ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 26 ಮೇ 2023 (08:00 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ವಾಹನ, ಭೂಮಿ ಪರಭಾರೆ ವಿಚಾರದಲ್ಲಿ ಮುನ್ನಡೆ ಕಂಡುಬರಲಿದೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯವೊದಗಿಬರಲಿದೆ. ದೇಹಾರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರುಗಳಾದೀತು. ತಾಳ್ಮೆಯಿರಲಿ.

ವೃಷಭ: ನೀವು ಬಾಯ್ತಪ್ಪಿ ಆಡುವ ಮಾತು ಸಂಬಂಧಗಳಲ್ಲಿ ಬಿರುಕು ಮೂಡಿಸೀತು. ಮಾತಿನ ಮೇಲೆ ನಿಗಾ ಇರಲಿ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಯೋಗ. ಕಿರು ಸಂಚಾರ ಮಾಡಲಿದ್ದೀರಿ.

ಮಿಥುನ: ಹಿಂದೆ ಮಾಡಿದ್ದ ಹೂಡಿಕೆಗಳು ಉತ್ತಮ ಫಲ ಕೊಡಲಿವೆ. ಸಾಂಸಾರಿಕವಾಗಿ ಸುಂದರ ಕ್ಷಣ ಕಳೆಯುವ ಯೋಗ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕರ್ಕಟಕ: ಬೇರೆಯವರ ಕೆಲಸಕ್ಕಾಗಿ ನೀವು ಪ್ರಯತ್ನ ಮಾಡಲಿದ್ದೀರಿ. ಹಣಕಾಸಿನ ಹರಿವಿಗೆ ತೊಂದರೆಯಿರದು. ಆದರೆ ಅಷ್ಟೇ ಖರ್ಚೂ ಇರಲಿದೆ. ಪ್ರೀತಿ ಪಾತ್ರರನ್ನು ಭೇಟಿ ಮಾಡಲಿದ್ದೀರಿ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.

ಸಿಂಹ: ಉದ್ಯೋಗ, ವ್ಯವಹಾರದಲ್ಲಿ ಲಾಭ ನಿಮ್ಮದಾಗುವುದು. ಕೋರ್ಟು ಕಚೇರಿ ವ್ಯವಹಾರಗಳಿಗೆ ಓಡಾಟ ನಡೆಸಬೇಕಾಗು್ತದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗುವುದು. ಚಿಂತೆ ಬೇಡ.

ಕನ್ಯಾ: ಮನೆಯವರ ಮಾತು ಅಲಕ್ಷ್ಯ ಮಾಡಿದರೆ ಅದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾದೀತು. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಪ್ರೀತಿಗೆ ಪಾತ್ರರಾಗಲಿದ್ದೀರಿ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ.

ತುಲಾ: ಕೌಟುಂಬಿಕವಾಗಿ ಸುಖ,ಸಮೃದ್ಧಿ ಕಂಡುಬರುವುದು. ಹೊಸದಾಗಿ ಮದುವೆಯಾಗಿದ್ದವರಿಗೆ ಸುಂದರ ಕ್ಷಣ ಕಳೆಯುವ ಯೋಗ. ಪಾಲುದಾರಿಕಾ ಕ್ಷೇತ್ರದಲ್ಲಿ ಅನಿರೀಕ್ಷಿತ ಪ್ರಗತಿ ಕಂಡುಬರುವುದು. ಚಿಂತೆ ಬೇಡ.

ವೃಶ್ಚಿಕ: ಅರ್ಧಕ್ಕೇ ನಿಂತ ಕೆಲಸಗಳಿಗೆ ಮರು ಚಾಲನೆ ನೀಡಲಿದ್ದೀರಿ. ಸಕಾಲದಲ್ಲಿ ಹಣಕಾಸಿನ ಸಹಾಯವೊದಗಿ ಬರಲಿರುವುದರಿಂದ ಅನುಕೂಲವಾದೀತು. ವ್ಯಾಪಾರಿಗಳಿಗೆ ಸಾಲಗಾರರ ಕಾಟದಿಂದ ಮುಕ್ತಿ.

ಧನು: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಹಿನ್ನಡೆಯಾದೀತು. ಯಶಸ್ಸಿಗೆ ಪರಿಶ್ರಮ ಇನ್ನೂ ಹೆಚ್ಚು ಪಡಬೇಕಾದ ಅನಿವಾರ್ಯತೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಕಂಡುಬರುವುದು.

ಮಕರ: ಪ್ರಯಾಣ ನಿಮಿತ್ತ ಖರ್ಚು ವೆಚ್ಚಗಳು ಕಂಡುಬಂದೀತು. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ತಕ್ಕಮಟ್ಟಿನ ಯಶಸ್ಸು ಸಿಗಲಿದೆ. ಸಾಲ ಮರುಪಾವತಿ ಚಿಂತೆ ಕಾಡೀತು. ಗುರುಹಿರಿಯರ ಸಲಹೆ ಪಾಲಿಸುವುದು ಉತ್ತಮ.

ಕುಂಭ: ಹಣಕಾಸಿನ ವಿಚಾರವಾಗಿ ಆಪ್ತರೊಂದಿಗೆ ಸಂಘರ್ಷವಾಗದಂತೆ ಎಚ್ಚರಿಕೆ ವಹಿಸಿ. ಮಕ್ಕಳ ಸಂತೋಷದಲ್ಲಿ ಭಾಗಿಯಾಗಲಿದ್ದೀರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.

ಮೀನ: ನಿಮ್ಮ ಒಳ್ಳೆಯತನ ದುರುಪಯೋಗ ಪಡಿಸಿಕೊಳ್ಳುವವರಿರುತ್ತಾರೆ. ಎಚ್ಚರಿಕೆ ಅಗತ್ಯ. ಸರಕಾರೀ ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ. ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟ ಸಾಧ‍್ಯತೆ. ಕುಲದೇವರ ಪ್ರಾರ್ಥನೆ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸುಬ್ರಹ್ಮಣ್ಯನ ಅನುಗ್ರಹಕ್ಕೆ ಈ ಸ್ತೋತ್ರವನ್ನು ಓದಿ

ಅಂಬಾ ಪಂಚರತ್ನ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಗುರುವಾರ ಮಹಾವಿಷ್ಣುವಿನ ಅನುಗ್ರಹಕ್ಕೆ ಈ ಸ್ತೋತ್ರವನ್ನು ತಪ್ಪದೇ ಓದಿ

ಗಣಪತಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಪಠಿಸಿ

ಇಂದು ಚಂದ್ರಗ್ರಹಣ: ಕರ್ನಾಟಕದಲ್ಲಿ ಎಷ್ಟು ಹೊತ್ತು ಗೋಚರ, ಈ ರಾಶಿಗೆ ಲಾಭದಾಯಕ

ಮುಂದಿನ ಸುದ್ದಿ
Show comments