Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 5 ಆಗಸ್ಟ್ 2022 (06:05 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ವೃತ್ತಿರಂಗದಲ್ಲಿ ಎಲ್ಲರನ್ನು ಸಮದೂಗಿಸಿಕೊಂಡು ಹೋಗಲು ಹರಸಾಹಸ ಪಡಬೇಕಾಗುತ್ತದೆ. ಪರಿಶ್ರಮಕ್ಕೆ ತಕ್ಕ ಫಲ ಸಿಗದೇ ನಿರಾಸೆಯಾದೀತು. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಗೆ ಖರ್ಚು ವೆಚ್ಚ ಮಾಡಲಿದ್ದೀರಿ.

ವೃಷಭ: ಅಂದುಕೊಂಡಿದ್ದನ್ನು ಮಾಡಲಾಗಲಿಲ್ಲ ಎಂಬ ಬೇಸರ ಕಾಡೀತು. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಇಷ್ಟಮಿತ್ರರೊಂದಿಗೆ ಕಾಲ ಕಳೆಯಲು ಅವಕಾಶ ಸಿಗಲಿದೆ.

ಮಿಥುನ: ಉದ್ಯೋಗ ರಂಗದಲ್ಲಿ ನಿಮ್ಮ ಸ್ಥಾನ ಬದಲಾವಣೆಯಾಗಲಿದೆ. ಮನೆಗೆ ನೆಂಟರಿಷ್ಟರ ಆಗಮನ ಸಾಧ‍್ಯತೆ. ಸಹೋದರಾದಿ ವರ್ಗದವರಿಂದ ಕಿರಿ ಕಿರಿ ಎದುರಾದೀತು. ಸಂಗಾತಿಯ ಮಾತಿಗೆ ಕಿವಿಗೊಡುವುದು ಉತ್ತಮ.

ಕರ್ಕಟಕ: ಹೊಸ ಯೋಜನೆಗಳಿಗೆ ಕೈ ಹಾಕಲು ಇದು ಸಕಾಲ. ದೂರದ ಮಿತ್ರರ ಸಮಾಗಮ ಮನಸ್ಸಿಗೆ ಖುಷಿ ಕೊಡಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಗುರುಹಿರಿಯರೊಂದಿಗೆ ಸಂಘರ್ಷ ಬೇಡ.

ಸಿಂಹ: ರಾಜಕೀಯ ರಂಗದಲ್ಲಿರುವವರಿಗೆ ಮುನ್ನಡೆ. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆಯಿಂದ ಸುಖ ಸಮೃದ್ಧಿ. ಆರ್ಥಿಕವಾಗಿ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿದೆ. ಆದರೆ ಇಂದು ಯಾರಿಗೂ ಸಾಲ ಕೊಡಲು ಹೋಗಬೇಡಿ.

ಕನ್ಯಾ: ಮನೆಯಲ್ಲಿ ನಡೆಯುವ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲಿದ್ದೀರಿ. ನೆರೆಹೊರೆಯವರೊಂದಿಗೆ ಸಂಬಂಧ ಸುಧಾರಿಸಲಿದೆ. ಹೊಸ ಯೋಜನೆಗಳನ್ನು ಜಾರಿಗೆ ತರಲು ಇದು ಸಕಾಲ. ಅನಗತ್ಯ ಚಿಂತೆ ಬೇಡ.

ತುಲಾ: ವಿದ್ಯಾರ್ಥಿ ವೃಂದದವರಿಗೆ ಏಕಾಗ್ರತೆಯ ಕೊರತೆ ಉಂಟಾದೀತು. ಪಾಲುದಾರಿಕೆ ಕ್ಷೇತ್ರದಲ್ಲಿ ಅಭಿವೃದ್ಧಿಯ ವಾತಾವರಣ ಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ವೃಶ್ಚಿಕ: ಆತುರದಲ್ಲಿ ನಿರ್ಧಾರ ತೆಗೆದುಕೊಳ‍್ಳಲು ಹೋಗಬೇಡಿ. ಬಂಧು ಮಿತ್ರರ ಸಹಕಾರ ಕಂಡುಬರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ನಿಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರತರಲು ಇದು ಸಕಾಲ.

ಧನು: ಹಿಂದೆ ನಿಮ್ಮ ಶತ್ರುಗಳಾಗಿದ್ದವರು ಇಂದು ಮಿತ್ರರಾಗಲಿದ್ದೀರಿ. ಹಳೆಯ ಬಾಕಿ ತೀರಿಸಲು ಇದು ಸಕಾಲ. ಮಹಿಳೆಯರಿಗೆ ಗೃಹ ಕೃತ್ಯಗಳಿಂದ ದೇಹಾಯಾಸವಾದೀತು. ಹಳೆಯ ಮಿತ್ರರನ್ನು ಭೇಟಿ ಮಾಡಲಿದ್ದೀರಿ.

ಮಕರ: ನಾಲಿಗೆ ಚಪಲಕ್ಕೆ ಕಡಿವಾಣ ಹಾಕದಿದ್ದರೆ ಉದರ ಸಮಸ್ಯೆಯಾದೀತು. ದಾಂಪತ್ಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ದಿನದಂತ್ಯಕ್ಕೆ ನೆಮ್ಮದಿ.

ಕುಂಭ: ನಿಮ್ಮ ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ಇಷ್ಟ ಭೋಜನ ಮಾಡುವ ಯೋಗ. ಹಿರಿಯರಿಗೆ ಸಾಮಾಜಿಕ ಕೆಲಸಗಳಿಂದ ತೃಪ್ತಿ ಸಿಗಲಿದೆ. ಕಿರು ಸಂಚಾರ ಮಾಡಲಿದ್ದೀರಿ.

ಮೀನ: ವಿವಾಹಾದಿ ಪ್ರಯತ್ನಗಳಿಗೆ ಮುನ್ನಡೆ ಕಂಡುಬರಲಿದೆ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shiva Mantra: ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿದರೆ ಶುಭ

Hanuman Chalisa: ಹನುಮಾನ್ ಚಾಲೀಸಾ ಕನ್ನಡದಲ್ಲಿ: ಇಂದು ತಪ್ಪದೇ ಓದಿ

Lakshmi Mantra: ಶುಕ್ರವಾರದಂದು ತಪ್ಪದೇ ಲಕ್ಷ್ಮೀ ದೇವಿಯ ಈ ಮಂತ್ರವನ್ನು ಜಪಿಸಿ

Mahavishnu Mantra: ಗುರುವಾರ ಮಹಾವಿಷ್ಣುವಿನ ಈ ಸ್ತೋತ್ರವನ್ನು ತಪ್ಪದೇ ಓದಿ

Ganesha Mantra: ಜೀವನದಲ್ಲಿ ಸಂಕಷ್ಟಗಳು ಎದುರಾದಾಗ ಗಣೇಶನ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments