ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 30 ಏಪ್ರಿಲ್ 2023 (06:30 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಹೊಸದಾಗಿ ಆರಂಭಿಸಿದ್ದ ಉದ್ದಿಮೆಯಲ್ಲಿ ಯಶಸ್ಸು ಕಷ್ಟವೆನಿಸಬಹುದು. ಸ್ನೇಹಿತರ ಸಹಾಯ ಸಿಗಲಿದೆ. ಹಣಕಾಸಿನ ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ. ಕಟ್ಟಡ ಕಾಮಗಾರಿ ಕೆಲಸಗಳು ಮುಂದೂಡಿಕೆಯಾಗಲಿದೆ. ದಿನಂದತ್ಯಕ್ಕೆ ನೆಮ್ಮದಿ.

ವೃಷಭ: ಆತ್ಮೀಯರನ್ನು ಭೇಟಿಯಾದ ಸಂತೋಷ ನಿಮ್ಮದಾಗಲಿದೆ. ಹೊಸ ವಿಚಾರಗಳನ್ನು ಕಲಿಯುವ ಉತ್ಸಾಹ ಕಂಡುಬರಲಿದೆ. ಹೈನುಗಾರಿಕೆ ಉದ್ಯಮದಲ್ಲಿರುವವರಿಗೆ ಲಾಭ. ಕಿರು ಸಂಚಾರ ಮಾಡಲಿದ್ದೀರಿ.

ಮಿಥುನ: ಎಷ್ಟೇ ಕಠಿಣ ಕೆಲಸವಾದರೂ ಆತ್ಮೀಯರ ಸಹಾಯವಿರುವುದರಿಂದ ಸುಲಭವಾಗಿ ಮಾಡಿ ಮುಗಿಸಲಿದ್ದೀರಿ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ.

ಕರ್ಕಟಕ: ಹೊಸ ಜನರ ಭೇಟಿಯಿಂದ ನಿಮ್ಮ ವ್ಯವಹಾರಗಳಿಗೆ ಲಾಭವಾಗಲಿದೆ. ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ಅನುಕೂಲಕರ ವಾತಾವರಣ. ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೊರೆ ಹೋಗಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಿಂಹ: ವಿದ್ಯಾರ್ಥಿಗಳಿಗೆ ಅದೃಷ್ಟದ ದಿನವಾಗಿರಲಿದೆ. ಕುಟುಂಬ ಸಮೇತ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಇಷ್ಟಭೋಜನ ಮಾಡುವ ಯೋಗ. ಅನಿರೀಕ್ಷಿತ ಧನಲಾಭವಾಗಲಿದೆ. ಆದರೆ ದುಂದು ವೆಚ್ಚ ಬೇಡ.

ಕನ್ಯಾ: ನಿರ್ಧಾರ ತೆಗೆದುಕೊಳ್ಳಲು ಗೊಂದಲಗಳು ಕಾಡೀತು. ನೆರೆಹೊರೆಯವರಿಗೆ ಸಹಾಯ ಮಾಡಲಿದ್ದೀರಿ. ಮಕ್ಕಳ ಸಂತೋಷಕ್ಕಾಗಿ ಕೆಲವೊಂದು ಕೆಲಸ ಮಾಡಬೇಕಾಗುತ್ತದೆ. ಆಸ್ತಿ ವಿಚಾರದಲ್ಲಿ ಹೆಚ್ಚಿನ ಜವಾಬ್ಧಾರಿ.

ತುಲಾ: ಹೊಸ ಕೆಲಸಗಳಿಗೆ ಕೈ ಹಾಕುವ ಮುನ್ನ ಹಿರಿಯರ ಸಲಹೆ ಪಡೆಯುವುದು ಉತ್ತಮ. ಕೊಡು-ಕೊಳ್ಳುವ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಪರರ ವಿಚಾರದಲ್ಲಿ ಮೂಗು ತೂರಿಸಲು ಹೋಗಬೇಡಿ.

ವೃಶ್ಚಿಕ: ಧೈರ್ಯ, ಉತ್ಸಾಹದಿಂದ ಕೂಡಿದ ನಿಮ್ಮ ಕಾರ್ಯವೈಖರಿ ಇತರರ ಮೆಚ್ಚುಗೆಗೆ ಪಾತ್ರವಾಗಲಿದೆ. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗಲಿದೆ. ಪಾಲುದಾರಿಕಾ ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ತಾಳ್ಮೆಯಿರಲಿ.

ಧನು: ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ಉದ್ಯೋಗ, ವ್ಯವಹಾರದಲ್ಲಿ ಅನುಕೂಲಕರ ಪರಿಸ್ಥಿತಿ. ಬಂಧು ಮಿತ್ರರ ಭೇಟಿಯಾಗುವ ಯೋಗ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ.

ಮಕರ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಪ್ರೇಮಿಗಳಿಗೆ ಶುಭ ದಿನವಾಗಲಿದೆ. ಆದಾಯ ಹೆಚ್ಚಳವಾಗಲಿದ್ದು, ಹೊಸ ವ್ಯವಹಾರಗಳಲ್ಲಿ ಹೂಡಿಕೆ ಮಾಡಲಿದ್ದೀರಿ. ದೇವತಾ ಪ್ರಾರ್ಥನೆ ಮರೆಯದಿರಿ.

ಕುಂಭ: ಸರಕಾರೀ ಉದ್ಯೋಗಿಗಳಿಗೆ ಬಿಡುವಿನ ದಿನದ ಉಲ್ಲಾಸದಾಯಕವಾಗಿರಲಿದೆ. ಇಷ್ಟ ಮಿತ್ರರೊಂದಿಗೆ ಕಿರು ಪ್ರವಾಸ ಮಾಡುವ ಸಾಧ್ಯತೆ. ಹಣಕಾಸಿನ ವಿಚಾರದಲ್ಲಿ ಕಟ್ಟು ನಿಟ್ಟು ಅಗತ್ಯ. ದಾಂಪತ್ಯದಲ್ಲಿ ಮಧ‍್ಯಮ ಸುಖ.

ಮೀನ: ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಸಾಕು ಪ್ರಾಣಿಗಳಿಂದ ಅಪಾಯವಾಗುವ ಸಾಧ‍್ಯತೆ. ಎಚ್ಚರಿಕೆಯಿಂದಿರಬೇಕು. ಅನಗತ್ಯ ವಿಚಾರಗಳಿಗೆ ತಲೆಕೊಡದೇ ಮೌನ ಪಾಲಿಸುವುದು ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ನಿವಾರಣೆಗೆ ಈ ಕಿರು ಮಂತ್ರ ಸಾಕು

ಸಂಜೆ ದೀಪ ಹಚ್ಚುವಾಗ ಪಠಿಸಬಹುದಾದ ಸ್ತೋತ್ರಗಳು ಇಲ್ಲಿವೆ

ಕೆಟ್ಟ ದೃಷ್ಟಿ ನಿವಾರಿಸಿ ಸಂಪತ್ತು ವೃದ್ಧಿಗೆ ಈ ಲಕ್ಷ್ಮೀ ಮಂತ್ರ ಪಠಿಸಿ

ಸಂಜೆ ದೀಪ ಹಚ್ಚುವ ಅತ್ಯಂತ ಮಂಗಳಕರ ಸಮಯ ಯಾವುದು ಗೊತ್ತಾ

ಮೇಷಾದಿ ದ್ವಾದಶ ರಾಶಿಫಲ 2026: ಖ್ಯಾತ ಜ್ಯೋತಿಷಿ ಶ್ರೀ ವೆಂಕಟೇಶ್ವರ ಭಟ್ ಅವರಿಂದ

ಮುಂದಿನ ಸುದ್ದಿ
Show comments