ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 3 ಮಾರ್ಚ್ 2022 (08:30 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಹೊಸ ವಸ್ತು ಖರೀದಿಸಬೇಕೆಂಬ ನಿಮ್ಮ ಹಂಬಲಕ್ಕೆ ಅನಿವಾರ್ಯವಾಗಿ ಕಡಿವಾಣ ಹಾಕಬೇಕಾಗುತ್ತದೆ. ದೇಹಾರೋಗ್ಯದ ಸಮಸ್ಯೆಗಳು ಚಿಂತೆಗೆ ಕಾರಣವಾಗಲಿದೆ. ಆದರೆ ಮಕ್ಕಳಿಂದ ಶುಭ ಸುದ್ದಿ ನಿರೀಕ್ಷಿಸಬಹುದು.

ವೃಷಭ: ಹಣಕಾಸಿನ ಖರ್ಚು ವೆಚ್ಚದಲ್ಲಿ ಹಿಡಿತ ಅಗತ್ಯ. ಸರ್ಕಾರಿ ಉದ್ಯೋಗಿಗಳಿಗೆ ಮುಂಬಡ್ತಿ ಯೋಗವಿದೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುವುದರಿಂದ ಸಂಭಾವ್ಯ ಅಪಾಯ ದೂರವಾಗಲಿದೆ.

ಮಿಥುನ: ವೃತ್ತಿರಂಗದಲ್ಲಿ ನಿಮಗೆ ಅನುಕೂಲಕರ ವಾತಾವರಣ ಕಂಡುಬರಲಿದೆ. ಮಹತ್ವದ ನಿರ್ಧಾರ ಕೈಗೊಳ್ಳುವ ಮುನ್ನ ಗುರುಹಿರಿಯರ ಅಭಿಪ್ರಾಯಗಳನ್ನು ಕೇಳಿಕೊಳ್ಳಿ. ವ್ಯಾಪಾರಿಗಳಿಗೆ ಅಭಿವೃದ್ಧಿ ಕಂಡುಬರಲಿದೆ. ಚಿಂತೆ ಬೇಡ.

ಕರ್ಕಟಕ: ಹೊಸದಾಗಿ ಉದ್ಯೋಗ ಆರಂಭಿಸಿದವರಿಗೆ ಸವಾಲುಗಳು ಸಾಮಾನ್ಯ. ಆತ್ಮವಿಶ್ವಾಸದಿಂದ ಎದರಿಸಬೇಕು. ಕಟ್ಟಡ ಕಾಮಗಾರಿ ಕೆಲಸಗಳಿಗೆ ಕೈ ಹಾಕಿದರೆ ವಿಘ್ನ ಭೀತಿ. ಕುಲದೇವರ ಪ್ರಾರ್ಥನೆ ನಡೆಸಿ ಮುನ್ನಡೆಯುವುದು ಉತ್ತಮ.

ಸಿಂಹ: ರಾಜಕೀಯ ರಂಗದಲ್ಲಿರುವವರಿಗೆ ಉನ್ನತ ಸ್ಥಾನ ಮಾನದ ಯೋಗ. ವೃತ್ತಿರಂಗದಲ್ಲಿ ನಿಮ್ಮ ಕೆಲಸಗಳಿಗೆ ಪ್ರಶಂಸೆ ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ಕರೆ ಬರಲಿದೆ. ಕಿರು ಸಂಚಾರ ಮಾಡಲಿದ್ದೀರಿ.

ಕನ್ಯಾ: ಅಧ್ಯಯನದಲ್ಲಿ ಆಸಕ್ತಿ, ಏಕಾಗ್ರತೆ ಹೆಚ್ಚಲಿದೆ. ಹೊಸ ಜನರ ಭೇಟಿಯಿಂದ ಮನಸ್ಸಿಗೆ ಸಂತೋಷವಾಗಲಿದೆ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲು ಮನಸ್ಸು ಹಾತೊರೆಯುವುದು. ದೇವಾಲಯ ಸಂದರ್ಶನ ಮಾಡಲಿದ್ದೀರಿ.

ತುಲಾ: ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ನಿಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರುವುದು.

ವೃಶ್ಚಿಕ: ಹೆಚ್ಚಿನ ಧನಾದಾಯ ಸಂಪಾದಿಸಲು ಹೊಸ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ಆದರೆ ಯಾರಿಗೂ ಇಂದು ಸಾಲ ಕೊಡಲು ಹೋಗಬೇಡಿ. ಮರಳಿ ಬಾರದು. ಎಚ್ಚರಿಕೆಯಿರಲಿ.

ಧನು: ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಏಕಾಗ್ರತೆಯ ಕೊರತೆ ಉಂಟಾದೀತು. ಯಂತ್ರೋಪಕರಣಗಳ ಕೆಲಸದಲ್ಲಿರುವವರಿಗೆ ಮುನ್ನಡೆ. ಸಂಗಾತಿಯ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಬಂಧುಮಿತ್ರರ ಭೇಟಿಯಾಗುವ ಯೋಗ.

ಮಕರ: ಮಾತಿನಲ್ಲಿ ಮನೆ ಕಟ್ಟುವುದಕ್ಕಿಂತ ಕಾರ್ಯ ಪ್ರವೃತ್ತರಾಗುವುದು ಉತ್ತಮ. ಬೇರೆಯವರು ಏನಂದುಕೊಳ‍್ಳುವರೋ ಎಂಬ ಕೀಳರಿಮೆ ಬೇಡ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ. ಸುಖ, ಸಂತೋಷವಿರಲಿದೆ.

ಕುಂಭ: ಉದ್ಯೋಗ ಕ್ಷೇತ್ರದಲ್ಲಿ ಅಡೆತಡೆಗಳಿದ್ದರೂ ನಿಮ್ಮ ಏಳಿಗೆಯನ್ನು ಯಾರಿಂದಲೂ ತಡೆಯಲಾಗದು. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗ.

ಮೀನ: ನೀವು ಇಂದು ಕೈಗೊಳ್ಳುವ ನಿರ್ಧಾರಗಳು ನಿಮ್ಮ ಭವಿಷ್ಯಕ್ಕೆ ಪೂರಕವಾಗಲಿದೆ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸರಿಯಾಗಿ ಯೋಚಿಸಿ ಹೆಜ್ಜೆಯಿಡುವುದು ಮುಖ್ಯ. ಸಾಂಸಾರಿಕವಾಗಿ ನೆಮ್ಮದಿಯ ದಿನಗಳಾಗಿರಲಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಕರ ಸಂಕ್ರಾಂತಿ ನಾಳೆಯಾ, ನಾಡಿದ್ದಾ.. ಕನ್ ಫ್ಯೂಷನ್ ಬೇಡ ಇಲ್ಲಿ ನೋಡಿ

ಏಕಾದಶಮುಖ ಹನುಮತ್ಕವಚ ಸ್ತೋತ್ರಂ ಕನ್ನಡದಲ್ಲಿ

ಕಾಶೀ ವಿಶ್ವನಾಥನ ಭಕ್ತರಾಗಿದ್ದರೆ ಈ ಸ್ತೋತ್ರ ತಪ್ಪದೇ ಓದಿ

ಶನಿ ದೋಷ ನಿವಾರಣೆಗೆ ದಶರಥ ಕೃತ ಶನಿ ಮಂತ್ರ ಕನ್ನಡದಲ್ಲಿ

ಅಭಿವೃದ್ಧಿಗಾಗಿ ಲಕ್ಷ್ಮೀ ದೇವಿಯ ಈ ಮಂತ್ರ ಪಠಿಸಿ

ಮುಂದಿನ ಸುದ್ದಿ
Show comments