Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 5 ಸೆಪ್ಟಂಬರ್ 2022 (07:45 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಅವಕಾಶಗಳಿಗೆ ಕಾಯುತ್ತಾ ಕೂರುವ ಬದಲು ನೀವೇ ಹುಡುಕಿಕೊಂಡು ಹೋಗುವುದು ಉತ್ತಮ. ಭವಿಷ್ಯದ ದೃಷ್ಟಿಯಿಂದ ಹೊಸ ಯೋಜನೆಗಳನ್ನು ಹಾಕಿಕೊಳ್ಳಲಿದ್ದೀರಿ. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.

ವೃಷಭ: ಅನಿರೀಕ್ಷಿತವಾಗಿ ಧನಾಗಮನವಾಗುವುದರಿಂದ ಅಂದುಕೊಂಡ ಕೆಲಸಗಳನ್ನು ಸುಗಮವಾಗಿ ನೆರವೇರಿಸಲಿದ್ದೀರಿ. ಮನೆಯಲ್ಲಿ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ. ಇಷ್ಟಮಿತ್ರರನ್ನು ಭೇಟಿ ಮಾಡುವ ಯೋಗವಿದೆ.

ಮಿಥುನ: ಹೊಸದಾಗಿ ಕೆಲಸ ಆರಂಭಿಸುವ ಮುನ್ನ ಕುಟುಂಬಸ್ಥರ ಅಭಿಪ್ರಾಯ ತಿಳಿದುಕೊಳ್ಳುವುದು ಉತ್ತಮ. ಸುಬ್ರಹ್ಮಣ್ಯ ದೇವರ ಪ್ರಾರ್ಥನೆಯಿಂದ ಮನಸ್ಸಿಗೆ ನೆಮ್ಮದಿ. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶಗಳನ್ನು ಬಳಸಿಕೊಳ್ಳಬೇಕು.

ಕರ್ಕಟಕ: ಕಳೆದು ಹೋದ ವಸ್ತುವಿನ ಬಗ್ಗೆ ಚಿಂತೆ ಮಾಡುವುದರಲ್ಲಿ ಅರ್ಥವಿಲ್ಲ. ನಿಮ್ಮ ವಿಚಾರಧಾರೆಗಳಿಗೆ ಇತರರ ಸಹಕಾರ ಸಿಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಉತ್ತಮ ವೈವಾಹಿಕ ಸಂಬಂಧಗಳು ಕೂಡಿಬರಲಿವೆ.

ಸಿಂಹ: ಉದ್ಯೋಗ, ವ್ಯವಹಾರದಲ್ಲಿ ಉನ್ನತಿಯ ಯೋಗವಿದೆ. ಇಷ್ಟಾರ್ಥಿ ಸಿದ್ಧಿಗಾಗಿ ದೇವರ ಮೊರೆ ಹೋಗಲಿದ್ದೀರಿ. ನೆರೆಹೊರೆಯವರಿಗೆ ಕೈಲಾದ ನೆರವು ನೀಡುವಿರಿ. ಆರ್ಥಿಕವಾಗಿ ಧನಗಳಿಕೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ.

ಕನ್ಯಾ: ವ್ಯಾಪಾರೀ ವರ್ಗದವರಿಗೆ ಹಿತ ಶತ್ರುಗಳ ಕಾಟ ಕಂಡುಬಂದೀತು. ಸಾಲ ಪಾವತಿ ವಿಚಾರವಾಗಿ ಆಪ್ತರ ನೆರವು ಪಡೆಯಲಿದ್ದೀರಿ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರಲಿದೆ. ದೇವತಾ ಪ್ರಾರ್ಥನೆ ಮಾಡಿ.

ತುಲಾ: ಕಾರ್ಯರಂಗದಲ್ಲಿ ನಿಮಗೆ ಎದುರಾಳಿಯಾಗಿದ್ದವರಿಂದ ಪೈಪೋಟಿ ಎದುರಾದೀತು. ಗುರುಹಿರಿಯರ ಸಲಹೆ ಪಾಲಿಸುವುದು ಉತ್ತಮ. ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಅನಗತ್ಯ ಚಿಂತೆ ಬೇಡ.

ವೃಶ್ಚಿಕ: ನಿಮ್ಮದಲ್ಲದ ತಪ್ಪಿಗೆ ಫಲ ಅನುಭವಿಸಬೇಕಾದ ಸ್ಥಿತಿ ಎದುರಾದೀತ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಒದಗಿಬರುವುದು. ಅನ್ಯರ ಚಾಡಿ ಮಾತಿಗೆ ಕಿವಿಗೊಡಬೇಕಾಗಿಲ್ಲ. ಶುಭ ಮಂಗಲ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ.

ಧನು: ನೆರೆಹೊರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಕೀಳರಿಮೆ ಬೇಡ. ಹಳೆಯ ಸಮಸ್ಯೆ ಮತ್ತೆ ಪ್ರತ್ಯಕ್ಷವಾದೀತು. ಸಂಗಾತಿಯೊಂದಿಗೆ ಅನಗತ್ಯ ಕಿರಿ ಕಿರಿ ಬೇಡ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ಹೊಸದಾಗಿ ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಸವಾಲುಗಳು ಎದುರಾದೀತು. ಎಲ್ಲವನ್ನೂ ಎದುರಿಸಿಕೊಂಡು ಹೋಗುವ ತಾಳ್ಮೆ ಅಗತ್ಯ. ಹಳೆಯ ಬಾಕಿ ತೀರಿಸಲು ಮುಂದಾಗಲಿದ್ದೀರಿ. ದಿನದಂತ್ಯಕ್ಕೆ ನೆಮ್ಮದಿಯಾಗಲಿದೆ.

ಕುಂಭ: ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡ ಅಧಿಕವಾಗಲಿದೆ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ.  ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಆರೋಗ್ಯದಲ್ಲಿ ಸುಧಾರಣೆಯಿರಲಿದೆ.

ಮೀನ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನ ಮಾನದ ಸಾಧ್ಯತೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಹಿಂದೆ ಮಾಡಿದ ಒಳ್ಳೆಯ ಕೆಲಸಗಳು ಈಗ ಕೈ ಹಿಡಿಯಲಿವೆ. ಚಿಂತೆ ಬೇಡ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

Tulsi Mantra: ಹೆಣ್ಣು ಮಕ್ಕಳಿಗಾಗಿ ತುಳಸಿ ಅಷ್ಟೋತ್ತರ ಮಂತ್ರ ಇಲ್ಲಿದೆ

Parashurama Stuthi: ಪ್ರತಿನಿತ್ಯ ಬೆಳಿಗ್ಗೆ ಪರಶುರಾಮ ಸ್ತುತಿ ಓದಿ, ಎಷ್ಟು ಲಾಭವಿದೆ ನೋಡಿ

ಮುಂದಿನ ಸುದ್ದಿ
Show comments