Daily Horoscope
✕

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 29 ಮೇ 2022 (08:05 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಮನೆಗೆ ಅತಿಥಿಗಳ ಆಗಮನಕ್ಕೆ ಸಿದ್ಧತೆ ನಡೆಸಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಸಂಗಾತಿಯ ಕೆಲಸಗಳಿಗೆ ಸಾಥ್ ನೀಡಲಿದ್ದಾರೆ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗಲಿದೆ. ಹೊಸ ವಿಚಾರಗಳನ್ನು ಕಲಿಯುವ ಅವಕಾಶ, ಆಸಕ್ತಿ ಕಂಡುಬರಲಿದೆ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ.

ಮಿಥುನ: ಸಾಂಸಾರಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ. ವ್ಯಾಪಾರಿ ವರ್ಗದವರಿಗೆ ಆರ್ಥಿಕವಾಗಿ ಲಾಭವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕರ್ಕಟಕ: ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನಕ್ಕೆ ಕರೆ ಬರಲಿದೆ. ಬಹುದಿನಗಳ ನಂತರ ಆಪ್ತರನ್ನು ಭೇಟಿಯಾದ ಸಂತೋಷ ನಿಮ್ಮದಾಗಲಿದೆ. ಇಷ್ಟಭೋಜನ ಮಾಡುವ ಯೋಗ. ಹಿರಿಯರಿಗೆ ದಾನ ಧರ್ಮಾದಿಗಳಿಂದ ನೆಮ್ಮದಿ.

ಸಿಂಹ: ಸ್ವಯಂ ವ್ಯಾಪಾರಿಗಳಿಗೆ ಅಡೆತಡೆಗಳಿದ್ದರೂ ಆಪ್ತರ ಸಹಕಾರ ಸಿಗಲಿದೆ. ರಾಜಕೀಯ ರಂಗದಲ್ಲಿರುವವರಿಗೆ ಉನ್ನತ ಸ್ಥಾನದ ಯೋಗ. ಗುರುಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ. ಪ್ರೇಮಿಗಳಿಗೆ ಶುಭ ದಿನ.

ಕನ್ಯಾ: ವೃತ್ತಿರಂಗದಲ್ಲಿ ನಿಮ್ಮ ಸ್ಥಾನ ಪಲ್ಲಟವಾಗುವ ಸಾಧ‍್ಯತೆಯಿದೆ. ಹೊಸ ಜನರ ಭೇಟಿ ಯೋಗ. ಹಿರಿಯರಿಗೆ ದೇಹಾರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರಾಗುವ ಸಾಧ್ಯತೆ. ದಿನದಂತ್ಯಕ್ಕೆ ಸಂತೋಷದ ಸುದ್ದಿ.

ತುಲಾ: ಮಕ್ಕಳಿಂದ ನಿಮ್ಮ ಇಂದಿನ ದಿನ ವಿಶೇಷವಾಗಿರಲಿದೆ. ಕೌಟುಂಬಿಕವಾಗಿ ಅಭಿವೃದ್ಧಿ ನೆಮ್ಮದಿ, ಕಂಡುಬರಲಿದೆ. ಬೇರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಯೋಗವಿದೆ.

ವೃಶ್ಚಿಕ: ವಿಶೇಷವಾದ ವ್ಯಕ್ತಿಗಳಿಂದ ಇಂದು ನಿಮ್ಮ ಜೀವನ ವಿಶೇಷವಾಗಿರಲಿದೆ. ಹೊಸದಾಗಿ ಉದ್ಯೋಗಕ್ಕೆ ಸೇರಿಕೊಂಡವರಿಗೆ ಸವಾಲುಗಳು ಎದುರಾಗಲಿವೆ. ಕಾರ್ಯನಿಮಿತ್ತ ಓಡಾಟ ನಡೆಸಬೇಕಾದೀತು.

ಧನು: ಮಹಿಳೆಯರಿಗೆ ಬಹಳ ದಿನಗಳ ನಂತರ ಆಪ್ತರನ್ನು ಭೇಟಿಯಾದ ಸಂತೋಷ. ಮಕ್ಕಳ ಜೀವನದಲ್ಲಿ ಅನಗತ್ಯವಾಗಿ ಮೂಗು ತೂರಿಸಲು ಹೋಗಬೇಡಿ. ವೈಯಕ್ತಿಕವಾಗಿ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ದೇವತಾ ಪ್ರಾರ್ಥನೆ ಮಾಡಿ.

ಮಕರ: ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲು ಇದು ಸಕಾಲ. ಮಹಿಳೆಯರಿಗೆ ಮಂಗಲ ವಸ್ತ್ರ ಖರೀದಿಸುವ ಯೋಗ. ವಾಹನ ಸಂಚಾರದಲ್ಲಿ ಅಪಘಾತದ ಭಯವಿದೆ. ಎಚ್ಚರಿಕೆ ಅಗತ್ಯ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕುಂಭ: ಪಾಲುದಾರಿಕೆ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಕಂಡುಬರಲಿದೆ. ಮಾತೃ ಸಮಾನರಿಂದ ಪ್ರೋತ್ಸಾಹ ಸಿಗಲಿದೆ. ನೂತನ ಮಿತ್ರರ ಸಮಾಗಮವಾಗಲಿದೆ. ಕಿರು ಪ್ರವಾಸದಿಂದ ಮನಸ್ಸಿಗೆ ಉಲ್ಲಾಸವಾಗಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗುವುದು.

ಮೀನ: ಹಿಂದೆ ಎಂದೋ ಆಗಬೇಕಿದ್ದ ಕೆಲಸ ಕಾರ್ಯಗಳನ್ನು ಪೂರ್ತಿ ಮಾಡಲು ಪ್ರಯತ್ನಿಸಲಿದ್ದೀರಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ದೇಹಾಯಾಸವಾದೀತು. ಇತರರ ಮೇಲೆ ಸಣ್ಣ ಪುಟ್ಟ ವಿಚಾರಕ್ಕೆ ಸಿಡುಕುವ ಪ್ರವೃತ್ತಿ ಕಂಡುಬರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಜೆ ಹೊತ್ತು ಓದಲೇಬೇಕಾದ ಶ್ರೀ ಚಂದ್ರಮೌಳೀಶ್ವರ ಸ್ತವ ಸ್ತೋತ್ರ

ನಿತ್ಯ ಬೆಳಿಗ್ಗೆ ಈ ಸೂರ್ಯ ಸ್ತೋತ್ರ ಪಠಿಸಿದರೆ ಸಕಲ ರೋಗಗಳಿಂದ ಮುಕ್ತಿ

ಶನಿಯ ಪವರ್ ಫುಲ್ ಮಂತ್ರಗಳಲ್ಲಿ ಇದೂ ಒಂದು

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಓದಿ ಶ್ರೀ ಭದ್ರಲಕ್ಷ್ಮಿ ಸ್ತೋತ್ರಂ

ಭಯ ನಿವಾರಣೆಗಾಗಿ ಗುರು ರಾಘವೇಂದ್ರ ಆಪತ್ಪರಿಹರಣ ಸ್ತೋತ್ರ

ಮುಂದಿನ ಸುದ್ದಿ
Show comments