Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 28 ಏಪ್ರಿಲ್ 2022 (07:45 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನ ಮಾನಕ್ಕಾಗಿ ಪ್ರಯತ್ನ ನಡೆಸಲಿದ್ದೀರಿ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ. ಇಷ್ಟಮಿತ್ರರ ಭೇಟಿ ಯೋಗವಿದೆ. ಅರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಹೊಸದಾಗಿ ಉದ್ಯೋಗ ಆರಂಭಿಸಿದ್ದರೆ ಅಡೆತಡೆಗಳು ಕಂಡುಬಂದೀತು. ಚಿಂತೆ ಬೇಡ.

ಮಿಥುನ: ವಿಶೇಷವಾದ ವ್ಯಕ್ತಿಗಳ ಭೇಟಿಯಿಂದ ನಿಮ್ಮ ಕಾರ್ಯಸಾಧನೆಯಾಗಲಿದೆ. ಹೊಸದಾಗಿ ಮದುವೆಯಾಗಿದ್ದರೆ ಸುಂದರ ಕ್ಷಣ ಕಳೆಯುವ ಯೋಗ. ವಿದ್ಯಾರ್ಥಿಗಳಿಗೆ ಕಠಿಣ ಪರೀಕ್ಷೆಗಳು ಎದುರಾದೀತು. ತಾಳ್ಮೆಯಿರಲಿ.

ಕರ್ಕಟಕ: ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಕಾರ್ಯರಂಗದಲ್ಲಿ ವಿಶೇಷ ಉನ್ನತಿ ಕಂಡುಬರುವುದು. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ.

ಸಿಂಹ: ಮನಸ್ಸಿನಲ್ಲಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಇದು ಸಕಾಲ. ಬೇರೆಯವರ ಬಗ್ಗೆ ಅನಗತ್ಯವಾಗಿ ಚಿಂತೆ ಮಾಡಲು ಹೋಗಿ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ದಿನದಂತ್ಯಕ್ಕೆ ನೆಮ್ಮದಿ ಕಂಡುಬರುವುದು.

ಕನ್ಯಾ: ಕಾರ್ಯರಂಗದಲ್ಲಿ ಉನ್ನತ ಸ್ಥಾನ ಮಾನಕ್ಕೇರಲು ಪ್ರಯತ್ನ ನಡೆಸಲಿದ್ದೀರಿ. ಇಷ್ಟಮಿತ್ರರ ಭೇಟಿ ಯೋಗವಿದೆ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ದರೆ ಉದರ ಸಂಬಂಧೀ ಆರೋಗ್ಯ ಸಮಸ್ಯೆಯಾದೀತು.

ತುಲಾ: ಧನಾರ್ಜನೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ದಾಂಪತ್ಯ ಜೀವನದಲ್ಲಿ ಅನುರಾಗ ವೃದ್ಧಿಯಾಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿ ಹೆಗಲಿಗೇರಲಿದೆ.

ವೃಶ್ಚಿಕ: ಅಧಿಕ ಓಡಾಟದಿಂದಾಗಿ ದೇಹಾಯಾಸವಾದೀತು. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಒದಗಿ ಬರಲಿವೆ. ಭೂಮಿ ಆಸ್ತಿ ಖರೀದಿ ವಿಚಾರದಲ್ಲಿ ಮುನ್ನಡೆ ಕಂಡುಬಂದೀತು.

ಧನು: ಸಾಂಸಾರಿಕವಾಗಿ ಜವಾಬ್ಧಾರಿ ಹೆಚ್ಚಾಗಲಿದೆ. ದೀರ್ಘ ಸಂಚಾರ ಮಾಡಬೇಕಾದ ಅನಿವಾರ್ಯತೆ ಎದುರಾದೀತು. ಸ್ವಯಂ ಉದ್ಯೋಗಿಗಳಿಗೆ ಆರ್ಥಿಕವಾಗಿ ಲಾಭ ಮಾಡಿಕೊಳ್ಳಲು ದಾರಿ ಸಿಗಲಿದೆ. ಅನಗತ್ಯ ಚಿಂತೆ ಬೇಡ.

ಮಕರ: ವಿಶೇಷವಾದ ವ್ಯಕ್ತಿಗಳನ್ನು ಭೇಟಿಯಾಗುವುದರಿಂದ ನಿಮ್ಮ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಕಾರ್ಯರಂಗದಲ್ಲಿ ಸಹೋದ್ಯೋಗಿಗಳ ನೆರವು ಪಡೆಯಲಿದ್ದೀರಿ.

ಕುಂಭ: ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡ ಕೊಂಚ ಕಡಿಮೆಯಾಗಲಿದೆ. ಉನ್ನತ ಸ್ಥಾನ ಮಾನಕ್ಕಾಗಿ ಪ್ರಯತ್ನ ನಡೆಲಿದ್ದೀರಿ. ಹಿರಿಯರಿಗೆ ದೇವತಾ ಕಾರ್ಯಗಳಲ್ಲಿ ಭಾಗಿಯಾಗುವ ಯೋಗ. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.

ಮೀನ: ಬಹಳ ದಿನಗಳಿಂದ ಮಾಡಬೇಕೆಂದುಕೊಂಡಿದ್ದ ಕೆಲಸ ಪೂರ್ತಿ ಮಾಡಲಿದ್ದೀರಿ. ಪರರ ಮೇಲೆ ಅವಲಂಬನೆ ಬೇಡ. ಸ್ವಯಂ ವೃತ್ತಿಯವರಿಗೆ ಲಾಭವಾದೀತು. ನೆರೆಹೊರೆಯವರೊಂದಿಗೆ ಸಂಬಂಧ ವೃದ್ಧಿಯಾಗಲಿದೆ. ತಾಳ್ಮೆಯಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

Durga Mantra: ದುರ್ಗಾ ಚಾಲೀಸ ಮಂತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments