ಮೇಷ: ಹಿರಿಯರಿಂದ ಸಮಯೋಚಿತ ಸಲಹೆಗಳು ಸಿಗಲಿವೆ. ಸಾಂಸಾರಿಕವಾಗಿ ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಮಕ್ಕಳ ಸಂತೋಷಕ್ಕಾಗಿ ಕೆಲವು ಕೆಲಸ ಮಾಡಬೇಕಾಗುತ್ತದೆ. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.
ವೃಷಭ: ವೃತ್ತಿರಂಗದಲ್ಲಿ ಸಮಚಿತ್ತರಾಗಿ ಕೆಲಸ ಮಾಡುವುದು ಉತ್ತಮ. ಕ್ರಿಯಾತ್ಮಕವಾಗಿ ಯೋಚನೆ ಮಾಡಬೇಕಾಗುತ್ತದೆ. ವ್ಯಾಪಾರಿಗಳಿಗೆ ಹೆಚ್ಚಿನ ಧನಾರ್ಜನೆಗೆ ಅವಕಾಶಗಳು ತೋರಿಬರಲಿವೆ. ಕಿರು ಸಂಚಾರ ಮಾಡಲಿದ್ದೀರಿ.
ಮಿಥುನ: ಬಂಧುಮಿತ್ರರಲ್ಲಿ ಪರಸ್ಪರ ಸಹಕಾರ ಕಂಡುಬರಲಿದೆ. ಆರ್ಥಿಕವಾಗಿ ಸಕಾಲದಲ್ಲಿ ನೆರವು ಸಿಗುವುದರಿಂದ ಅಂದುಕೊಂಡ ಕೆಲಸ ಪೂರ್ತಿ ಮಾಡಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.
ಕರ್ಕಟಕ: ಅನಗತ್ಯವಾಗಿ ನಿಮ್ಮಿಂದಾಗಿ ಇನ್ನೊಬ್ಬರಿಗೆ ತೊಂದರೆಯಾಗುವುದನ್ನು ತಪ್ಪಿಸಿ. ಮಾತಿನ ಮೇಲೆ ಸಂಯಮವಿರಲಿ. ಹಣಕಾಸಿನ ವಿಚಾರದಲ್ಲಿ ಕೆಲವೊಮ್ಮೆ ಸಾಹಸ ಪ್ರವೃತ್ತಿಗೆ ಕೈ ಹಾಕಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.
ಸಿಂಹ: ಉತ್ತಮ ಜನರ ಒಡನಾಟ, ಮಾತುಗಳು ಮನಸ್ಸಿನಲ್ಲಿರುವ ಗೊಂದಲಗಳಿಗೆ ಪರಿಹಾರ ನೀಡಲಿದೆ. ವಿಶೇಷವಾದ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ರಾಜಕೀಯ ರಂಗದಲ್ಲಿರುವವರಿಗೆ ಕೊಂಚ ಹಿನ್ನಡೆಯಾದರೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ.
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಅನಿವಾರ್ಯತೆ ಇತರರ ಅನುಭವಕ್ಕೆ ಬರಲಿದೆ. ಹಣಕಾಸಿನ ಆದಾಯದಲ್ಲಿ ವೃದ್ಧಿಯಾಗಲಿದೆ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ದಿನದಂತ್ಯಕ್ಕೆ ನೆಮ್ಮದಿ.
ತುಲಾ: ಕಾರ್ಯರಂಗದಲ್ಲಿ ನಿಮಗೆ ಅಡೆತಡೆಯಾಗಿರುವವರಿಂದ ಮುಕ್ತಿ ಪಡೆಯಲಿದ್ದೀರಿ. ಹೊಸ ವಿಚಾರಧಾರೆಗಳಿಗೆ ಮನ್ನಣೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಂಡುಬಂದೀತು. ಪೋಷಕರೊಂದಿಗೆ ವಾಗ್ವಾದ ಬೇಡ.
ವೃಶ್ಚಿಕ: ಕಾರ್ಯನಿಮಿತ್ತ ಅನ್ಯವೂರಿಗೆ ಪ್ರಯಾಣ ಮಾಡುವ ಸಂದರ್ಭಗಳು ಎದುರಾದೀತು. ಕೆಲವು ಸಮಯದಿಂದ ಕಾಡುತ್ತಿದ್ದ ಸಮಸ್ಯೆಗಳಿಗೆ ಆಪ್ತರಿಂದ ಪರಿಹಾರ ಕಂಡುಕೊಳ್ಳಲಿದ್ದೀರಿ. ಭೂಮಿ, ವಾಹನಾದಿ ಖರೀದಿಗೆ ಕಾಲ ಕೂಡಿಬರಲಿದೆ.
ಧನು: ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚವಾಗಲಿದೆ. ಮಕ್ಕಳ ಸಂತೋಷಕ್ಕಾಗಿ ಕೆಲವೊಂದು ಕೆಲಸ ಮಾಡಬೇಕಾಗುತ್ತದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ದೇಹಾರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಮಕರ: ಅನಗತ್ಯವಾಗಿ ಇನ್ನೊಬ್ಬರ ಸಮಸ್ಯೆಯಲ್ಲಿ ಮೂಗು ತೂರಿಸಲು ಹೋಗಿ ತೊಂದರೆಗೆ ಸಿಲುಕಿಕೊಳ್ಳಬೇಡಿ. ಆರೋಗ್ಯದಲ್ಲಿ ತೃಪ್ತಿದಾಯಕ ಸುಧಾರಣೆಯಾಗಲಿದೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಗಲಿದೆ.
ಕುಂಭ: ಬಹುದಿನಗಳ ನಂತರ ಇಷ್ಟಮಿತ್ರರನ್ನು ಭೇಟಿಯಾಗುವ ಯೋಗ ನಿಮ್ಮದಾಗಲಿದೆ. ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಲಿದೆ. ಹಿರಿಯರಿಗೆ ದಾನ ಧರ್ಮದಲ್ಲಿ ವಿಶೇಷ ಆಸಕ್ತಿ ಕಂಡುಬರುವುದು. ಅನಗತ್ಯ ಚಿಂತೆ ಬೇಡ.
ಮೀನ: ಕೌಟುಂಬಿಕವಾಗಿ ಸಾಮರಸ್ಯವಿರಲಿದ್ದು, ಹೊಸ ಅತಿಥಿಗಳ ಆಗಮನಕ್ಕೆ ಸಿದ್ಧತೆ ನಡೆಸಲಿದ್ದೀರಿ. ಮಹಿಳೆಯರಿಗೆ ಚಿನ್ನಾಭರಣಗಳನ್ನು ಖರೀದಿಸುವ ಯೋಗ. ಹಣಕಾಸಿನ ಹರಿವಿಗೆ ತೊಂದರೆಯಿರದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.