ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 6 ಫೆಬ್ರವರಿ 2022 (08:30 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ಕೌಟುಂಬಿಕವಾಗಿ ಪ್ರೀತಿ ಪಾತ್ರರೊಂದಿಗೆ ಸುಂದರ ಕ್ಷಣ ಕಳೆಯುವ ಯೋಗ. ಇಷ್ಟ ಭೋಜನ ಮಾಡಲಿದ್ದೀರಿ. ಆದರೆ ಉದರ ಸಂಬಂಧೀ ಆರೋಗ್ಯ ಸಮಸ್ಯೆಗಳಾಗಬಹುದು. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ.

ವೃಷಭ: ಭವಿಷ್ಯದ ನಿಟ್ಟಿನಲ್ಲಿ ಕೆಲವೊಂದು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದೀರಿ. ನಿಮ್ಮ ಕೆಲಸಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ. ಇಷ್ಟ ದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗಲಿದೆ.

ಮಿಥುನ: ಆಸ್ತಿ ಖರೀದಿ, ವಿಕ್ರಯ ವ್ಯವಹಾರಗಳಲ್ಲಿ ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಿ. ನೂತನ ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ನಿಮ್ಮ ದೇಹಾರೋಗ್ಯವನ್ನು ಗಮನದಲ್ಲಿಟ್ಟುಕೊಂಡು ವಿಶ್ರಾಂತಿ ಪಡೆಯಲು ಮನಸ್ಸು ಬಯಸಲಿದೆ. ಸಹೋದರಾದಿ ಸಂಬಂಧಿಗಳೊಂದಿಗಿನ ವೈಮನಸ್ಯಗಳು ದೂರವಾಗಲಿದೆ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ.

ಸಿಂಹ: ಹೊಸಬರು ನಿಮ್ಮ ಕೆಲಸಕ್ಕೆ ನೆರವಾಗಲಿದ್ದಾರೆ. ಮನೆ, ವಾಹನ ರಿಪೇರಿ ಇತ್ಯಾದಿ ಕೆಲಸಗಳಿಗೆ ಖರ್ಚು ವೆಚ್ಚಗಳಾದೀತು. ಹಿರಿಯರಿಗೆ ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಕಂಡುಬರಲಿದೆ. ದಿನದಂತ್ಯಕ್ಕೆ ನೆಮ್ಮದಿ.

ಕನ್ಯಾ: ಉದ್ಯೋಗ, ವ್ಯವಹಾರ ನಿಮಿತ್ತ ಅನ್ಯ ಊರಿಗೆ ಪ್ರಯಾಣ ಬೆಳೆಸಲಿದ್ದೀರಿ. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗಲಿದೆ. ಬೇರೆಯವರು ನಿಮ್ಮ ಬಗ್ಗೆ ಹೇಳುವ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ.

ತುಲಾ: ಬಹುದಿನಗಳ ಕನಸು ನನಸು ಮಾಡಿಕೊಳ್ಳಲು ಪ್ರಯತ್ನಿಸಲಿದ್ದೀರಿ. ಹೊಸದಾಗಿ ಮದುವೆಯಾದವರಿಗೆ ಹೊಂದಾಣಿಕೆ ಕೊರತೆ ಉಂಟಾಗಬಹುದು. ಹಿರಿಯರ ಸಲಹೆಗಳನ್ನು ಪಾಲಿಸುವುದು ಉತ್ತಮ. ಅತಿಥಿಗಳ ಆಗಮನಕ್ಕೆ ಸಿದ್ಧರಾಗಿ.

ವೃಶ್ಚಿಕ: ನಿಮ್ಮ ಕೆಲವೊಂದು ನಿರ್ಧಾರಗಳು ಕುಟುಂಬ ಸದಸ್ಯರಿಗೆ ಇಷ್ಟವಾಗದೇ ಹೋಗಬಹುದು. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ. ಪ್ರೀತಿ ಪಾತ್ರರನ್ನು ಭೇಟಿಯಾಗುವ ಯೋಗ ಕೂಡಿಬರಲಿದೆ.

ಧನು: ಮಹಿಳೆಯರಿಗೆ ಚಿನ್ನಾಭರಣಗಳನ್ನು ಖರೀದಿ ಮಾಡುವ ಯೋಗ ಕೂಡಿಬರಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆ ಕಂಡುಬರುವುದು.

ಮಕರ: ವಿಶೇಷವಾದ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ಹಿರಿಯರಿಗೆ ದಾನ ಧರ್ಮಾದಿ ಕಾರ್ಯಗಳಲ್ಲಿ ಆಸಕ್ತಿ ಕಂಡುಬರುವುದು. ಹೊಸ ವಸ್ತು ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕುಂಭ: ಮಕ್ಕಳ ಮೇಲಿನ ವಿಶೇಷ ಮಮಕಾರದಿಂದ ಕೆಲವೊಂದು ತ್ಯಾಗಕ್ಕೆ ಸಿದ್ದರಾಗಬೇಕಾಗುತ್ತದೆ. ಕೌಟುಂಬಿಕವಾಗಿ ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿ ನೀವಿರಲಿದ್ದೀರಿ. ಶುಭ ಮಂಗಲ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.

ಮೀನ: ನಿಮ್ಮ ವಾಕ್ಚತುರತೆಯಿಂದ ಇತರರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಲಾಭವಿಲ್ಲದಿದ್ದರೂ ನಷ್ಟವಾಗದು. ಮನೆಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳಾದೀತು. ತಾಳ್ಮೆಯಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ವೆಂಕಟೇಶ ಮಂಗಳಶಾಸನಂ ಸ್ತೋತ್ರ ತಪ್ಪದೇ ಓದಿ

ಗಣಪತಿ ತಾಳಂ ಸ್ತೋತ್ರ ನಿಮಗೆ ಗೊತ್ತಿಲ್ಲದಿದ್ದರೆ ಇಲ್ಲಿ ನೋಡಿ

ಸಂಜೆ ಸಮಯದಲ್ಲಿ ಈ ಸ್ತೋತ್ರಗಳನ್ನು ಕೇಳಿದ್ರೆ ಮನೆಯಲ್ಲಿ ಶಾಂತಿ ನೆಲೆಸುತ್ತೆ

ದುರ್ಗಾ ದೇವಿಯ ಪವರ್ ಫುಲ್ ಮಂತ್ರವನ್ನು ಇಂದು ತಪ್ಪದೇ ಪಠಿಸಿ

ಶಿವ ಅಷ್ಟೋತ್ತರ ಶತನಾಮಾವಾಳಿ ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments