Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 5 ಏಪ್ರಿಲ್ 2023 (08:00 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ ಕಂಡುಬರಲಿದೆ. ಮಾತೃ ಸಮಾನರಿಂದ ಪ್ರೋತ್ಸಾಹ ಕಂಡುಬರಲಿದೆ. ಇಷ್ಟಮಿತ್ರರೊಂದಿಗೆ ಕೂಡುವ ಯೋಗ. ನಿರೀಕ್ಷಿಸಿದಷ್ಟು ಹಣ ಸಂಪಾದನೆಯಾಗದೇ ಬೇಸರವಾದೀತು.

ವೃಷಭ: ಧನಸಂಪತ್ತಿನಿಂದ ಮನಸ್ಸಿಗೆ ತೃಪ್ತಿಯಾಗದು. ಉದ್ಯೋಗ, ವ್ಯವಹಾರದಲ್ಲಿ ಕ್ರಿಯಾತ್ಮಕ ದಾರಿಗಳನ್ನು ಕಂಡುಕೊಳ್ಳಲಿದ್ದೀರಿ. ಕುಟುಂಬ ವರ್ಗದವರಿಂದ ಪ್ರೋತ್ಸಾಹ ಕಂಡುಬರಲಿದೆ. ಅನಗತ್ಯ ಚಿಂತೆ ಬೇಡ.

ಮಿಥುನ: ಉತ್ತಮ ವಾಕ್ಚತುರತೆಯಿಂದ ಇತರರ ಗಮನ ಸೆಳೆಯಲಿದ್ದೀರಿ. ಬಂಧು ವರ್ಗದವರ ಭೇಟಿ ಸಾಧ‍್ಯತೆ. ಹಣಕಾಸಿನ ಹರಿವಿಗೆ ತೊಂದರೆಯಾಗದು. ಮಕ್ಕಳಿಗೆ ಅಚ್ಚರಿಯ ಉಡುಗೊರೆ ನೀಡಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕರ್ಕಟಕ: ಸ್ಥಿರಾಸ್ಥಿ ಸಂಪಾದನೆ ಮಾಡಲಿದ್ದೀರಿ. ಹಿರಿಯರ ಸಲಹೆಗಳು ಉಪಯೋಗಕ್ಕೆ ಬರಲಿವೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರುವುದು. ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೊರೆ ಹೋಗಲಿದ್ದೀರಿ.

ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗೆ ಪ್ರಯತ್ನ ನಡೆಸಲಿದ್ದೀರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಭ‍್ಯವಾಗಲಿದೆ. ಕಾರ್ಯಕ್ಷಮತೆಗೆ ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಗುವುದು. ಚಿಂತೆ ಬೇಡ.

ಕನ್ಯಾ: ಕೌಟುಂಬಿಕವಾಗಿ ಅಭಿವೃದ್ಧಿ ನೆಮ್ಮದಿ ಕಂಡುಬರಲಿದೆ. ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ಕಿರು ಸಂಚಾರ ಮಾಡಬೇಕಾಗುತ್ತದೆ.

ತುಲಾ: ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಚಿಂತೆ ಬೇಡ. ಕ್ರಿಯಾತ್ಮಕವಾಗಿ ಯೋಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಇಷ್ಟಮಿತ್ರರೊಂದಿಗೆ ಕಿರು ಪ್ರವಾಸ ಮಾಡುವ ಯೋಗ ನಿಮ್ಮದಾಗಲಿದೆ.

ವೃಶ್ಚಿಕ: ನಿಮ್ಮ ಮಾತಿನಲ್ಲಿ ತಾಳ್ಮೆ ಇರಲಿ. ಇನ್ನೊಬ್ಬರ ಅಭಿಪ್ರಾಯಗಳಿಗೆ ಸಹಮತಿಸುವ ಮನೋಭಾವ ಬೆಳೆಸಿಕೊಳ್ಳಿ. ಮಕ್ಕಳಿಂದ ಸಂತೋಷ ಸಿಗಲಿದೆ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ.

ಧನು: ವಿಶೇಷ ವ್ಯಕ್ತಿಗಳು ನಿಮ್ಮ ಜೀವನಕ್ಕೆ ಇಂದು ತಿರುವು ನೀಡಲಿದ್ದಾರೆ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಿದ್ದರೆ ಅಡೆತಡೆಗಳು ಬಂದೀತು. ಕೆಳ ಹಂತದ ನೌಕರರಿಗೆ ಉದ್ಯೋಗ ನಷ್ಟದ ಭೀತಿ.

ಮಕರ: ಸರಕಾರೀ ಉದ್ಯೋಗಿಗಳಿಗೆ ಕಾರ್ಯದೊತ್ತಡ ಕಂಡುಬರಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು. ಸಾಂಸಾರಿಕವಾಗಿ ತೃಪ್ತಿದಾಯಕ ದಿನವಾಗಿರಲಿದೆ. ಸಾಕು ಪ್ರಾಣಿಗಳಿಂದ ಅಪಾಯ ಎದುರಾದೀತು. ಎಚ್ಚರ.

ಕುಂಭ: ನಿಮ್ಮ ಮಾತಿನಿಂದ ಇತರರಿಗೆ ನೋವಾಗದಂತೆ ಎಚ್ಚರಿಕೆ ವಹಿಸಿ. ದೇಹಾರೋಗ್ಯದ ಸಮಸ್ಯೆಗಳಿಗೆ ಪರಿಹಾರ  ಕಂಡುಕೊಳ್ಳಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾದೀತು. ತಾಳ್ಮೆಯಿರಲಿ.

ಮೀನ: ಹೊಸದಾಗಿ ಮದುವೆಯಾಗಿದ್ದವರಿಗೆ ಸುಂದರ ಕ್ಷಣ ಕಳೆಯುವ ಯೋಗ. ಸಾಲಗಾರರ ಕಾಟದಿಂದ ಮುಕ್ತಿ ಸಿಗುವುದು. ವ್ಯಾಪಾರಿಗಳಿಗೆ ಧನಾಗಮನವಾಗಲಿದೆ. ಆರ್ಥಿಕವಾಗಿ ಸದೃಢರಾಗಲಿದ್ದೀರಿ. ದೇವತಾ ಪ್ರಾರ್ಥನೆ ಮರೆಯದಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

Tulsi Mantra: ಹೆಣ್ಣು ಮಕ್ಕಳಿಗಾಗಿ ತುಳಸಿ ಅಷ್ಟೋತ್ತರ ಮಂತ್ರ ಇಲ್ಲಿದೆ

ಮುಂದಿನ ಸುದ್ದಿ
Show comments