Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 10 ಏಪ್ರಿಲ್ 2023 (07:10 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಸರಕಾರೀ ಉದ್ಯೋಗಿಗಳಿಗೆ ಸಂತೃಪ್ತಿಯ ಭಾವವಿರುವುದು. ವಾಹನ, ಭೂಮಿ ಖರೀದಿ ವಿಚಾರದಲ್ಲಿ ಮುನ್ನಡೆ ಕಂಡುಬರಲಿದೆ. ಹಣಕಾಸಿನ ವಿಚಾರದಲ್ಲಿ ಸೂಕ್ತ ಯೋಜನೆಯಿರಲಿ. ಸಂಗಾತಿಯ ಸಲಹೆ ಪಾಲಿಸುವುದು ಉತ್ತಮ.

ವೃಷಭ: ಧನಾರ್ಜನೆಗೆ ಕೊರತೆಯಾಗದು. ಆದರೆ ಸರಿಯಾದ ರೀತಿಯಲ್ಲಿ ಬಳಸುವುದರಲ್ಲಿ ಎಡವಲಿದ್ದೀರಿ. ಸಹೋದ್ಯೋಗಿಗಳ ಕಷ್ಟಕ್ಕೆ ನೆರವಾಗುವಿರಿ. ಹಿರಿಯರಿಗೆ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಮಿಥುನ: ಹೊಸ ಮಿತ್ರರನ್ನು ಸಂಪಾದಿಸುವ ಯೋಗ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಇಷ್ಟಮಿತ್ರರೊಂದಿಗೆ ಇಷ್ಟ ಭೋಜನ ಮಾಡುವ ಯೋಗ. ಧಾರ್ಮಿಕ ಕಾರ್ಯಗಳಿಗೆ ನೇತೃತ್ವ ವಹಿಸಲಿದ್ದೀರಿ.

ಕರ್ಕಟಕ: ಜವಾಬ್ಧಾರಿಯುತ ಕಾರ್ಯವೈಖರಿಯಿಂದ ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗಲಿದ್ದೀರಿ. ಆಸ್ತಿ ವಿವಾದಗಳನ್ನು ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಸಲಿದ್ದೀರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.

ಸಿಂಹ: ನಿಮ್ಮ ಮನಸ್ಸಿನಲ್ಲಿ ಕೊರೆಯುತ್ತಿರುವ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ವಾಹನ ಸಂಚಾರದಲ್ಲಿ ಎಚ್ಚರಿಕೆಯಿರಲಿ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಕನ್ಯಾ: ಪಾಲುದಾರಿಕೆ ವ್ಯವಾಹರದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಕಂಡುಬಂದೀತು. ಸಂಗಾತಿಯ ದೇಹಾರೋಗ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಮಕ್ಕಳಿಂದ ಸಂತೋಷ ಸಿಗಲಿದೆ. ತಾಳ್ಮೆಯಿರಲಿ.

ತುಲಾ: ಸಾಂಸಾರಿಕವಾಗಿ ಸಮೃದ್ಧಿ ಕಂಡುಬರುವುದು. ಮಾತೃ ಸಮಾನರಿಂದ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹ ಕಂಡುಬರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ದಿನದಂತ್ಯಕ್ಕೆ ನೆಮ್ಮದಿ ಕಂಡುಬರುವುದು.

ವೃಶ್ಚಿಕ: ದೀರ್ಘ ಪ್ರಯಾಣದಿಂದ ದೇಹಾಯಾಸವಾಗುವ ಸಾಧ‍್ಯತೆ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡ ಕಂಡುಬರಲಿದೆ. ಆಸ್ತಿ ವಿಚಾರದಲ್ಲಿ ಹೆಚ್ಚಿದ ಜವಾಬ್ಧಾರಿ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಚಿಂತೆ ಬೇಡ.

ಧನು: ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ನಿಮ್ಮ ಕೆಲವೊಂದು ಮಾತುಗಳು ಸಂಗಾತಿಯ ಅಸಮಾಧಾನಕ್ಕೆ ಕಾರಣವಾದೀತು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಬರಲಿದೆ. ದೇವತಾ ಪ್ರಾರ್ಥನೆ ಮಾಡಿ.

ಮಕರ: ವಿದ್ಯಾರ್ಥಿಗಳಿಗೆ, ಅಧ್ಯಯನ ಶೀಲರಿಗೆ ಉತ್ತಮ ಅವಕಾಶಗಳು ಕಂಡುಬರಲಿದೆ. ದೇಹಾರೋಗ್ಯದ ಬಗ್ಗೆ ನಿರ್ಲ್ಯಕ್ಷ ಬೇಡ. ಹಣಕಾಸಿನ ಹರಿವಿಗೆ ತೊಂದರೆಯಾಗದು. ವಾಹನ ರಿಪೇರಿ ಕೆಲಸಗಳಿಗೆ ಧನವ್ಯಯವಾದೀತು.

ಕುಂಭ: ಕಳೆದು ಹೋದ ವಸ್ತುವಿಗಾಗಿ ಹುಡುಕಾಟ ನಡೆಸಲಿದ್ದೀರಿ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ. ವ್ಯಾಪಾರಿಗಳಿಗೆ ಉನ್ನತಿಯ ಯೋಗ. ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸಿಗೆ ನೆಮ್ಮದಿ ದೊರೆತೀತು.

ಮೀನ: ದಂಪತಿಗಳ ನಡುವೆ ಪರಸ್ಪರ ಹೊಂದಾಣಿಕೆ ಕೊರತೆ ಕಂಡುಬಂದೀತು. ಮಕ್ಕಳ ಭವಿಷ್ಯಕ್ಕಾಗಿ ಯೋಜನೆ ರೂಪಿಸಲಿದ್ದೀರಿ. ಹೊಸ ಮಿತ್ರರನ್ನು ಸಂಪಾದಿಸುವ ಯೋಗ. ಧನಾರ್ಜನೆಗೆ ನಾನಾ ಮಾರ್ಗ ಕಂಡುಕೊಳ್ಳಲಿದ್ದೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Anjaneya Mantra: ಆಂಜನೇಯ ಅಷ್ಟೋತ್ತರ ಮಂತ್ರವನ್ನು ತಪ್ಪದೇ ಓದಿ

Lakshmi Mantra: ಧನಾಭಿವೃದ್ಧಿ ಆಗಬೇಕಾದ ಧನಲಕ್ಷ್ಮೀ ಸ್ತೋತ್ರ ಓದಿ

Raghavendra swamy mantra: ಶ್ರೀ ರಾಘವೇಂದ್ರ ಕವಚ ಸ್ತೋತ್ರಂ ಭಕ್ತಿಯಿಂದ ಓದಿ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments