ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 25 ಜುಲೈ 2022 (07:10 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ನಿಮ್ಮಿಂದ ಹಿಂದೆ ಸಹಾಯ ಅಪೇಕ್ಷಿಸಿದವರಿಂದ ಪ್ರತ್ಯುಪಕಾರ ಸಿಗಲಿದೆ. ನಿಮ್ಮ ಗುಟ್ಟುಗಳು ಇತರರ ಮುಂದೆ ಬಯಲಾಗಲಿದೆ. ಆರ್ಥಿಕವಾಗಿ ಬಲವೃದ್ಧಿಯಾಗಲಿದೆ. ಸಾಲಗಾರರ ಕಾಟದಿಂದ ಮುಕ್ತಿ ಪಡೆಯಲಿದ್ದೀರಿ.

ವೃಷಭ: ಸರಕಾರಿ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಲೆಕ್ಕಪತ್ರಗಳ ಬಗ್ಗೆ ನಿಗಾ ಅಗತ್ಯ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಮಕ್ಕಳ ವಿಚಾರದಲ್ಲಿ ಭವಿಷ್ಯದ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ಅನಗತ್ಯ ಚಿಂತೆ ಬೇಡ.

ಮಿಥುನ: ಸರಿಯಾದ ಯೋಜನೆ ಹಾಕಿಕೊಳ್ಳುವುದರಿಂದ ಸಂಕಷ್ಟಕ್ಕೀಡಾಗುವುದು ತಪ್ಪಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗಲಿದ್ದೀರಿ. ಅವಿವಾಹಿತರಿಗೆ ವೈವಾಹಿಕ ಸಂಬಂದಗಳು ಬರಲಿವೆ. ತಾಳ್ಮೆಯಿರಲಿ.

ಕರ್ಕಟಕ: ಜೀವನದಲ್ಲಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲು ಮುಂದಾಗಲಿದ್ದೀರಿ. ವಿದ್ಯಾರ್ಥಿ ವೃಂದದವರಿಗೆ ಹೊಸ ಅವಕಾಶಗಳು ಬರಲಿವೆ. ಸರಿಯಾಗಿ ಸಮಾಲೋಚಿಸಿ ಮುನ್ನಡೆಯಿರಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ.

ಸಿಂಹ: ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ನಿಮಿತ್ತ ಪರವೂರಿಗೆ ಸಂಚರಿಸಬೇಕಾದೀತು. ಹೊಸ ಕೆಲಸಗಳಿಗೆ ಕೈ ಹಾಕಲು ಇದು ಸಕಾಲ. ಸನ್ಮಿತ್ರರ ಸಲಹೆಗಳು ಉಪಯೋಗಕ್ಕೆ ಬರಲಿದೆ. ದೇವತಾ ಪ್ರಾರ್ಥನೆ ಮಾಡಿ.

ಕನ್ಯಾ: ಅಧ್ಯಯನ ನಿಮಿತ್ತ ಸಂಚಾರ ಮಾಡಬೇಕಾಗುತ್ತದೆ. ಮಕ್ಕಳ ದೇಹಾರೋಗ್ಯ ಚಿಂತೆಗೆ ಕಾರಣವಾಗಲಿದೆ. ಕೈಲಾದ ಸಹಾಯ ಮಾಡಿ ನೆಮ್ಮದಿ ಕಂಡುಕೊಳ್ಳಲಿದ್ದೀರಿ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಸವಾಲುಗಳು ಎದುರಾಗಲಿವೆ.

ತುಲಾ: ಕಾರ್ಯಕ್ಷೇತ್ರದಲ್ಲಿ ವಿಶೇಷ ವ್ಯಕ್ತಿಗಳು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಸರಕಾರಿ ನೌಕರರಿಗೆ ಮುಂಬಡ್ತಿ ಯೋಗವಿದೆ. ವ್ಯಾಪಾರೀ ವರ್ಗದವರಿಗೆ ಆರ್ಥಿಕವಾಗಿ ಮುನ್ನಡೆ ಕಂಡುಬರಲಿದೆ. ಮನೆಯಲ್ಲಿ ನೆಮ್ಮದಿ, ಸಂತೋಷವಿರಲಿದೆ.

ವೃಶ್ಚಿಕ: ಹೊಸದಾಗಿ ಉದ್ಯೋಗಕ್ಕೆ ಸೇರಿಕೊಂಡವರಿಗೆ ಸವಾಲುಗಳು ಎದುರಾದೀತು. ಮಹಿಳೆಯರಿಗೆ ಅಡುಗೆ ಮನೆ ಕೆಲಸಗಳಲ್ಲಿ ತೊಂದರೆಗಳು ಎದುರಾಗುವ ಸಂಭವ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ.

ಧನು: ಸಂಗಾತಿಯ ದೇಹಾರೋಗ್ಯ ಚಿಂತೆಗೆ ಕಾರಣವಾದೀತು. ಅನಗತ್ಯ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಪಡುವ ಅನಿವಾರ್ಯತೆ. ಕಾರ್ಯನಿಮಿತ್ತ ಓಡಾಟ ನಡೆಸಬೇಕಾಗುತ್ತದೆ.

ಮಕರ: ಹಿರಿಯರಿಗೆ ತೀರ್ಥ ಕ್ಷೇತ್ರಗಳಿಗೆ ಯಾತ್ರೆ ಕೈಗೊಳ್ಳುವ ಯೋಗ ಕಂಡುಬರಲಿದೆ. ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಕೌಟುಂಬಿಕವಾಗಿ ನೆಮ್ಮದಿಯಿರಲಿದೆ.

ಕುಂಭ: ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಮಕ್ಕಳ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬಂದೀತು. ಯಾತ್ರಾರ್ಥಿಗಳಿಗೆ ವಿಘ್ನ ಭಯ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು.

ಮೀನ: ಪಾಲುದಾರಿಕೆ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲು ಇದು ಸಕಾಲ. ಕ್ರಿಯಾತ್ಮಕ ಕೆಲಸಗಳು ಇತರರ ಮೆಚ್ಚುಗೆಗೆ ಪಾತ್ರವಾಗಲಿದೆ. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾದೀತು. ಜವಾಬ್ಧಾರಿಗಳೂ ಹೆಚ್ಚಲಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷ ನಿವಾರಣೆಗೆ ದಶರಥ ಕೃತ ಶನಿ ಮಂತ್ರ ಕನ್ನಡದಲ್ಲಿ

ಅಭಿವೃದ್ಧಿಗಾಗಿ ಲಕ್ಷ್ಮೀ ದೇವಿಯ ಈ ಮಂತ್ರ ಪಠಿಸಿ

ಶ್ರೀ ಹರಿ ಸ್ತೋತ್ರ ಮಕ್ಕಳಿಗೂ ಹೇಳಿಸಿ

ವಿದ್ಯೆಗೆ ಸಂಬಂಧಿಸಿದ ಸಮಸ್ಯೆಯಾಗುತ್ತಿದ್ದರೆ ಈ ಸರಸ್ವತಿ ಸ್ತೋತ್ರ ಓದಿ

ಮಂಗಳವಾರ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments