Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 15 ಆಗಸ್ಟ್ 2022 (07:35 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ನಿಮ್ಮ ಅಧಿಕಾರದ ದುರ್ಬಳಕೆಯಾಗದಂತೆ ನೋಡಿಕೊಳ್ಳಿ. ಸಹೋದರಾದಿ ವರ್ಗದವರಿಗೆ ಸಹಾಯ ಮಾಡಲಿದ್ದೀರಿ. ನಿಮ್ಮ ಭವಿಷ್ಯದ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ‍್ಳಲಿದ್ದೀರಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದು ಮನಸ್ಸಿಗೆ ನೆಮ್ಮದಿಯಾಗಲಿದೆ. ನೆರೆಹೊರೆಯವರೊಂದಿಗೆ ಸಂಬಂಧ ವೃದ್ಧಿಯಾಗಲಿದೆ. ಇಷ್ಟಮಿತ್ರರನ್ನು ಭೇಟಿಯಾಗಲಿದ್ದು, ಸಂತೋಷದಿಂದ ಕಾಲ ಕಳೆಯಲಿದ್ದೀರಿ.

ಮಿಥುನ: ಎಷ್ಟೇ ಕಷ್ಟವಿದ್ದರೂ ಬೇರೆಯವರಿಗೆ ಸಹಾಯ ಮಾಡಿದ ಸಂತೃಪ್ತಿ ನಿಮ್ಮದಾಗುವುದು. ಹಿರಿಯರಿಗೆ ದಾನ ಧರ್ಮಾದಿಗಳಿಂದ ನೆಮ್ಮದಿ ಸಿಗಲಿದೆ. ವ್ಯಾಪಾರೀ ವರ್ಗದವರಿಗೆ ಆರ್ಥಿಕವಾಗಿ ಲಾಭ ಕಂಡುಬರಲಿದೆ.

ಕರ್ಕಟಕ: ಸಾಂಸಾರಿಕವಾಗಿ ಸುಖ ಸಂತೋಷ ಕಂಡುಬರಲಿದೆ. ಸಂಗಾತಿಗೆ ಅನಿರೀಕ್ಷಿತ ಉಡುಗೊರೆ ಕೊಡಲಿದ್ದೀರಿ. ಕೂಡಿಟ್ಟ ಹಣ ಅನಿವಾರ್ಯ ಕಾರಣಗಳಿಗೆ ಖರ್ಚು ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಯ ಕೊರತೆ ಉಂಟಾದೀತು.

ಸಿಂಹ: ಬಹಳ ಕಾಲದಿಂದ ಅಂದುಕೊಂಡಿದ್ದ ಕೆಲಸ ಪೂರ್ತಿ ಮಾಡಲು ಪ್ರಯತ್ನ ಮಾಡಲಿದ್ದೀರಿ. ನಿಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತೆಗೆಯಲು ಅವಕಾಶಗಳು ಸಿಗಲಿದೆ. ಹಿತಶತ್ರುಗಳಿಂದ ದೂರವಿದ್ದರೇ ಉತ್ತಮ.

ಕನ್ಯಾ: ಹಣಕಾಸಿನ ವಿಚಾರದಲ್ಲಿ ಅಜಾಗರೂಕತೆ ಸಲ್ಲದು. ಕೌಟುಂಬಿಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಎಲ್ಲರ ಅಭಿಪ್ರಾಯಗಳಿಗೆ ಬೆಲೆಕೊಡಬೇಕು. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ.

ತುಲಾ: ಇಷ್ಟಮಿತ್ರರೊಂದಿಗೆ ಕಿರು ಪ್ರವಾಸ ಮಾಡಲಿದ್ದೀರಿ. ಮಾನಸಿಕವಾಗಿ ಉಲ್ಲಾಸದಾಯಕ ವಾತಾವರಣವಿರಲಿದೆ. ಹಾಗಿದ್ದರೂ ದೈಹಿಕವಾಗಿ ಆಯಾಸವಾದೀತು. ದಾಂಪತ್ಯದಲ್ಲಿ ಅನಗತ್ಯ ಚರ್ಚೆಗಳಿಗೆ ಅವಕಾಶ ಕೊಡಬೇಡಿ.

ವೃಶ್ಚಿಕ: ನಿಮ್ಮ ಹೊಸ ಯೋಜನೆಗಳಿಗೆ ಗುರುಹಿರಿಯರ ಬೆಂಬಲ ಸಿಗಲಿದೆ. ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಪಾಲು ಬಂಡವಾಳ ಹೂಡಿಕೆ ವ್ಯವಹಾರಗಳು ಲಾಭ ತಂದುಕೊಡಲಿದೆ.

ಧನು: ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದ್ದು, ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ. ಮಕ್ಕಳ ವಿಚಾರದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ಮಕರ: ವಿಶೇಷ ವ್ಯಕ್ತಿಗಳು ನೀಡುವ ಸಲಹೆಯಿಂದಾಗಿ ನಿಮ್ಮ ಜೀವನದಲ್ಲಿ ಇಂದು ಮಹತ್ವದ ತೀರ್ಮಾನ ಕೈಗೊಳ್ಲಲಿದ್ದೀರಿ.  ಆಸ್ತಿ, ವಾಹನ ಖರೀದಿಗೆ ಯೋಜನೆ ಹಾಕಿಕೊಳ್ಳಲಿದ್ದೀರಿ. ಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ.

ಕುಂಭ: ಇಷ್ಟಮಿತ್ರರೊಂದಿಗೆ ಕಿರು ಪ್ರವಾಸ ಮಾಡಲಿದ್ದೀರಿ. ಪ್ರೀತಿ ಪಾತ್ರರೊಂದಿಗೆ ಮನಸ್ಸಿನ ಮಾತು ಹೇಳಿಕೊಳ್ಳಲು ಅವಕಾಶ ಸಿಗಲಿದೆ. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗ. ಕುಲದೇವರ ಪ್ರಾರ್ಥನೆ ಮಾಡಿ.

ಮೀನ: ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬರಲಿದೆ. ನಿಮ್ಮ ಜೀವನದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುವ ದಿನವಿದು. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

Tulsi Mantra: ಹೆಣ್ಣು ಮಕ್ಕಳಿಗಾಗಿ ತುಳಸಿ ಅಷ್ಟೋತ್ತರ ಮಂತ್ರ ಇಲ್ಲಿದೆ

Parashurama Stuthi: ಪ್ರತಿನಿತ್ಯ ಬೆಳಿಗ್ಗೆ ಪರಶುರಾಮ ಸ್ತುತಿ ಓದಿ, ಎಷ್ಟು ಲಾಭವಿದೆ ನೋಡಿ

ಮುಂದಿನ ಸುದ್ದಿ
Show comments