ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 3 ಮೇ 2023 (07:30 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಅನಿವಾರ್ಯ ಕಾರಣಗಳಿಗೆ ಧನ ವ್ಯಯವಾಗಲಿದೆ. ಆಪ್ತರೊಂದಿಗೆ ಅನಗತ್ಯ ಸಂಘರ್ಷ ಬೇಡ. ಇಷ್ಟ ಭೋಜನ ಮಾಡುವ ಯೋಗ. ವ್ಯಾಪಾರಿಗಳಿಗೆ ಕೊಡು-ಕೊಳ್ಳುವ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ.

ವೃಷಭ: ದಂಪತಿಗಳಲ್ಲಿ ಅನುರಾಗ ವೃದ್ಧಿಯಾಗಲಿದೆ. ಅವಿವಾಹಿತರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಮುನ್ನಡೆ ಕಂಡುಬರಲಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಮಿಥುನ: ಹೊಸದಾಗಿ ಆರಂಭಿಸಿದ್ದ ಉದ್ದಿಮೆಯಲ್ಲಿ ಏಳು-ಬೀಳು ಸಾಮಾನ್ಯ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ತಾಳ್ಮೆಯಿರಲಿ. ಸಂಪತ್ತಿನ ಉಳಿಕೆಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ಸರಕಾರೀ ಉದ್ಯೋಗಿಗಳಿಗೆ ಕಾರ್ಯದೊತ್ತಡ ಕಂಡುಬಂದೀತು. ಮೇಲಧಿಕಾರಿಗಳಿಂದ ಒತ್ತಡವಿರಲಿದೆ. ವಾಹನ, ಭೂಮಿ ಖರೀದಿ ಯೋಗ ಸದ್ಯದಲ್ಲೇ ಕೂಡಿಬರುವುದು. ಧನ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ.

ಸಿಂಹ: ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಅನಿರೀಕ್ಷಿತ ಧನಾಗಮನವಾಗಲಿದೆ. ಅವಿವಾಹಿತರಿಗೆ ಉತ್ತಮ ನೆಂಟಸ್ಥಿಕೆ ಕೂಡಿಬರಲಿದೆ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗ.

ಕನ್ಯಾ: ಕಾರ್ಯಕ್ಷೇತ್ರದಲ್ಲಿ ಅಧಿಕ ಕಾರ್ಯದೊತ್ತಡ ಕಂಡುಬರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ. ಹೊಸದಾಗಿ ಮದುವೆಯಾಗಿದ್ದವರಿಗೆ ಸುಂದರ ಕ್ಷಣ ಕಳೆಯುವ ಯೋಗ.

ತುಲಾ: ಉದ್ಯೋಗ, ವ್ಯವಹಾರದಲ್ಲಿ ತಲ್ಲೀನತೆ ಕಂಡುಬರಲಿದೆ. ಪಿತೃ ಸಮಾನರ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಸಾಂಸಾರಿಕವಾಗಿ ನೆಮ್ಮದಿ ಕಂಡುಬರಲಿದೆ. ಅನಗತ್ಯ ಚರ್ಚೆಗೆ ಆಸ್ಪದ ಕೊಡಬೇಡಿ.

ವೃಶ್ಚಿಕ: ಜ್ಞಾನಿಗಳ ಸಂದರ್ಶನ ಮಾಡಲಿದ್ದೀರಿ. ಹೊಸ ಕೆಲಸಗಳಿಗೆ ಕೈ ಹಾಕಲು ಇದು ಸೂಕ್ತ ಕಾಲ. ಹಣಕಾಸಿನ ಹರಿವಿಗೆ ತೊಂದರೆಯಾಗದು. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಕಿರು ಸಂಚಾರ ಮಾಡಲಿದ್ದೀರಿ.

ಧನು: ಗುರುಹಿರಿಯರೊಂದಿಗೆ ಅನಗತ್ಯ ಸಂಘರ್ಷಗಳಾಗದಂತೆ ಎಚ್ಚರಿಕೆ ವಹಿಸಿ. ಹೊಸದಾಗಿ ಮದುವೆಯಾಗಿದ್ದವರಿಗೆ ಸುಂದರ ಕ್ಷಣ ಕಳೆಯುವ ಯೋಗ. ವ್ಯಾಪಾರೀ ವರ್ಗದವರಿಗೆ ಮುನ್ನಡೆ ಕಂಡುಬರುವುದು.

ಮಕರ: ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿರಲಿ. ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಉದ್ಯೋಗದಲ್ಲಿ ಮುನ್ನಡೆಯಿರಲಿದೆ.

ಕುಂಭ: ಸರಕಾರೀ ಉದ್ಯೋಗಿಗಳಿಗೆ ಕಾರ್ಯದೊತ್ತಡ ಕಡಿಮೆಯಾಗಲಿದೆ. ಮಕ್ಕಳ ಭವಿಷ್ಯಕ್ಕಾಗಿ ಯೋಜನೆ ರೂಪಿಸಲಿದ್ದೀರಿ. ಯಾತ್ರಾರ್ಥಿಗಳಿಗೆ ಅಡೆತಡೆಗಳು ನಿವಾರಣೆಯಾಗಲಿದೆ. ಕೌಟುಂಬಿಕವಾಗಿ ನೆಮ್ಮದಿಯಿರಲಿದೆ.

ಮೀನ: ಮನೆಯಲ್ಲಿ ಸಣ್ಣ ಪುಟ್ಟ ರಿಪೇರಿ ಕೆಲಸಗಳಿಗೆ ಖರ್ಚು ವೆಚ್ಚಗಳಾದೀತು. ಮಹಿಳೆಯರಿಗೆ ಉದ್ಯೋಗ ಬದಲಾವಣೆಗೆ ಅವಕಾಶಗಳು ಕಂಡುಬರಲಿದೆ. ಕ್ರಿಯಾತ್ಮಕವಾಗಿ ಯೋಚಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಗ್ರಹ ಪಂಚರತ್ನ ಸ್ತೋತ್ರ ಕನ್ನಡದಲ್ಲಿ

ಸೌಭಾಗ್ಯ ಲಕ್ಷ್ಮೀ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಗುರು ಪಾದುಕಾ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಜಾತಕದಲ್ಲಿ ಬುಧ ಗ್ರಹ ದೋಷವಿದ್ದರೆ ಈ ಮಂತ್ರ ಓದಿ

ಕುಜ ದೋಷವಿದ್ದರೆ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments