ಮೇಷ: ಆಸ್ತಿ ವಿಚಾರದಲ್ಲಿ ಸಹೋದರರೊಂದಿಗೆ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ. ಕೌಟುಂಬಿಕವಾಗಿ ಹೆಚ್ಚಿನ ಜವಾಬ್ಧಾರಿಗಳು ಹೆಗಲಿಗೇರಲಿವೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ಚಿಂತೆ ಬೇಡ.
ವೃಷಭ: ಸುಲಭವೆನ್ನುವ ವಿಚಾರವೂ ಕಷ್ಟವಾದಂತೆ ಭಾಸವಾಗಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗಲಿದೆ. ದೇವರಾ ಪ್ರಾರ್ಥನೆ ಮಾಡಿ.
ಮಿಥುನ: ತೊಲಗಿತು ಎಂಬ ಸಮಸ್ಯೆ ಮತ್ತೆ ಕಾಡಲಿದೆ. ದೇಹಾರೋಗ್ಯದ ಬಗ್ಗೆ ಅತೀವ ಕಾಳಜಿ ಅಗತ್ಯ. ಉದ್ಯೋಗ ಕ್ಷೇತ್ರದಲ್ಲಿ ಕಷ್ಟದ ಸಮಯದಲ್ಲಿ ಸಹೋದ್ಯೋಗಿಗಳ ಸಹಾಯ ದೊರೆಯಲಿದೆ. ದಿನದಂತ್ಯಕ್ಕೆ ಶುಭವಾಗಲಿದೆ.
ಕರ್ಕಟಕ: ಮಾನಸಿಕವಾಗಿ ಕೆಲವೊಂದು ವಿಚಾರಗಳು ಕೊರೆಯುತ್ತಿದ್ದು, ಅದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಲಿದೆ. ತಾಯಿಯವರ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಆರ್ಥಿಕವಾಗಿ ಹೆಚ್ಚಿನ ಧನ ಗಳಿಕೆಗೆ ಅವಕಾಶಗಳು ಸಿಗಲಿವೆ.
ಸಿಂಹ: ವೃತ್ತಿರಂಗದಲ್ಲಿ ಸಮಸ್ಯೆಗಳು ಬಂದಾಗ ಕ್ರಿಯಾತ್ಮಕವಾಗಿ ಯೋಚಿಸಿ ಪರಿಹಾರ ಕಂಡುಕೊಳ್ಳಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾಗಲಿವೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಮಾನ ಗೌರವಾದಿಗಳ ಸಂಪಾದನೆ ಮಾಡಲಿದ್ದೀರಿ. ನಿಮ್ಮ ಮಾತುಗಳನ್ನು ಇತರರು ಆಲಿಸಲಿದ್ದಾರೆ. ಉದ್ಯೋಗ ವ್ಯವಹಾರದಲ್ಲಿ ಬದಲಾವಣೆಗೆ ಮನಸ್ಸು ಬಯಸಲಿದೆ. ದೇವತಾ ಪ್ರಾರ್ಥನೆ ಮಾಡಿ.
ತುಲಾ: ಅನಿರೀಕ್ಷಿತವಾಗಿ ಧನಾಗಮನವಾಗಲಿದ್ದು, ಹೊಸ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ಕಟ್ಟಡ ಕಾಮಗಾರಿ ಕೆಲಸಗಳಲ್ಲಿ ಮುನ್ನಡೆ ಕಂಡುಬರಲಿದೆ. ಸರಕಾರಿ ನೌಕರರಿಗೆ ಕಾರ್ಯದೊತ್ತಡವಿರಲಿದೆ. ತಾಳ್ಮೆಯಿರಲಿದೆ.
ವೃಶ್ಚಿಕ: ನಾನಾ ರೀತಿಯ ಚಟುವಟಿಕೆಗಳಿಂದಾಗಿ ದೇಹಾಯಾಸವಾದೀತು. ಹಿರಿಯರಿಗೆ ಪುಣ್ಯ ಕ್ಷೇತ್ರಗಳಿಗೆ ಸಂದರ್ಶಿಸುವ ಯೋಗ ಕೂಡಿಬರುವುದು. ದೂರದ ವ್ಯವಹಾರದಲ್ಲಿ ಮುನ್ನಡೆ ಕಂಡುಬರಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.
ಧನು: ಮಾತನಾಡಿ ಅನಗತ್ಯವಾಗಿ ಇತರರ ನಿಷ್ಠುರಕ್ಕೆ ಕಾರಣವಾಗುವ ಬದಲು ಮೌನವಾಗುವುದೇ ಲೇಸು. ಕಾರ್ಯಕ್ಷೇತ್ರದಲ್ಲಿ ನಿಮ್ಮ ಸಹನೆ ಪರೀಕ್ಷೆಯಾಗುವ ಸಂದರ್ಭಗಳು ಎದುರಾದೀತು. ಪರಿಶ್ರಮ ಪಡಬೇಕಾಗುತ್ತದೆ.
ಮಕರ: ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳನ್ನು ಪೂರ್ತಿ ಮಾಡಲು ಮುಂದಾಗಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವುದು ಮುಖ್ಯ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.
ಕುಂಭ: ಸಾಂಸಾರಿಕವಾಗಿ ಸಮೃದ್ಧಿ ಕಂಡುಬರಲಿದೆ. ಆದರೆ ಸಂಗಾತಿಯ ದೇಹಾರೋಗ್ಯದಲ್ಲಿ ಏರುಪೇರಾದೀತು, ಎಚ್ಚರಿಕೆ ಅಗತ್ಯ. ಆಸ್ತಿ-ಕಟ್ಟಡ ಖರೀದಿ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಪ್ರೇಮಿಗಳಿಗೆ ಶುಭ ದಿನವಾದೀತು.
ಮೀನ: ಕಾರ್ಯನಿಮಿತ್ತ ಪರವೂರಿಗೆ ಸಂಚರಿಸುವ ಪರಿಸ್ಥಿತಿ ಬಂದೀತು. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರುವುದು. ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳು ಕಂಡುಬಂದೀತು. ದಾಂಪತ್ಯದಲ್ಲಿ ನೆಮ್ಮದಿ.