ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 20 ಏಪ್ರಿಲ್ 2023 (06:20 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಹಿರಿಯರ ಕೆಲವೊಂದು ಮಾತುಗಳು ನಿಮಗೆ ಅಪಥ್ಯವೆನಿಸೀತು. ಇಷ್ಟಜನರ ಭೇಟಿಗೆ ಮನಸ್ಸು ಹಾತೊರೆಯಲಿದೆ. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ಮಕ್ಕಳಿಂದ ಸಂತೋಷ ಕಂಡುಬರುವುದು.

ವೃಷಭ: ಸ್ತ್ರೀಯರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಹಾಯವೊದಗಿಬಂದೀತು. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಕಂಡುಬರಲಿದೆ.

ಮಿಥುನ: ಜಲೋತ್ಪನ್ನಗಳ ಉದ್ಯಮಿಗಳಿಗೆ ಲಾಭಕರವಾದ ದಿನವಾಗಲಿದೆ. ಹೊಸ ಜನರ ಸಂಪರ್ಕ ಮಾಡಲಿದ್ದೀರಿ. ಗುರುಹಿರಿಯರಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಮನೆಗೆ ಬಂಧು ಮಿತ್ರರ ಭೇಟಿ ಸಾಧ‍್ಯತೆ.

ಕರ್ಕಟಕ: ಉದ್ಯೋಗ, ವ್ಯವಹಾರದಲ್ಲಿ ಹೊಸ ಅವಕಾಶಗಳು ಬಂದಾಗ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗ.

ಸಿಂಹ: ಸ್ತ್ರೀ ಸಹಾಯದಿಂದ ಧನ, ಸಂಪತ್ತು ಪ್ರಾಪ್ತಿಯಾಗಲಿದೆ. ಕೌಟುಂಬಿಕವಾಗಿ ಸುಖ, ಸಮೃದ್ಧಿ ಕಂಡುಬರಲಿದೆ. ಮಕ್ಕಳ ಅಭ್ಯುದಯ ಮನಸ್ಸಿಗೆ ಖುಷಿ ಕೊಟ್ಟೀತು. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗಲಿದೆ. ಚಿಂತೆ ಬೇಡ.

ಕನ್ಯಾ: ಸರಕಾರೀ ನೌಕರರಿಗೆ ಬಿಡುವಿಲ್ಲದ ಕಾರ್ಯದೊತ್ತಡ ಕಂಡುಬರಲಿದೆ. ಹೊಸ ಕೆಲಸಗಳಿಗೆ ಕೈ ಹಾಕುವ ಮುನ್ನ ಗುರುಹಿರಿಯರ ಸಲಹೆ ಪಾಲಿಸುವುದು ಉತ್ತಮ. ಮನಸ್ಸಿನ ಮಾತುಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ.

ತುಲಾ: ಕೆಳ ಹಂತದ ನೌಕರರಿಗೆ ಉದ್ಯೋಗ ನಷ್ಟ ಭೀತಿ ಕಾಡೀತು. ಸ್ವಯಂ ವೃತ್ತಿಯವರಿಗೆ ಮುನ್ನಡೆಯ ಯೋಗ. ನಿಮ್ಮಿಂದ ಸಹಾಯ ಪಡೆದವರಿಂದ ಪ್ರತ್ಯುಪಕಾರ ಪಡೆಯಲಿದ್ದೀರಿ. ಕಿರು ಸಂಚಾರ ಮಾಡಬೇಕಾಗುತ್ತದೆ.

ವೃಶ್ಚಿಕ: ಕೆಲಸದ ನಿಮಿತ್ತ ಪರವೂರಿಗೆ ಪ್ರಯಾಣ ಮಾಡಬೇಕಾಗಿ ಬಂದೀತು. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲು ಕೆಲವು ದಿನ ಕಾಯುವುದು ಉತ್ತಮ. ದೇವತಾ ಪ್ರಾರ್ಥನೆ ಮಾಡಿ.

ಧನು: ನಿಮ್ಮ ವಿಚಾರಧಾರೆಗಳಿಗೆ ಕಾರ್ಯರಂಗದಲ್ಲಿ ಮನ್ನಣೆ ಸಿಗದೇ ಮನಸ್ಸಿಗೆ ಬೇಸರವಾದೀತು. ಕಾರ್ಯರಂಗದಲ್ಲಿ ನಿಮ್ಮ ಹಿತಶತ್ರುಗಳಿಂದ ಕಿರಿ ಕಿರಿ ಇರಲಿದೆ. ಕುಟುಂಬ ಸದಸ್ಯರ ಬೆಂಬಲ ಕಂಡುಬರಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ಸರಕಾರೀ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಕ್ರಯ-ವಿಕ್ರಯ ವ್ಯವಹಾರಗಳಲ್ಲಿ ಲಾಭ ಕಂಡುಬರುವುದು. ವಾಹನಾದಿ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಯಿರಲಿ.

ಕುಂಭ: ಸನ್ಮಿತ್ರರ ಸಹಕಾರದಿಂದ ಸಂಭಾವ್ಯ ಸಮಸ್ಯೆಗಳಿಂದ ಪಾರಾಗಲಿದ್ದೀರಿ. ಕೌಟುಂಬಿಕವಾಗಿ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಮೀನ: ಉದ್ಯೋಗ ಕ್ಷೇತ್ರದಲ್ಲಿ ಅನಾದರಣೆ, ಅಗೌರವ ಪ್ರಾಪ್ತಿಯಾಗುವ ಭೀತಿ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿ. ಪಾಲುದಾರಿಕೆ ವ್ಯವಹಾರದಲ್ಲಿ ಯಶಸ್ವಿಯಾಗಲಿದ್ದೀರಿ. ದಿನದಂತ್ಯಕ್ಕೆ ನೆಮ್ಮದಿಯಾಗುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

2026 ರಲ್ಲಿ ದ್ವಾದಶ ರಾಶಿಯವರಿಗೆ ಹಣಕಾಸಿನ ತೊಂದರೆ ಬರುತ್ತಾ, ಇಲ್ಲಿದೆ ವಿವರ

ಶುಕ್ರವಾರ ಓದಬೇಕಾದ ಲಕ್ಷ್ಮೀ ಮಂತ್ರ

ದ್ವಾದಶ ರಾಶಿಯವರಿಗೆ 2026 ರಲ್ಲಿ ಪ್ರೇಮ ಸಂಬಂಧದ ಭವಿಷ್ಯ ಹೇಗಿರಲಿದೆ

ಭಯವಾಗುತ್ತಿದ್ದರೆ ಪ್ರಭು ರಾಮಚಂದ್ರನ ಈ ಸ್ತೋತ್ರವನ್ನು ಓದಿ

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

ಮುಂದಿನ ಸುದ್ದಿ