ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 27 ಅಕ್ಟೋಬರ್ 2022 (08:00 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಕಾರ್ಯಸಾಧನೆಗೆ ಅನೇಕ ಅಡ್ಡಿಗಳು ಕಂಡುಬಂದೀತು. ಆದರೆ ನಿಮ್ಮ ಆತ್ಮವಿಶ್ವಾಸವೇ ನಿಮ್ಮನ್ನು ಕಾಪಾಡಲಿದೆ. ಗೃಹಿಣಿಯರಿಗೆ ಕೊಂಚ ಬಿಡುವಿನ ಸಮಯ ಸಿಗಲಿದೆ. ಹಣ ಗಳಿಕೆಗೆ ನಾನಾ ದಾರಿಗಳು ಕಂಡುಬರಲಿದೆ.

ವೃಷಭ: ಅನಗತ್ಯ ಚರ್ಚೆಗೆ ಅವಕಾಶ ಮಾಡಿಕೊಡದಿರಿ. ಗುರುಹಿರಿಯರ ಬೆಂಬಲ ನಿಮ್ಮ ಪರವಾಗಿರಲಿದೆ. ಸಹೋದರರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ.  ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಇಷ್ಟಮಿತ್ರರೊಂದಿಗೆ ಇಷ್ಟ ಭೋಜನ ಮಾಡುವ ಯೋಗ. ಕಿರು ಸಂಚಾರ ಮಾಡಲಿದ್ದೀರಿ.

ಕರ್ಕಟಕ: ವ್ಯಾಪಾರೀ ವರ್ಗದವರಿಗೆ ಉನ್ನತಿಯ ಯೋಗ. ಅಂದುಕೊಂಡ ಕೆಲಸ ಪೂರ್ತಿ ಮಾಡಲು ಮಿತ್ರರ ಸಹಾಯ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ. ದಿನದಂತ್ಯಕ್ಕೆ ಸಂತೋಷದ ಸುದ್ದಿ ಕೇಳಿಬರಲಿದೆ.

ಸಿಂಹ: ದೂರದ ಮಿತ್ರರಿಂದ ನಿಮಗೆ ಅನುಕೂಲವಾಗಲಿದೆ. ಬಂಧು ಮಿತ್ರರನ್ನು ಬಹಳ ದಿನಗಳ ನಂತರ ಭೇಟಿಯಾಗುವ ಯೋಗ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.

ಕನ್ಯಾ: ಜಲೋತ್ಪನ್ನಗಳ ಉದ್ಯಮದಲ್ಲಿ ತೊಡಗಿಸಿಕೊಂಡವರಿಗೆ ಧನ ಲಾಭವಾಗಲಿದೆ. ಕೈಯಲ್ಲಿರುವ ಕೆಲಸ ನಷ್ಟವಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ನಿಮ್ಮ ಮೇಲಿನ ಅಪವಾದ ಕಳೆದುಕೊಳ್ಳಲಿದ್ದೀರಿ.

ತುಲಾ: ನಿಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರ ತರಲು ಇದು ಸಕಾಲ. ಪಾಲುದಾರಿಕೆ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಲಿದ್ದೀರಿ. ಸಾಂಸಾರಿಕವಾಗಿ ನೆಮ್ಮದಿಯ ದಿನವಾಗಿರಲಿದೆ.  ವಿದ್ಯಾರ್ಥಿಗಳಿಗೆ ಪ್ರಶಂಸೆ ಸಿಗಲಿದೆ.

ವೃಶ್ಚಿಕ: ಭೂಮಿ, ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ನಿರುದ್ಯೋಗಿಗಳಿಗೆ ವಿದೇಶದಲ್ಲಿ ಉದ್ಯೋಗಾವಕಾಶಗಳು ದೊರೆಯಲಿವೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿಯಿರಲಿದೆ.

ಧನು: ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳುವುದರಿಂದ ಸಂಭಾವ್ಯ ಸಮಸ್ಯೆಯಿಂದ ಪಾರಾಗಬಹುದು. ದೇಹಾರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆ ಅಗತ್ಯ.

ಮಕರ: ಸರಕಾರಿ ಉದ್ಯೋಗಿಗಳಿಗೆ ಉನ್ನತ ಸ್ಥಾನ ಮಾನದ ಯೋಗ. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ತಾಳ್ಮೆಯಿರಲಿ.

ಕುಂಭ: ಉದ್ಯೋಗ, ವ್ಯವಹಾರದಲ್ಲಿ ಚೇತರಿಕೆ ಕಂಡಬರಲಿದೆ. ಹಣಕಾಸಿನ ವಿಚಾರವಾಗಿ ಆಪ್ತರೊಂದಿಗೆ ಭಿನ್ನಾಭಿಪ್ರಾಯಗಳಾದೀತು. ಮಕ್ಕಳ ಭವಿಷ್ಯಕ್ಕಾಗಿ ಯೋಜನೆ ರೂಪಿಸಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ಮೀನ: ಮಾನಸಿಕವಾಗಿ ಯಾವುದೋ ವಿಚಾರ ನಿಮ್ಮನ್ನು ಕಾಡುತ್ತಿದ್ದರೆ ಆಪ್ತರೊಂದಿಗೆ ಹಂಚಿಕೊಳ್ಳುವುದು ಉತ್ತಮ. ದಾಂಪತ್ಯದಲ್ಲಿ ತೃಪ್ತಿದಾಯಕ ವಾತಾವರಣವಿರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಬುಧವಾರ ಗಣೇಶನ ಅನುಗ್ರಹಕ್ಕೆ ಈ ಸ್ತೋತ್ರ ಓದಿ

ವೈಕುಂಠ ಏಕಾದಶಿ ದಿನವಾದ ಇಂದು ಮಹಾವಿಷ್ಣುವಿನ ಈ ಮಂತ್ರವನ್ನು ತಪ್ಪದೇ ಪಠಿಸಿ

ವಿವಾಹ, ಸಂತಾನಕ್ಕೆ ಅಡ್ಡಿಯಾಗುತ್ತಿದ್ದರೆ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ

ನಾಳೆ ವೈಕುಂಠ ಏಕಾದಶಿ, ಹೀಗಿರಲಿ ಪೂಜಾ ವಿಧಾನ

ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರ ಓದಿ

ಮುಂದಿನ ಸುದ್ದಿ
Show comments