ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶನಿವಾರ, 8 ಜುಲೈ 2023 (08:00 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಕರ್ತವ್ಯ ನಿಷ್ಠೆಯಿಂದ ಮೇಲಧಿಕಾರಿಗಳ ಗಮನ ಸೆಳೆಯಲಿದ್ದೀರಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ದೇಹ ಹೈರಾಣಾದೀತು. ಅತಿಥಿಗಳ ಆಗಮನಕ್ಕೆ ಸಿದ್ಧತೆ ನಡೆಸಲಿದ್ದೀರಿ. ಕಿರು ಸಂಚಾರ ಮಾಡಲಿದ್ದೀರಿ.

ವೃಷಭ: ಉದ್ಯೋಗ, ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರಲಿದೆ. ಗುರುಹಿರಿಯರ ಸಲಹೆಗಳು ಉಪಯೋಗಕ್ಕೆ ಬರಲಿವೆ. ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ. ದಿನದಂತ್ಯಕ್ಕೆ ನೆಮ್ಮದಿಯಾಗುವುದು.

ಮಿಥುನ: ಧನಾದಾಯ ಹೆಚ್ಚಳಕ್ಕೆ ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಮೂರನೆಯವರ ಹಸ್ತಕ್ಷೇಪಕ್ಕೆ ಅವಕಾಶ ಕೊಡಬೇಡಿ. ಪಾಲುದಾರಿಕಾ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ.

ಕರ್ಕಟಕ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಯಿರಲಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಿಂಹ: ನಿಮ್ಮ ಬಹುದಿನಗಳ ಕನಸು ನನಸಾಗಲಿದೆ. ಆರ್ಥಿಕವಾಗಿ ಪರಿಸ್ಥಿತಿ ಸುಧಾರಿಸಲಿದೆ. ಮೆಚ್ಚಿನ ವ್ಯಕ್ತಿಗಳ ಭೇಟಿ ಮನಸ್ಸಿಗೆ ಸಂತೋಷ ನೀಡಲಿದೆ. ರಾಜಕೀಯ ರಂಗದಲ್ಲಿರುವವರಿಗೆ ಕಾರ್ಯದೊತ್ತಡ ಕಂಡುಬಂದೀತು.

ಕನ್ಯಾ: ಬಹಳ ದಿನಗಳ ನಂತರ ಆಪ್ತರನ್ನು ಭೇಟಿಯಾದ ಸಂತೋಷ ನಿಮ್ಮದಾಗಲಿದೆ. ಇಷ್ಟಭೋಜನ ಮಾಡುವ ಯೋಗ. ಮಕ್ಕಳ ಸಂತೋಷದಲ್ಲಿ ಭಾಗಿಯಾಗಲಿದ್ದೀರಿ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.

ತುಲಾ: ನಿಮಗೆ ಎದುರಾಗಿರುವ ಸವಾಲುಗಳಿಗೆ ಕ್ರಿಯಾತ್ಮಕವಾಗಿ ಪರಿಹಾರ ಕಂಡುಕೊಳ್ಳಲಿದ್ದೀರಿ. ಯೋಗ್ಯ ವಯಸ್ಕರಿಗೆ ಉತ್ತಮ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ಅನ್ಯರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ.

ವೃಶ್ಚಿಕ: ಧನಾತ್ಮಕ ವಿಚಾರಗಳು ನಿಮ್ಮ ಮನಸ್ಸಿಗೆ ನೆಮ್ಮದಿ ಕೊಡಲಿವೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ಇಷ್ಟ ಮಿತ್ರರನ್ನು ಭೇಟಿಯಾಗುವ ಯೋಗ. ಕೆಲಸ ಕಾರ್ಯಗಳಲ್ಲಿ ಮುನ್ನಡೆ.

ಧನು: ಕೆಳ ಹಂತದ ನೌಕರರಿಗೆ ಉನ್ನತ ಅವಕಾಶಗಳು ಕಂಡುಬಂದೀತು. ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ನಾಲಿಗೆ ಚಪಲಕ್ಕೆ ಕಡಿವಾಣವಿರಲಿ.

ಮಕರ: ಸರಕಾರೀ ನೌಕರರಿಗೆ ಕಾರ್ಯದೊತ್ತಡ ಕಂಡುಬರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ಮನೆಯಲ್ಲಿ ಇತರ ಸದಸ್ಯರ ಅಭಿಪ್ರಾಯಗಳನ್ನು ಪಡೆದು ಮುಂದುವರಿಯಬೇಕಾಗುತ್ತದೆ.

ಕುಂಭ: ಭೂಮ್ಯಾದಿ ವ್ಯವಹಾರಗಳಿಗೆ ತೊಡಕುಂಟಾದೀತು. ವೈದ್ಯಕೀಯ ವೃತ್ತಿಯವರಿಗೆ ಮುನ್ನಡೆಯ ಯೋಗ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಬಂದಾಗ ಬಳಸಿಕೊಳ್ಳಿ.

ಮೀನ: ನಿಮ್ಮ ಜೀವನದಲ್ಲಿ ಏನನ್ನೋ ಕಳೆದುಕೊಂಡ ಭಾವ ಕಾಡೀತು. ಮನಸ್ಸಿನ ನೆಮ್ಮದಿಗೆ ಕುಲದೇವರ ಪ್ರಾರ್ಥನೆ ಮಾಡಿ. ಉದ್ಯೋಗ ಕ್ಷೇತ್ರದಲ್ಲಿ ಸ‍್ಥಾನ ಪಲ್ಲಟ ಭೀತಿ. ಕೌಟುಂಬಿಕವಾಗಿ ಸಹಕಾರವಿರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮಂಗಳವಾರ ದೇವಿಯ ಅನುಗ್ರಹಕ್ಕಾಗಿ ನವರತ್ನ ಮಾಲಿಕಾ ಸ್ತೋತ್ರ

ಶಿವ ಪಂಚಾಕ್ಷರಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments