Daily Horoscope
✕

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 18 ಅಕ್ಟೋಬರ್ 2022 (08:00 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಮನಸ್ಸಿನಲ್ಲಿ ನೆನೆದವರು ಎದುರಿಗೇ ಪ್ರತ್ಯಕ್ಷರಾದಾಗ ಅಚ್ಚರಿಯಾಗುವ ಸನ್ನಿವೇಶ ಎದುರಿಸಲಿದ್ದೀರಿ. ಸಂಧಾನ ಮಾತುಕತೆಗೆ ಮಧ‍್ಯಸ್ಥಿಕೆ ವಹಿಸಲಿದ್ದೀರಿ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ.

ವೃಷಭ: ಹಿಂದೆ ಮಾಡಿದ್ದ ಸಹಾಯ ನೆನೆದು ಇತರರು ನಿಮಗೆ ಸಹಾಯ ಮಾಡಲಿದ್ದಾರೆ. ಕಾರ್ಯರಂಗದಲ್ಲಿ ಶತ್ರುಗಳ ಹೆಜ್ಜೆಯರಿತು ಮುಂದಡಿಯಿಡಬೇಕು. ಸಂಗಾತಿಯ ಬಹುದಿನಗಳ ಕನಸು ನನಸು ಮಾಡಲಿದ್ದೀರಿ.

ಮಿಥುನ: ವಿದ್ಯಾರ್ಥಿಗಳಿಗೆ ಉತ್ತಮ ಫಲ ಸಿಗಲಿದೆ. ರಾಜಕೀಯ ರಂಗದಲ್ಲಿರುವವರಿಗೆ ಮುನ್ನಡೆಯ ಯೋಗ. ನೂತನ ಮಿತ್ರರ ಭೇಟಿ ಯೋಗ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ಕಿರು ಸಂಚಾರ ಮಾಡಲಿದ್ದೀರಿ.

ಕರ್ಕಟಕ: ಆರೋಗ್ಯದ ದೃಷ್ಟಿಯಿಂದ ವಿಶ್ರಾಂತಿ ಪಡೆಯುವುದು ಸೂಕ್ತ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭ.

ಸಿಂಹ: ಆಹಾರೋದ್ಯಮಿಗಳಿಗೆ ಆರ್ಥಿಕವಾಗಿ ಹೆಚ್ಚಿನ ಲಾಭವಾಗಲಿದೆ. ಕೈಗೊಂಡ ಕೆಲಸಗಳಲ್ಲಿ ಯಶಸ್ಸು, ಮನಸ್ಸಿಗೆ ನೆಮ್ಮದಿಯಾಗುವುದು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರುವುದು.

ಕನ್ಯಾ: ನಾಲಿಗೆಗೆ ಕಡಿವಾಣ ಹಾಕಿದಲ್ಲಿ ಇಂದು ನೀವು ಅರ್ಧ ಗೆದ್ದಂತೇ. ಗುರುಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ಕೂಡಿಬರುವುದು. ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು.

ತುಲಾ: ನಿಮ್ಮ  ವಿಚಾರಧಾರೆಗಳಿಗೆ ಉದ್ಯೋಗ ಕ್ಷೇತ್ರದಲ್ಲಿ ಸಹಮತ ಸಿಗದೇ ಹೋಗಬಹುದು. ಯಾವುದೇ ವಿಚಾರಗಳನ್ನು ಆಪ್ತರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಹೊಸ ಹೊಣೆಗಾರಿಕೆಗಳಿಗೆ ಸಿದ್ಧರಾಗಿ.

ವೃಶ್ಚಿಕ: ವಿನಯವಂತಿಕೆಯೇ ನಿಮ್ಮನ್ನು ಕಾಪಾಡಲಿದೆ. ವಿದ್ಯಾರ್ಥಿ ವರ್ಗದವರು ಶಿಕ್ಷಕ ವರ್ಗದವರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಪ್ರೀತಿ ಪಾತ್ರರಿಗೆ ಮನಸ್ಸಿನ ಮಾತನ್ನು ಹೇಳಲಿದ್ದೀರಿ. ದೇವತಾ ಪ್ರಾರ್ಥನೆ ಮರೆಯದಿರಿ.

ಧನು: ಹೊಸದಾಗಿ ಕೆಲಸ ಪ್ರಾರಂಭಿಸುವ ಮುನ್ನ ಕುಲದೇವರ ಪ್ರಾರ್ಥನೆಯೊಂದಿಗೆ ಮುನ್ನಡೆಯಿರಿ. ದಾಂಪತ್ಯದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಮಕ್ಕಳ ಆರೋಗ್ಯ ವಿಚಾರದಲ್ಲಿ ಅಸಡ್ಡೆ ಬೇಡ. ತಾಳ್ಮೆಯಿರಲಿ.

ಮಕರ: ಹೊಸದಾಗಿ ಮದುವೆಯಾಗಿರುವ ಜೋಡಿಗೆ ಸುಂದರ ಕ್ಷಣ ಕಳೆಯುವ ಯೋಗ. ಕೌಟುಂಬಿಕವಾಗಿ ಸುಖ, ಸಮೃದ್ಧಿ ಕಂಡುಬರಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಯಶಸ್ಸು ಕಂಡುಬರಲಿದೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ.

ಕುಂಭ: ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡ ಕಂಡುಬಂದೀತು. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆಬರಲಿದೆ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ಕಂಡುಬಂದೀತು. ಮಿತ್ರರಿಂದ ಸಹಾಯ ದೊರೆಯಲಿದೆ.

ಮೀನ: ಉನ್ನತ ವ್ಯಾಸಂಗಕ್ಕೆ ಪ್ರಯತ್ನ ಪಡುವವರಿಗೆ ಉನ್ನತಿಯ ಯೋಗ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು. ಇಷ್ಟ ಭೋಜನ ಮಾಡುವ ಯೋಗ ಕೂಡಿಬರಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಹಾಲಯ ಅಮವಾಸ್ಯೆಯಂದು ಪಿತೃಗಳ ಪೂಜೆ ಮಾಡುವುದರ ಫಲವೇನು ತಿಳಿಯಿರಿ

ಅಯ್ಯಪ್ಪ ಮಾಲಾಧಾರಿಗಳು ತಪ್ಪದೇ ಈ ಸ್ತೋತ್ರ ಓದಿ

ಶ್ರೀ ಪದ್ಮ ಕವಚಂ ಸ್ತೋತ್ರ ಓದುವುದರ ಫಲವೇನು ನೋಡಿ

ಭಯ, ಸಂಕಷ್ಟ ನಿವಾರಣೆಗೆ ನರಸಿಂಹ ಸ್ತೋತ್ರ ಇಲ್ಲಿದೆ

ಗಾಯತ್ರಿ ಜಪ ಮಾಡುವ ಮೊದಲು ಓದಲೇಬೇಕಾದ ಸ್ತೋತ್ರ

ಮುಂದಿನ ಸುದ್ದಿ
Show comments