Daily Horoscope
✕

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 8 ಡಿಸೆಂಬರ್ 2022 (08:30 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಧನಾದಾಯವಿದ್ದರೂ ಅಷ್ಟೇ ಖರ್ಚೂ ಇರಲಿದೆ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಇಷ್ಟಮಿತ್ರರನ್ನು ಭೇಟಿಯಾಗುವ ಯೋಗ. ಸಾಂಸಾರಿಕವಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಅನಗತ್ಯ ಚಿಂತೆ ಬೇಡ.

ವೃಷಭ: ಮಕ್ಕಳಿಗೆ ಕೆಲವೊಂದು ವಸ್ತು ಕೊಡಿಸುವ ಸಲುವಾಗಿ ಖರ್ಚು ವೆಚ್ಚಗಳಾದೀತು. ಧನ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೆಕಾಗಿಲ್ಲ. ತಾಳ್ಮೆಯಿರಲಿ.

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಬಡ್ತಿ ಸಂಭವ. ಮೇಲಧಿಕಾರಿಗಳ ಪ್ರಶಂಸೆಗೊಳಗಾಗಲಿದ್ದೀರಿ. ಅನಿರೀಕ್ಷಿತ ಧನ ಸಂಪತ್ತು ನಿಮ್ಮ ಕೈ ಸೇರಲಿದೆ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ಬಯಸದೇ ಇದ್ದರೂ ಕೆಲವೊಂದು ಯೋಗ ನಿಮ್ಮ ಪಾಲಿಗೆ ಒಲಿದು ಬರಲಿದೆ. ಹಿರಿಯರು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಏಳು ಬೀಳುಗಳು ಸಾಮಾನ್ಯ. ದಿನದಂತ್ಯಕ್ಕೆ ನೆಮ್ಮದಿಯಾಗಲಿದೆ.

ಸಿಂಹ: ಹೊಸದಾಗಿ ಆರಂಭಿಸಿದ್ದ ವ್ಯಾಪಾರ, ಉದ್ದಿಮೆಯಲ್ಲಿ ಏಳಿಗೆ ಕಂಡುಬರಲಿದೆ. ಸಂಗಾತಿಯ ಪ್ರೀತ್ಯಾದರಗಳಿಗೆ ಪಾತ್ರರಾಗಲಿದ್ದೀರಿ. ಮಕ್ಕಳ ಭವಿಷ್ಯಕ್ಕಾಗಿ ಯೋಜನೆ ರೂಪಿಸಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮರೆಯದಿರಿ.

ಕನ್ಯಾ: ನಿಮ್ಮಲ್ಲಿರುವ ಸುಪ್ತ ಪ್ರತಿಭೆ ಹೊರತರಲು ಸೂಕ್ತ ವೇದಿಕೆ ಸಿಗುವುದು. ನೀವು ಕೈಗೊಳ್ಳುವ ಕೆಲವು ನಿರ್ಧಾರಗಳು ಪರೋಕ್ಷವಾಗಿ ಇತರರಿಗೆ ನೆರವಾಗಲಿದೆ. ಮಕ್ಕಳ ಜೀವನದಲ್ಲಿ ಅಭಿವೃದ್ಧಿ ಮನಸ್ಸಿಗೆ ಸಂತೋಷ ಕೊಡುವುದು.

ತುಲಾ: ಧಾರ್ಮಿಕ ಕೆಲಸಗಳಿಗೆ ನೇತೃತ್ವ ವಹಿಸಲಿದ್ದೀರಿ. ದೂರದ ನೆಂಟರಿಷ್ಟರ ಭೇಟಿ ಯೋಗ. ಬಂಧು ಮಿತ್ರರಿಂದ ನಿಮ್ಮ ಕೆಲಸ ಸುಗಮವಾದೀತು. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ.

ವೃಶ್ಚಿಕ: ನಿರೀಕ್ಷಿತ ಗುರಿ ಸಾಧನೆಯತ್ತ ನಿಮ್ಮ ಗಮನವಿರಲಿ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ದೊರೆಯಲಿವೆ. ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಲಿದೆ. ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.

ಧನು: ಆಸ್ತಿ ವಿಚಾರಗಳಲ್ಲಿ ನೆರೆಹೊರೆಯವರಿಂದ ಕಿರಿ  ಕಿರಿ ಎದುರಾದೀತು. ಉತ್ತಮ ಧನಾರ್ಜನೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆಗೊಳಗಾಗಬೇಡಿ. ಕಿರು ಓಡಾಟ ನಡೆಸಬೇಕಾಗುತ್ತದೆ.

ಮಕರ: ಬಹಳ ದಿನಗಳಿಂದ ಅಂದುಕೊಂಡ ಕೆಲಸಗಳನ್ನು ಪೂರ್ತಿ ಮಾಡಲು ಶ್ರಮ ವಹಿಸಲಿದ್ದೀರಿ. ಮಹಿಳೆಯರಿಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯಾದೀತು. ಪಾಲುದಾರಿಕೆ ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಮಕ್ಕಳ ನಿಮಿತ್ತ ಶ್ರಮವಹಿಸಬೇಕಾದೀತು.

ಕುಂಭ: ನಿಮ್ಮ ಕೆಲಸ ಕಾರ್ಯಗಳ ನಿಮಿತ್ತ ಓಡಾಟ ನಡೆಸಬೇಕಾಗುವುದರಿಂದ ದೇಹಾಯಾಸವಾದೀತು. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಗೆ ಒತ್ತು ನೀಡಿ. ಹೊಸ ಮಿತ್ರರನ್ನು ಸಂಪಾದಿಸಲಿದ್ದೀರಿ.

ಮೀನ: ಸಾಮಾಜಿಕವಾಗಿ ಜನಮನ್ನಣೆಗೆ ಪಾತ್ರರಾಗಲಿದ್ದೀರಿ.  ಆಸ್ತಿ ವಿಚಾರದಲ್ಲಿ ಮುನ್ನಡೆ ಕಂಡುಬರಲಿದೆ. ಬಂಧು ಮಿತ್ರರ ಭೇಟಿಯಾಗುವ ಸಾಧ‍್ಯತೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಅನಗತ್ಯ ಚಿಂತೆ ಬೇಡ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಭಯ, ಸಂಕಷ್ಟ ನಿವಾರಣೆಗೆ ನರಸಿಂಹ ಸ್ತೋತ್ರ ಇಲ್ಲಿದೆ

ಗಾಯತ್ರಿ ಜಪ ಮಾಡುವ ಮೊದಲು ಓದಲೇಬೇಕಾದ ಸ್ತೋತ್ರ

ಶ್ರೀ ಕಾಳಿ ಏಕಾಕ್ಷರ ಮಂತ್ರ ಜಪಿಸುವ ವಿಧಾನ, ಫಲವೇನು ನೋಡಿ

ಸಂಜೆ ಹೊತ್ತು ಓದಲೇಬೇಕಾದ ಶ್ರೀ ಚಂದ್ರಮೌಳೀಶ್ವರ ಸ್ತವ ಸ್ತೋತ್ರ

ನಿತ್ಯ ಬೆಳಿಗ್ಗೆ ಈ ಸೂರ್ಯ ಸ್ತೋತ್ರ ಪಠಿಸಿದರೆ ಸಕಲ ರೋಗಗಳಿಂದ ಮುಕ್ತಿ

ಮುಂದಿನ ಸುದ್ದಿ
Show comments