.

ತುಲಾ: ಅಧಿಕ ಕಾರ್ಯದೊತ್ತಡದಿಂದ ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ಸನ್ಮಿತ್ರರ ಸಹಾಯ ದೊರೆಯಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ಪ್ರೇಮಿಗಳಿಗೆ ಸಂತೋಷದ ದಿನ.

ವೃಶ್ಚಿಕ: ನೀವು ಅಂದುಕೊಂಡಿದ್ದ ಕೆಲಸಗಳಿಗೆ ಅಡೆತಡೆಗಳು ಬಂದರೂ ಅಂತಿಮ ಜಯ ನಿಮ್ಮದಾಗಲಿದೆ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಯಿರಲಿ. ಮನೆಯ ವಿಚಾರದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದೀರಿ.

ಧನು: ಮಕ್ಕಳ ಜೀವನದ ವಿಚಾರವಾಗಿ ಸಂತೋಷದಾಯಕ ಸುದ್ದಿ ಕೇಳಿಬರಲಿದೆ. ವಿದ್ಯಾರ್ಥಿಗಳಿಗೆ ಕೆಲವು ಅಡೆತಡೆಗಳು ಎದುರಾದೀತು. ಸ್ವಯಂ ವೃತ್ತಿಯವರಿಗೆ ಆರ್ಥಿಕವಾಗಿ ಲಾಭ ಮಾಡಿಕೊಳ್ಳಲು ಅವಕಾಶ ಸಿಗುವುದು.

ಮಕರ: ಹೊಸ ಕೆಲಸಕ್ಕೆ ಕೈಹಾಕುವಾಗ ಹಣಕಾಸಿನ ಕೊರತೆ ಕಂಡುಬಂದೀತು. ಸಂಗಾತಿಯ ಸಮಯೋಚಿತ ಸಲಹೆ ಉಪಯೋಗಕ್ಕೆ ಬರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಕುಲದೇವರ ಪ್ರಾರ್ಥನೆ ಮಾಡಿ.

ಕುಂಭ: ವ್ಯವಹಾರದಲ್ಲಿ ಮುನ್ನಡೆಯಿದ್ದರೂ ಮಾನಸಿಕವಾಗಿ ತೃಪ್ತಿಯಿರದು. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮಪಡಬೇಕಾಗುತ್ತದೆ. ಹಿಂದೆ ನೀವು ಇತರರಿಗೆ ಮಾಡಿದ ಸಹಾಯವೇ ನಿಮ್ಮ ಕೈ ಹಿಡಿಯಲಿದೆ.

ಮೀನ: ಸರಕಾರೀ ಉದ್ಯೋಗಿಗಳಿಗೆ ಕಾರ್ಯದೊತ್ತಡ ಕಂಡುಬರಲಿದೆ. ಹಳೆಯ ಬಾಕಿಗಳನ್ನು ತೀರಿಸಲು ಮುಂದಾಗಲಿದ್ದೀರಿ. ಯೋಗ್ಯ ವಯಸ್ಕರಿಗೆ ಉತ್ತಮ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಾಸವೀ ಕನ್ನಿಕಾ ಪರಮೇಶ್ವರಿ ದೇವಿ ಸ್ತೋತ್ರ

ಗುರುವಾರ ಮಹಾವಿಷ್ಣುವಿನ ಮೂಲ ಮಂತ್ರ ಪಠಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ತಿಳಿದುಕೊಳ್ಳಿ

ಶ್ರೀ ಗಣೇಶ ಕವಚಂ ಸ್ತೋತ್ರ ಪಠಣದ ಅದ್ಭುತ ಪ್ರಯೋಜನಗಳು

ಲಲಿತಾ ಸಹಸ್ರನಾಮ ಓದುವುದರ ಫಲ ತಿಳಿಯಿರಿ, ಯಾವೆಲ್ಲಾ ಸಮಸ್ಯೆಗೆ ಮುಕ್ತಿ ಗೊತ್ತಾ

ನವಗ್ರಹ ಪೂಜಾ ಫಲ: ಒಂಬತ್ತು ಗ್ರಹಗಳ ಅನುಗ್ರಹ ಮತ್ತು ಅದ್ಭುತ ಪ್ರಯೋಜನಗಳು

ಮುಂದಿನ ಸುದ್ದಿ
Show comments