ಮೇಷ: ನಿಮ್ಮ ಮನಸ್ಸಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಮಕ್ಕಳ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ.
ವೃಷಭ: ಉದ್ಯೋಗದಲ್ಲಿ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಫಲ ಕಂಡುಬರಲಿದೆ. ಸ್ವಯಂ ವೃತ್ತಿಯವರಿಗೆ ಆರ್ಥಿಕವಾಗಿ ಸುಧಾರಣೆಯಾಗಲು ಅವಕಾಶ. ಯೋಗ್ಯ ವಯಸ್ಕರಿಗೆ ಉತ್ತಮ ವೈವಾಹಿಕ ಸಂಬಂಧಗಳು ಕೂಡಿಬರಲಿದೆ.
ಮಿಥುನ: ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ಕೌಟುಂಬಿಕವಾಗಿ ಅಭಿವೃದ್ಧಿ ನಿರೀಕ್ಷಿಸಬಹುದು. ಮನೆಗೆ ಅನಿರೀಕ್ಷಿತವಾಗಿ ನೆಂಟರಿಷ್ಟರ ಆಗಮನ ಸಾಧ್ಯತೆ.
ಕರ್ಕಟಕ: ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಗುರುಹಿರಿಯರ ಆಶೀರ್ವಾದ ಪಡೆದು ಕೆಲಸ ಕಾರ್ಯಕ್ಕೆ ಕೈ ಹಾಕುವುದು ಉತ್ತಮ. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ಕರೆ ಬರಲಿದೆ.
ಸಿಂಹ: ಆರ್ಥಿಕವಾಗಿ ಸಬಲರಾಗಲು ಅವಕಾಶಗಳು ಸಿಗಲಿವೆ. ಬೇರೆಯವರ ವಿಚಾರದಲ್ಲಿ ಮೂಗು ತೂರಿಸಲು ಹೋಗಿ ತೊಂದರೆಗೆ ಸಿಲುಕಿಕೊಳ್ಳಬೇಡಿ. ದೈವಾನುಗ್ರಹದಿಂದ ಕೈ ಹಿಡಿದ ಕೆಲಸಗಳು ಯಶಸ್ವಿಯಾಗಲಿದೆ.
ಕನ್ಯಾ: ವ್ಯವಹಾರ ನಿಮಿತ್ತ ಪರವೂರಿಗೆ ಸಂಚರಿಸುವ ಅವಕಾಶ ಸಿಗುವುದು. ಇಷ್ಟಾರ್ಥ ಸಿದ್ಧಿಗಾಗಿ ಕುಲದೇವರ ಮೊರೆ ಹೋಗಿದ್ದೀರಿ. ಸಂತಾನಾಪೇಕ್ಷಿತ ದಂಪತಿಗಳಿಗೆ ಶುಭ ಸೂಚನೆಗಳು ದೊರೆತೀತು.
ತುಲಾ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟ ಭೀತಿ. ಮಕ್ಕಳಿಂದ ನಿಮ್ಮ ಗೌರವ ಹೆಚ್ಚಾದೀತು. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಯಿರಲಿ. ಸರಕಾರೀ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ.
ವೃಶ್ಚಿಕ: ನೆರೆಹೊರೆಯವರ ಕಷ್ಟಗಳಿಗೆ ಸ್ಪಂದಿಸಲಿದ್ದೀರಿ. ದೇಹಾರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರಾದೀತು. ಸಾಕುಪ್ರಾಣಿಗಳಿಂದ ತೊಂದರೆಯಾಗುವ ಸಾಧ್ಯತೆ. ಕಿರು ಓಡಾಟ ನಡೆಸಬೇಕಾಗುತ್ತದೆ.
ಧನು: ಬಹಳ ದಿನಗಳ ನಂತರ ಆತ್ಮೀಯರನ್ನು ಭೇಟಿಯಾದ ಸಂತೋಷ ನಿಮ್ಮದಾಗಲಿದೆ. ಇಷ್ಟ ಭೋಜನ ಮಾಡುವ ಯೋಗ. ಹೊಸದಾಗಿ ಮದುವೆಯಾಗಿದ್ದವರಿಗೆ ಸುಂದರ ಕ್ಷಣ ಕಳೆಯುವ ಯೋಗ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಮಕರ: ನಿಮ್ಮಲ್ಲಿರುವ ಕ್ರಿಯಾತ್ಮಕ ಯೋಜನೆಗಳನ್ನು ಜಾರಿಗೆ ತರಲಿದ್ದೀರಿ. ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿ ನಿರೀಕ್ಷಿಸಬಹುದು. ಕಟ್ಟಡ ಕಾಮಗಾರಿ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಚಿಂತೆ ಬೇಡ.
ಕುಂಭ: ಸನ್ಮಿತ್ರರ ಸಹವಾಸದಿಂದ ನಿಮ್ಮ ಗುಣನಡತೆಗಳಲ್ಲಿ ಬದಲಾವಣೆ ಕಂಡುಬಂದೀತು. ದಾಂಪತ್ಯದಲ್ಲಿ ಮಧ್ಯಮ ಸುಖ. ಭೂಮ್ಯಾದಿ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರಲಿದೆ. ಕೆಳ ಹಂತದ ನೌಕರರಿಗೆ ಮುನ್ನಡೆಯ ಯೋಗ.
ಮೀನ: ನಿಮ್ಮ ಕಾರ್ಯಕ್ಷೇತ್ರದಲ್ಲಿ ಎದುರಾಳಿಗಳಿಂದ ಪೈಪೋಟಿ ಎದುರಾಗಲಿದೆ. ಕಾಲಕ್ಕೆ ತಕ್ಕಂತೆ ಕೆಲವು ನಿರ್ಣಯಗಳನ್ನು ಮಾಡಬೇಕಾಗುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ. ದೇವತಾ ಪ್ರಾರ್ಥನೆ ಮಾಡಿ.