ಮೇಷ: ಆರೋಗ್ಯದಲ್ಲಿ ತೃಪ್ತಿಕರ ಸುಧಾರಣೆ. ವ್ಯವಹಾರದಲ್ಲಿ ಅನುಕೂಲಕರ ವಾತಾವರಣವಿರಲಿದೆ. ಪ್ರೀತಿ ಪಾತ್ರರನ್ನು ಭೇಟಿಯಾಗುವ ಯೋಗ ಕೂಡಿಬರುವುದು. ಇಷ್ಟ ಭೋಜನ ಮಾಡಲಿದ್ದೀರಿ. ದೇವತಾ ಪ್ರಾರ್ಥನೆ ಮರೆಯದಿರಿ.
ವೃಷಭ: ನಿಮ್ಮ ಭವಿಷ್ಯ ರೂಪಿಸುವ ಯೋಜನೆಗಳನ್ನು ಹಾಕಿಕೊಳ್ಳಲಿದ್ದೀರಿ. ಕೆಲಸಗಳಲ್ಲಿ ಮುನ್ನಡೆಯಿದ್ದರೂ, ಸಂಗಾತಿಯ ಅಸಹಕಾರ ಮನಸ್ಸಿಗೆ ಕಿರಿ ಕಿರಿಯೆನಿಸೀತು. ವ್ಯಾಪಾರಿಗಳಿಗೆ ಆರ್ಥಿಕವಾಗಿ ಲಾಭವಾಗಲಿದೆ. ಚಿಂತೆ ಬೇಡ.
ಮಿಥುನ: ಅತಿಯಾದ ಯೋಚನೆಗಳಿಂದ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಮನೆಯವರೊಂದಿಗೆ ಚರ್ಚಿಸಿ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿ ಕಂಡುಬರುವುದು.
ಕರ್ಕಟಕ: ನಿಮ್ಮ ವ್ಯವಹಾರ, ಹಣಕಾಸಿನ ಲೆಕ್ಕಪತ್ರಗಳಲ್ಲಿ ಪಾರದರ್ಶಕತೆಗೆ ಒತ್ತು ನೀಡಿ. ಸಹೋದರಾದಿ ಸಂಬಂಧಿಗಳ ವಿವಾಹಕ್ಕೆ ಪ್ರಯತ್ನ ನಡೆಸಲಿದ್ದೀರಿ. ಮನೆಗೆ ನೆಂಟರಿಷ್ಟರ ಭೇಟಿ ಸಾಧ್ಯತೆ. ದಿನದಂತ್ಯಕ್ಕೆ ಸಂತೋಷದ ಸುದ್ದಿ.
ಸಿಂಹ: ಹಿಂದೆ ಮಾಡಿದ ತಪ್ಪುಗಳ ಬಗ್ಗೆ ಯೋಚಿಸುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಕ್ರಿಯಾತ್ಮಕ ಯೋಜನೆಗಳಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಸಮಾನ ಮನಸ್ಕರೊಂದಿಗೆ ಕಾಲ ಕಳೆಯಲಿದ್ದೀರಿ.
ಕನ್ಯಾ: ವ್ಯಾಪಾರ, ವ್ಯವಹಾರಕ್ಕೆ ಅನುಕೂಲಕರ ವಾತಾವರಣವಿರಲಿದೆ. ಮಾತಿನ ಮೇಲೆ ಹಿಡಿತವಿಲ್ಲದೇ ಹೋದರೆ ಸಂಬಂಧಗಳು ಹಾಳಾದೀತು. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರುವುದು.
ತುಲಾ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸಗಳಿಗೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ವ್ಯಾಪಾರೀ ವರ್ಗದವರಿಗೆ ಹಿತಶತ್ರುಗಳ ಕಾಟ ಕಂಡುಬಂದೀತು. ಆರ್ಥಿಕವಾಗಿ ಧನ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ.
ವೃಶ್ಚಿಕ: ನೂತನ ಮಿತ್ರರ ಸಮಾಗಮವಾಗಲಿದೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಉದ್ಯೋಗದಲ್ಲಿ ಬದಲಾವಣೆಗೆ ಮನಸ್ಸು ಮಾಡಲಿದ್ದೀರಿ.
ಧನು: ಬಹು ದಿನಗಳ ನಂತರ ಬಂಧು ಮಿತ್ರರನ್ನು ಭೇಟಿಯಾಗಲಿದ್ದೀರಿ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ದರೆ ಖಾಯಿಲೆಗೆ ಕಾರಣವಾದೀತು. ಮಕ್ಕಳ ಜೀವನದ ಬಗ್ಗೆ ಚಿಂತೆಯಾದೀತು. ಹಣಕಾಸಿನ ಹರಿವಿಗೆ ತೊಂದರೆಯಿರದು.
ಮಕರ: ಇಂದು ನೀವು ಕೈಗೊಳ್ಳುವ ನಿರ್ಧಾರಗಳು ಮುಂದಿನ ಜೀವನಕ್ಕೆ ಅಡಿಗಲ್ಲಾಗಲಿದೆ. ಯಂತ್ರೋಪಕರಣಗಳ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ. ಸರಕಾರಿ ಉದ್ಯೋಗಿಗಳಿಗೆ ಮುನ್ನಡೆಯ ಯೋಗವಿದೆ. ಚಿಂತೆ ಬೇಡ.
ಕುಂಭ: ಹಿರಿಯರ ಆಶೋತ್ತರಗಳನ್ನು ಪೂರೈಸಲು ಮುಂದಾಗಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಮಿತ್ರರನ್ನು ಸಂಪಾದಿಸಲಿದ್ದೀರಿ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ತಾಳ್ಮೆಯಿರಲಿ.
ಮೀನ: ಮನೆಗೆ ಅನಿರೀಕ್ಷಿತ ನೆಂಟರಿಷ್ಟರ ಆಗಮನ ಸಾಧ್ಯತೆ. ವಿಶೇಷವಾದ ವ್ಯಕ್ತಿಗಳಿಂದ ನಿಮ್ಮ ಜೀವನದಲ್ಲಿ ಸಂತೋಷದ ಗಳಿಗೆ ಆರಂಭವಾಗಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.