ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 31 ಮೇ 2022 (08:15 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಕೈ ತುಂಬಾ ಅವಕಾಶಗಳಿದ್ದರೂ ಉದ್ಯೋಗ ಕ್ಷೇತ್ರದಲ್ಲಿ ಆಲಸ್ಯತನದಿಂದ ಹಿಂದೆ ಬೀಳಲಿದ್ದೀರಿ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.

ವೃಷಭ: ವ್ಯಾಪಾರಿಗಳಿಗೆ ಅನುಕೂಲವಾಗಲಿದ್ದು, ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಕಾರ್ಯನಿಮಿತ್ತ ದೂರ ಪ್ರಯಾಣ ಮಾಡಬೇಕಾಗುತ್ತದೆ.

ಮಿಥುನ: ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿ ಕಂಡುಬರಲಿದೆ. ಮಹಿಳೆಯರಿಗೆ ಚಿನ್ನಾಭರಣಗಳ ಖರೀದಿ ಯೋಗ. ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರಲಿದೆ. ನಿಮ್ಮ ಲೆಕ್ಕಾಚಾರದಂತೇ ಕೆಲಸ ಕಾರ್ಯಗಳು ನಡೆಯಲಿವೆ.

ಕರ್ಕಟಕ: ಹಿರಿಯರಿಗೆ ದೇಹಾರೋಗ್ಯದ ಸಮಸ್ಯೆ ಕಂಡುಬಂದೀತು. ಕೌಟುಂಬಿಕವಾಗಿ ಪರಸ್ಪರ ಸಹಕಾರ ಕಂಡುಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡ ಹೆಚ್ಚಾಗಲಿದೆ. ಉದ್ಯೋಗ ಬದಲಾವಣೆಗೆ ಚಿಂತನೆ ನಡೆಸಲಿದ್ದೀರಿ.

ಸಿಂಹ: ನಿಮ್ಮ ಹಿರಿಯರು ಮಾಡಿದ್ದ ಒಳ್ಳೆಯ ಕೆಲಸಗಳು ನಿಮಗೆ ಒಳಿತು ಮಾಡಲಿದೆ. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ದೇವತಾ ಪ್ರಾರ್ಥನೆ ಮರೆಯದಿರಿ.

ಕನ್ಯಾ: ಕಲೆ, ಸಾಹಿತ್ಯ ಕ್ಷೇತ್ರದಲ್ಲಿರುವವಿರಗೆ ಉನ್ನತಿಯ ಯೋಗವಿದೆ. ಪಾಲುದಾರಿಕೆ ಕ್ಷೇತ್ರದಲ್ಲಿ ವ್ಯವಹಾರ ಮಾಡಿಕೊಂಡವರಿಗೆ ಅನುಕೂಲವಾಗಲಿದೆ. ಕಟ್ಟಡ, ವಾಹನ ಖರೀದಿಯಲ್ಲಿ ಮುನ್ನಡೆ ಕಂಡುಬರಲಿದೆ.

ತುಲಾ: ಕೌಟುಂಬಿಕವಾಗಿ ಪರಸ್ಪರ ಸಹಕಾರದಿಂದ ಸಂಭಾವ್ಯ ಸಮಸ್ಯೆಗಳಿಂದ ದೂರವಾಗಲಿದ್ದೀರಿ. ಮೇಲಧಿಕಾರಿಗಳ ಪ್ರಶಂಸೆ ವ್ಯಕ್ತವಾಗಲಿದೆ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ತಾಳ್ಮೆಯಿರಲಿ.

ವೃಶ್ಚಿಕ: ಉನ್ನತಾಧಿಕಾರ ಪಡೆಯುವ ನಿಮ್ಮ ಪ್ರಯತ್ನಕ್ಕೆ ತಕ್ಕಮಟ್ಟಿಗೆ ಯಶಸ್ಸು ಸಿಗಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪ್ರಯತ್ನ ನಡೆಸಬೇಕಾಗುತ್ತದೆ. ತಾಂತ್ರಿಕ ವೃತ್ತಿಯಲ್ಲಿರುವವರಿಗೆ ಮುನ್ನಡೆ. ಕಿರು ಓಡಾಟ ನಡೆಸಲಿದ್ದೀರಿ.

ಧನು: ವೃತ್ತಿರಂಗದಲ್ಲಿ ನಿಮ್ಮ ಏಳಿಗೆಯನ್ನು ಕಂಡು ಇತರರೂ ಅಸೂಯೆಪಡುವಂತಾಗಲಿದೆ. ಮಾತು ಚರ್ಚೆಗೆ ದಾರಿ ಮಾಡಿಕೊಡದಂತೆ ಎಚ್ಚರಿಕೆ ವಹಿಸಿ. ವಿದ್ಯಾರ್ಥಿ ವೃಂದದವರಿಗೆ ಸಂಶೋಧನೆಯಲ್ಲಿ ಆಸಕ್ತಿ ಕಂಡುಬರಲಿದೆ.

ಮಕರ: ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಯಶಸ್ಸು ಸಿಗಲಿದೆ. ಸ್ವಯಂ ವೃತ್ತಿಯವರಿಗೆ ಆರ್ಥಿಕವಾಗಿ ಮುನ್ನಡೆ ಕಂಡುಬಂದೀತು. ಸಹೋದರಾದಿ ಸಂಬಂಧಿಗಳಿಂದಾಗಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವ ಸಾಧ‍್ಯತೆ.

ಕುಂಭ: ಮನೆಯಲ್ಲಿ ನಿಮ್ಮ ಮಾತು ನಡೆಯುತ್ತಿಲ್ಲ ಎಂಬ ಬೇಸರವಾದೀತು. ಕಾರ್ಯರಂಗದಲ್ಲಿ ದಾಕ್ಷಿಣ್ಯ ಪ್ರವೃತ್ತಿ ಸಲ್ಲದು. ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಧನಸಂಪಾದನೆಯಾಗಲಿದೆ. ದಾಂಪತ್ಯದಲ್ಲಿ ಮಧ‍್ಯಮ ಸುಖ.

ಮೀನ: ಉದ್ಯೋಗ, ವ್ಯವಹಾರದಲ್ಲಿ ನಿಮ್ಮ ತಲ್ಲೀನತೆ ಯಶಸ್ಸಿಗೆ ಹಾದಿಯಾಗಲಿದೆ. ಸಂಗಾತಿಯ ಪ್ರೀತ್ಯಾದರಗಳಿಗೆ ಕಾರಣರಾಗಲಿದ್ದೀರಿ. ದಾಂಪತ್ಯದಲ್ಲಿ ತೃಪ್ತಿದಾಯಕ ಸಂಬಂಧವಿರಲಿದ್ದು, ಆರ್ಥಿಕವಾಗಿ ಸಬಲರಾಗಲಿದ್ದೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಹಣಕಾಸಿನ ಸಮಸ್ಯೆಯಿದ್ದರೆ ಕನಕಧಾರಾ ಸ್ತೋತ್ರ ತಪ್ಪದೇ ಓದಿ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮಂಗಳವಾರ ದೇವಿಯ ಅನುಗ್ರಹಕ್ಕಾಗಿ ನವರತ್ನ ಮಾಲಿಕಾ ಸ್ತೋತ್ರ

ಮುಂದಿನ ಸುದ್ದಿ
Show comments