ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 20 ಮಾರ್ಚ್ 2022 (08:31 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಇತರರ ಮೇಲಿನ ನಿಮ್ಮ ಕಾಳಜಿ, ಬದ್ಧತೆ ಖಂಡಿತವಾಗಿಯೂ ನಿಮಗೆ ಗೌರವ ತಂದುಕೊಡಲಿದೆ. ಮಕ್ಕಳ ವಿಶೇಷ ಪ್ರೀತಿಗೆ ಪಾತ್ರರಾಗಲಿದ್ದೀರಿ. ವಿದ್ಯಾರ್ಥಿಗಳು ಶಿಕ್ಷಕರ ಪ್ರಶಂಸೆಗೊಳಗಾಗಲಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ನಿಮ್ಮ ಜೀವನದಲ್ಲಿ ಊಹಿಸಲಾಗದ ತಿರುವು ಸಿಗುವ ಸಾಧ‍್ಯತೆಯಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲ್ವರ್ಗಕ್ಕೆ ಬಡ್ತಿ ಪಡೆಯುವ ಯೋಗ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ತಾಳ್ಮೆ, ಸಂಯಮ ಅಗತ್ಯ.

ಮಿಥುನ: ಕಾರ್ಯರಂಗದಲ್ಲಿ ನಿಮ್ಮ ವೃತ್ತಪರತೆಯನ್ನು ಯಾರೂ ಪ್ರಶ್ನಿಸಲಾಗದು. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿದ ತೃಪ್ತಿ ನಿಮ್ಮದಾಗಲಿದೆ. ಬಹುದಿನಗಳ ನಂತರ ಇಷ್ಟ ಮಿತ್ರರ ಭೇಟಿಯಾಗುವ ಯೋಗ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಕರ್ಕಟಕ: ಸಾಮಾಜಿಕ ಕಾರ್ಯಗಳಿಂದಾಗಿ ಇತರರಿಂದ ಭೇಷ್ ಎನಿಸಿಕೊಳ್ಳಲಿದ್ದೀರಿ. ಮನಸ್ಸಿಗೆ ಹಿಡಿಸಿದವರ ಜೊತೆ ಮನದಾಳ ಹಂಚಿಕೊಳ್ಳಲಿದ್ದೀರಿ. ನೀವು ಅತಿಯಾಗಿ ಇಷ್ಟಪಡುತ್ತಿದ್ದ ವಸ್ತು ಕಳೆದುಕೊಳ್ಳುವ ಭೀತಿ ಎದರಾದೀತು.

ಸಿಂಹ: ವೃತ್ತಿರಂಗದಲ್ಲಿ ನೀವು ಅಂದುಕೊಂಡ ಸ್ಥಾನ ಮಾನ ಪಡೆಯಲು ಸಕಲ ಪ್ರಯತ್ನ ನಡೆಸಬೇಕಾಗುತ್ತದೆ. ಹೊಸದಾಗಿ ಉದ್ಯೋಗ ಆರಂಭಿಸಿದ್ದವರಿಗೆ ಸವಾಲುಗಳು ಎದುರಾದೀತು. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ.

ಕನ್ಯಾ: ವಿದ್ಯಾರ್ಥಿಗಳ ಸಾಧನೆ ಪೋಷಕರಿಗೆ ಹೆಮ್ಮೆಯುಂಟು ಮಾಡಲಿದೆ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ಬಹಳ ದಿನಗಳ ನಂತರ ಬಂಧು-ಮಿತ್ರರ ಭೇಟಿಯಾಗಲಿದ್ದೀರಿ. ಅನಗತ್ಯ ಚಿಂತೆ ಬೇಡ.

ತುಲಾ: ನಿಮಗೆ ಸಂಬಂಧಪಡದ ವಿಚಾರಗಳ ಬಗ್ಗೆ ಅತಿಯಾಗಿ ಯೋಚನೆ ಮಾಡಿ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ದೇಹಾರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಬೇಕಾಗುತ್ತದೆ. ಮಕ್ಕಳಿಗೆ ಉಡುಗೊರೆ ನೀಡಲಿದ್ದೀರಿ.

ವೃಶ್ಚಿಕ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಸೂಕ್ತ ವೈವಾಹಿಕ ಸಂಬಂಧ ಕೂಡಿಬರಲಿದೆ. ಸಂತಾನಪೇಕ್ಷಿತ ದಂಪತಿಗಳು ದೇವರ ಮೊರೆ ಹೋಗಲಿದ್ದಾರೆ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಮುನ್ನಡೆ ಕಂಡುಬರಲಿದೆ. ಚಿಂತೆ ಬೇಡ.

ಧನು: ನಿಮ್ಮ ಕೆಲಸದ ಹೊರೆಯನ್ನು ಇನ್ನೊಬ್ಬರಿಗೆ ವಹಿಸಲಿದ್ದೀರಿ. ಕೌಟುಂಬಿಕವಾಗಿ ಪರಸ್ಪರ ಸಹಕಾರ, ನೆಮ್ಮದಿ ಕಂಡುಬರಲಿದೆ. ಆದರೆ ದುಡುಕಿ ಮಾತನಾಡಬೇಡಿ. ಕೋರ್ಟು ಕಚೇರಿ ಕೆಲಸಗಳಲ್ಲಿ ಜಯ ಸಿಗುವುದು.

ಮಕರ: ಹೊಸ ಬಗೆಯ ಚಿಂತನೆಗಳು ನಿಮ್ಮ ಉತ್ಸಾಹ ಹೆಚ್ಚಿಸಲಿದೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಇಷ್ಟಾರ್ಥ ಸಿದ್ಧಿಗೆ ಕುಲದೇವರ ಪ್ರಾರ್ಥನೆ ನಡೆಸುವುದು ಉತ್ತಮ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿದರೆ ಉತ್ತಮ.

ಕುಂಭ: ಭವಿಷ್ಯದ ದೃಷ್ಟಿಯಿಂದ ಕೆಲವೊಂದು ಯೋಜನೆಗಳನ್ನು ಹಾಕಿಕೊಳ್ಳಲಿದ್ದೀರಿ. ಹೊಸ ಜನರ ಭೇಟಿಯಿಂದ ನಿಮ್ಮ ಕಾರ್ಯಸಾಧನೆಗೆ ಅನುಕೂಲವಾದೀತು. ಸ್ವಯಂ ಉದ್ಯೋಗಿಗಳಿಗೆ ಆರ್ಥಿಕವಾಗಿ ಉನ್ನತಿಯ ಯೋಗ.

ಮೀನ: ಮಹಿಳೆಯರಿಗೆ ಚಿನ್ನಾಭರಣಗಳ ಖರೀದಿ ಯೋಗ. ಉದ್ಯೋಗ ಕ್ಷೇತ್ರದಲ್ಲಿ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಅನಿವಾರ್ಯತೆ ಎದುರಾಗಲಿದೆ. ಹಣಕಾಸಿನ ಹರಿವಿಗೆ ತೊಂದರೆಯಿರದು. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ತಪ್ಪುಗಳಿಗೆ ಕ್ಷಮಾಪಣೆ ಸಿಗಬೇಕೆಂದರೆ ಶಿವನ ಈ ಸ್ತೋತ್ರ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಪಠಣದ ಅದ್ಭುತ ಪ್ರಯೋಜನಗಳು

ಮಹಾಲಕ್ಷ್ಮಿ ಅಷ್ಟಕಂ ಮತ್ತು ಅದರ ಸರಳ ಅರ್ಥ ಇಲ್ಲಿದೆ

ಶ್ರೀ ವೆಂಕಟೇಶ್ವರ ಪ್ರಪತ್ತಿ ಸ್ತೋತ್ರ

ಸರಸ್ವತಿ ಅಷ್ಟೋತ್ತರ ಶತನಾಮಾವಳಿ

ಮುಂದಿನ ಸುದ್ದಿ
Show comments