Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶನಿವಾರ, 15 ಅಕ್ಟೋಬರ್ 2022 (07:20 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯಗತಗೊಳಿಸಲಿದ್ದೀರಿ. ಕುಟುಂಬ ಸದಸ್ಯರೊಂದಿಗೆ ವಿನೋದ ಯಾತ್ರೆ ಕೈಗೊಳ್ಳಲು ಸಿದ್ಧತೆ ನಡೆಸುವಿರಿ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಧನಾರ್ಜನೆಗೆ ನೀವು ಮಾಡಿರುವ ಪ್ರಯತ್ನಗಳು ನಿರರ್ಥಕ ಎನಿಸೀತು. ಸಂಗಾತಿಯೊಂದಿಗೆ ಕಷ್ಟ ಹಂಚಿಕೊಳ್ಳಲಿದ್ದೀರಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಗಲಿದೆ. ಕಿರು ಸಂಚಾರ ಮಾಡಲಿದ್ದೀರಿ.

ಮಿಥುನ: ಇಷ್ಟಾನುಸಾರ ನಿರ್ಧಾರ ತೆಗೆದುಕೊಳ್ಳಲು ಹೋದರೆ ಬೇರೆಯವರ ಅಸಮಾಧಾನಕ್ಕೆ ಗುರಿಯಾಗಬೇಕಾದೀತು. ಯಂತ್ರೋಪಕರಣಗಳ ಜೊತೆ ಕೆಲಸಸ ಮಾಡುವಾಗ ಎಚ್ಚರಿಕೆಯಿಂದಿರಿ. ವಿದ್ಯಾರ್ಥಿಗಳಿಗೆ ಮುನ್ನಡೆ.

ಕರ್ಕಟಕ: ಹೊಸದಾಗಿ ಸೃಷ್ಟಿಯಾದ ಸಂಬಂಧಗಳು ಇನ್ನಷ್ಟು ಗಟ್ಟಿಯಾಗಲಿವೆ. ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಲಾಭ ಕಂಡುಬಂದೀತು.

ಸಿಂಹ: ಬೇರೆಯವರ ಕಷ್ಟಕ್ಕೆ ಸ್ಪಂದಿಸಲು ಹೋಗಿ ತೊಂದರೆಗೆ ಸಿಲುಕಿಕೊಳ್ಳುವ ಸಾಧ‍್ಯತೆ. ಸಂದರ್ಭೋಚಿತವಾಗಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗ. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.

ಕನ್ಯಾ: ಮಕ್ಕಳ ವಿಚಾರದಲ್ಲಿ ಹೊಸ ಚಿಂತೆ ಹುಟ್ಟಿಕೊಳ್ಳಲಿದೆ. ಆರ್ಥಿಕವಾಗಿ ಸದೃಢವಾಗಲು ಹೊಸ ದಾರಿ ಕಂಡುಕೊಳ‍್ಳಲಿದ್ದೀರಿ. ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ತುಲಾ: ಯೋಗ್ಯತೆಗೆ ಅನುಸಾರವಾಗಿ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಅನಗತ್ಯ ಚಿಂತೆ ಬೇಡ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಸಾಲಗಾರರ ಕೂಪಕ್ಕೆ ಬೀಳದಿರಿ.

ವೃಶ್ಚಿಕ: ಇನ್ನೊಬ್ಬರ ಕಾರ್ಯಗಳಲ್ಲಿ ಮೂಗು ತೂರಿಸಲು ಹೋಗಬೇಡಿ. ಮಾತಿನ ಮೇಲೆ ನಿಗಾ ಇರಲಿ. ಪ್ರೀತಿ ಪಾತ್ರರಿಗೆ ಅನಿರೀಕ್ಷಿತ ಉಡುಗೊರೆ ಕೊಡಲಿದ್ದೀರಿ. ವಿದೇಶೀ ಪ್ರವಾಸದ ಯೋಗ ಸದ್ಯದಲ್ಲೇ ಕೂಡಿಬರಲಿದೆ.

ಧನು: ಹೊಸ ಜವಾಬ್ಧಾರಿಗಳಿಂದ ಮುಕ್ತರಾಗಲು ನೋಡಬೇಡಿ.  ವಾಕ್ಚತುರತೆಯಿಂದ ಜನಮನ್ನಣೆ ಗಳಿಸಲಿದ್ದೀರಿ. ಹಿರಿಯರಿಗೆ ದಾನ ಧರ್ಮಾದಿಗಳಿಂದ ನೆಮ್ಮದಿ ದೊರೆಯಲಿದೆ. ಗೃಹ ಸಂಬಂಧೀ ಪರಿಕರಗಳ ಖರೀದಿ ಮಾಡಲಿದ್ದೀರಿ.

ಮಕರ: ಹಣಕಾಸಿನ ವಿಚಾರದಲ್ಲಿ ಅಸಡ್ಡೆ ಬೇಡ. ಸಾಂಸಾರಿಕವಾಗಿ ಪತ್ನಿ, ಮಕ್ಕಳಿಂದ ಸುಖ ಸಿಗಲಿದೆ. ಹಣಕಾಸಿನ ಹರಿವಿಗೆ ತೊಂದರೆಯಾಗದು. ಸಂಶೋಧನಾತ್ಮಕ ಕೆಲಸಗಳಲ್ಲಿ ಆಸಕ್ತಿ ಕಂಡುಬರಲಿದೆ. ದಿನದಂತ್ಯಕ್ಕೆ ನೆಮ್ಮದಿಯಾಗಲಿದೆ.

ಕುಂಭ: ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಲಾಭದ ವ್ಯವಹಾರಗಳಲ್ಲಿ ಅತಿಯಾದ ಪ್ರಯೋಗ ಮಾಡಲು ಸಂಕಷ್ಟಕ್ಕೀಡಾಗದಿರಿ. ಹಿರಿಯರ ಸಲಹೆಗಳಿಗೆ ಕಿವಿಗೊಡುವುದು ಉತ್ತಮ. ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ.

ಮೀನ: ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳೂ ದೊಡ್ಡದಾಗುವ ಸಾಧ್ಯತೆ. ಮಾತಿನ ಮೇಲೆ ಸಂಯಮವಿರಲಿ. ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಬಂಧು ಮಿತ್ರರ ಚಾಡಿ ಮಾತಿಗೆ ಕಿವಿಗೊಡಬೇಕಾಗಿಲ್ಲ. ತಾಳ್ಮೆಯಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Lakshmi Mantra: ಧನಾಭಿವೃದ್ಧಿ ಆಗಬೇಕಾದ ಧನಲಕ್ಷ್ಮೀ ಸ್ತೋತ್ರ ಓದಿ

Raghavendra swamy mantra: ಶ್ರೀ ರಾಘವೇಂದ್ರ ಕವಚ ಸ್ತೋತ್ರಂ ಭಕ್ತಿಯಿಂದ ಓದಿ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments