ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 20 ಅಕ್ಟೋಬರ್ 2022 (08:00 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಉದ್ಯೋಗ ಕ್ಷೇತ್ರದಲ್ಲಿ ಕೆಲವೊಂದು ಅಪವಾದಗಳು ನಿಮ್ಮ ಬಗ್ಗೆ ಕೇಳಿಬಂದೀತು. ಮಾನಸಿಕವಾಗಿ ಕಾಡುತ್ತಿರುವ ಕೊರಗನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು.

ವೃಷಭ: ಹೊಸ ವಸ್ತುಗಳನ್ನು ಕೊಳ್ಳುವ ಮನಸ್ಸಾಗುವುದು. ಸಂಗಾತಿಯ ಮಾತಿಗೆ ಬೆಲೆಕೊಡುವುದು ಮುಖ್ಯ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಉನ್ನತ ಅವಕಾಶಗಳು ಕಣ್ಮುಂದೆ ಬಂದಾಗ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ.

ಮಿಥುನ: ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಶುಭ ಕಾರ್ಯಕ್ಕೆ ಮೊದಲು ಕುಲದೇವರ ಪ್ರಾರ್ಥನೆ ಮಾಡಿದರೆ ಒಳಿತು. ವಿಶೇಷ ವ್ಯಕ್ತಿಗಳ ಭೇಟಿ ಮಾಡಲಿದ್ದೀರಿ. ಕಾರ್ಯನಿಮಿತ್ತ ಒತ್ತಡ ಕಂಡುಬರಲಿದೆ.

ಕರ್ಕಟಕ: ದೀರ್ಘ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ. ಧಾರ್ಮಿಕ ಚಟುವಟಿಕೆಗಳಿಗೆ ನೇತೃತ್ವ ವಹಿಸಲಿದ್ದೀರಿ. ದಾಂಪತ್ಯದಲ್ಲಿ ತೃಪ್ತಿಕರ ವಾತಾವರಣವಿರಲಿದೆ. ಉದ್ಯೋಗ, ವ್ಯವಹಾರದಲ್ಲಿ ಮುನ್ನಡೆ ಕಂಡುಬರಲಿದೆ. ತಾಳ್ಮೆಯಿರಲಿ.

ಸಿಂಹ: ಆತುರದ ನಿರ್ಧಾರದಿಂದ ತೊಂದರೆ ಮೈಮೇಲೆಳದುಕೊಳ್ಳಬೇಡಿ. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ. ವ್ಯಾಪಾರೀ  ವರ್ಗದವರಿಗೆ ಹಿತಶತ್ರುಗಳಿಂದ ತೊಂದರೆ ಕಂಡುಬಂದೀತು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕನ್ಯಾ: ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಕಂಡುಬಂದರೂ ಆರ್ಥಿಕವಾಗಿ ನಿರೀಕ್ಷಿಸಿದಷ್ಟು ಮುನ್ನಡೆ ಕಂಡುಬರಲಿಲ್ಲ ಎಂಬ  ಬೇಸರ ಕಾಡಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಅನಗತ್ಯ ಚಿಂತೆ ಬೇಡ.

ತುಲಾ: ಗುರುಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ. ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಆಸ್ತಿ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ಹಣಕಾಸಿನ  ವಿಚಾರದಲ್ಲಿ ದಾಕ್ಷಿಣ್ಯದ ಪ್ರವೃತ್ತಿ ಕಂಡುಬರಲಿದೆ.

ವೃಶ್ಚಿಕ: ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವುದನ್ನು ಕಲಿಯಲಿದ್ದೀರಿ. ಮಾತಿನ ಮೂಲಕವೇ ವ್ಯವಹಾರ ಕುದುರಿಸಲಿದ್ದೀರಿ. ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕಂಡುಬಂದೀತು. ಖರ್ಚು ವೆಚ್ಚಗಳಿಗೆ ಕಡಿವಾಣವಿರಲಿ.

ಧನು:  ಆಸ್ತಿ ವಿಚಾರಗಳಲ್ಲಿ ಅಡೆತಡೆಗಳು ಬಂದೀತು. ಸಂಗಾತಿಯ ಅಸಮಾಧಾನಕ್ಕೆ ಗುರಿಯಾಗಲಿದ್ದೀರಿ. ಗೃಹ ಸಂಬಂಧೀ ಚಟುವಟಿಕೆಗಳಿಗಾಗಿ ಓಡಾಟ ನಡೆಸಲಿದ್ದೀರಿ. ದೇಹಾರೋಗ್ಯದ ಬಗ್ಗೆ ಅಸಡ್ಡೆ ಬೇಡ. ತಾಳ್ಮೆಯಿರಲಿ.

ಮಕರ: ದಾಂಪತ್ಯದಲ್ಲಿ ಸಂಯಮದಿಂದ ನಡೆದುಕೊಳ್ಳುವುದು ಮುಖ್ಯ. ಬಂಧು ಮಿತ್ರರೊಂದಿಗೆ ಬೆರೆಯುವ ಯೋಗ. ಆರ್ಥಿಕವಾಗಿ ಧನ ಗಳಿಕೆಗೆ ನಾನಾ ಮಾರ್ಗಗಳು ಕಂಡುಕೊಳ್ಳಲಿದ್ದೀರಿ. ಕಿರು ಸಂಚಾರ ಮಾಡಲಿದ್ದೀರಿ.

ಕುಂಭ: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ಸಿಗಲಿದೆ. ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡ ಹೆಚ್ಚಾದೀತು. ಕಾರ್ಯಚತುರತೆಯಿಂದ ಇತರರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ಮೀನ: ದಂಪತಿಗಳು ಪರಸ್ಪರ ಸಹಕಾರದಿಂದ ಲಾಭ ಪಡೆಯಲಿದ್ದೀರಿ. ವಾಹನ ರಿಪೇರಿ ಕೆಲಸಗಳಿಗೆ ಖರ್ಚು ವೆಚ್ಚವಾದೀತು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಆಸ್ತಿ ಖರೀದಿ ವಿಚಾರದಲ್ಲಿ ಪ್ರಗತಿ ಕಂಡುಬರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಜಾತಕದಲ್ಲಿ ಕುಜ ರಾಹು ಸಂಧಿ ಇದ್ದಾಗ ಈ ವಸ್ತುಗಳನ್ನು ದಾನ ಮಾಡಿ

ಮಹಾಗಣಪತಿ ಮೂಲ ಮಂತ್ರ ಕನ್ನಡದಲ್ಲಿ ಇಲ್ಲಿದೆ ಓದಿ

ಕುಜ ದೋಷವಿದ್ದರೆ ಯಾವ ಬಟ್ಟೆ ಧರಿಸಬೇಕು

ಶತ್ರು ಭಯ ನಾಶಕ್ಕಾಗಿ ಕಾಳಿ ದೇವಿಯ ಈ ಮಂತ್ರವನ್ನು ಪಠಿಸಿ

ಚಂದ್ರಗ್ರಹ ದೋಷವಿದ್ದಾಗ ಯಾವ ಬಣ್ಣದ ಬಟ್ಟೆ ಧರಿಸಬೇಕು

ಮುಂದಿನ ಸುದ್ದಿ
Show comments