ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 10 ಜುಲೈ 2022 (08:00 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಕೌಟುಂಬಿಕವಾಗಿ ತಾಳ್ಮೆ ಕಾಯ್ದುಕೊಳ್ಳುವುದು ಮುಖ್ಯ. ಮನಸ್ಸಿಗೆ ಹಿಡಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಲಿದೆ.

ವೃಷಭ: ವ್ಯಾಪಾರಿಗಳಿಗೆ ಆರ್ಥಿಕವಾಗಿ ಮುನ್ನಡೆಯ ಯೋಗವಿದೆ. ಆದರೆ ನಯವಂಚಕರಿಂದ ದೂರವಿದ್ದರೆ ಉತ್ತಮ. ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೊರೆ ಹೋಗಲಿದ್ದೀರಿ. ಹಿರಿಯರಿಗೆ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಮಿಥುನ: ಕಾರ್ಯಕ್ಷೇತ್ರದಲ್ಲಿ ಬಿಡುವಿಲ್ಲದ ದುಡಿವಿನಿಂದ ದೇಹಾಯಾಸವಾಗಲಿದೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಕೌಟುಂಬಿಕವಾಗಿ ಸುಖ ಸಮೃದ್ಧಿಯಿರಲಿದೆ. ಶುಭ ಮಂಗಲ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ.

ಕರ್ಕಟಕ: ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಯಂತ್ರೋಪಕರಣಗಳ ರಿಪೇರಿ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಸಿಂಹ: ಹಳೆಯ ಮಿತ್ರರನ್ನು ಭೇಟಿಯಾಗುವ ಯೋಗ. ಮನಸ್ಸಿನಲ್ಲಿರುವ ಮಾತುಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡಲಿದ್ದೀರಿ. ಪ್ರೇಮಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ.

ಕನ್ಯಾ: ಮಕ್ಕಳಿಂದಾಗಿ ಇಂದಿನ ದಿನ ಸಂತೋಷದಾಯಕವಾಗಲಿದೆ. ಕಾರ್ಯನಿಮಿತ್ತ ದೂರ ಪ್ರಯಾಣ ಮಾಡಬೇಕಾಗುತ್ತದೆ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ಭವಿಷ್ಯದ ಬಗ್ಗೆ ಯೋಜನೆ ಹಾಕಿಕೊಳ್ಳಲಿದ್ದೀರಿ. ತಾಳ್ಮೆಯಿರಲಿ.

ತುಲಾ: ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಮನೆಯಲ್ಲಿ ನೆಂಟರಿಷ್ಟರ ಆಗಮನದಿಂದ ಸಂತೋಷದ ವಾತಾವರಣವಿರಲಿದೆ. ಪ್ರೀತಿ ಪಾತ್ರರೊಂದಿಗೆ ಕಿರು ಪ್ರವಾಸ ಮಾಡುವ ಯೋಗ. ಅನಗತ್ಯ ಚಿಂತೆ ಬೇಡ.

ವೃಶ್ಚಿಕ: ಹೊಸ ಕೆಲಸಗಳಿಗೆ ಕೈ ಹಾಕುವ ಮುನ್ನ ಗುರುಹಿರಿಯರ ಸಲಹೆ ಪಡೆಯುವುದು ಉತ್ತಮ. ಅವಿವಾಹಿತ ಸ್ತ್ರೀಯರಿಗೆ ವಿವಾಹಾದಿ ಪ್ರಸ್ತಾಪಗಳು ಬರಲಿವೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಯ ಕೊರತೆ ಉಂಟಾಗಲಿದೆ.

ಧನು: ಸ್ವಯಂ ವೃತ್ತಿಯವರಿಗೆ ಆರ್ಥಿಕವಾಗಿ ಏರು ಪೇರು ಕಂಡುಬಂದೀತು. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಒದಗಿಬರಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಮಕರ: ಪಾಲು ಬಂಡವಾಳ ಹೂಡಿಕೆ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಕಟ್ಟಡ ಕಾಮಗಾರಿ ಕೆಲಸಗಳನ್ನು ಆರಂಭಿಸಿದ್ದರೆ ಅಡೆತಡೆಗಳು ಬಂದೀತು. ಕುಟುಂಬದವರ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸೂಕ್ತ.

ಕುಂಭ: ಕೈಲಾದ ಸಹಾಯ ಮಾಡುವ ಉದಾರ ಮನಸ್ಸು ತೋರಲಿದ್ದೀರಿ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಗೃಹ ಸಂಬಂಧೀ ವಿಚಾರಗಳನ್ನು ಸಂಗಾತಿಯೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಂಡರೆ ಸೂಕ್ತ.

ಮೀನ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಕೆಲಸಗಾರರೊಂದಿಗೆ ತಾಳ್ಮೆಯಿಂದ ವರ್ತಿಸಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಕಾರ್ಯನಿಮಿತ್ತ ಪರವೂರಿಗೆ ಸಂಚರಿಸಬೇಕಾದೀತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ನಿವಾರಣೆಗೆ ಈ ಕಿರು ಮಂತ್ರ ಸಾಕು

ಸಂಜೆ ದೀಪ ಹಚ್ಚುವಾಗ ಪಠಿಸಬಹುದಾದ ಸ್ತೋತ್ರಗಳು ಇಲ್ಲಿವೆ

ಕೆಟ್ಟ ದೃಷ್ಟಿ ನಿವಾರಿಸಿ ಸಂಪತ್ತು ವೃದ್ಧಿಗೆ ಈ ಲಕ್ಷ್ಮೀ ಮಂತ್ರ ಪಠಿಸಿ

ಸಂಜೆ ದೀಪ ಹಚ್ಚುವ ಅತ್ಯಂತ ಮಂಗಳಕರ ಸಮಯ ಯಾವುದು ಗೊತ್ತಾ

ಮೇಷಾದಿ ದ್ವಾದಶ ರಾಶಿಫಲ 2026: ಖ್ಯಾತ ಜ್ಯೋತಿಷಿ ಶ್ರೀ ವೆಂಕಟೇಶ್ವರ ಭಟ್ ಅವರಿಂದ

ಮುಂದಿನ ಸುದ್ದಿ
Show comments