ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 10 ಜನವರಿ 2022 (08:30 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ಉದ್ಯೋಗ ಸಂಬಂಧವಾದ ಕಾಗದ ಪತ್ರಗಳನ್ನು ಜೋಪಾನವಾಗಿಟ್ಟುಕೊಳ್ಳಿ. ಸಂಗಾತಿಯೊಂದಿಗೆ ಮುಕ್ತವಾಗಿ ಮನಸ್ಸಿನ ಮಾತು ಹಂಚಿಕೊಳ್ಳುವುದರಿಂದ ಹಗುರವಾಗಲಿದ್ದೀರಿ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ವೃತ್ತಿರಂಗದಲ್ಲಿ ಸದವಕಾಶಗಳು ಬಂದಾಗ ಸರಿಯಾಗಿ ಬಳಸಿಕೊಳ್ಳಿ. ಸಾಮಾಜಿಕವಾಗಿ ನಿರೀಕ್ಷಿತ ಸ್ಥಾನ ಮಾನ ಗೌರವಾದಿಗಳು ಲಭ್ಯವಾಗಲಿದೆ. ಧನಾದಾಯ ಹೆಚ್ಚು ಮಾಡಲು ಹೊಸ ದಾರಿಗಳನ್ನು ಕಂಡುಕೊಳ್ಳಲಿದ್ದೀರಿ.

ಮಿಥುನ: ಮನೆಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಕಂಡುಬರಲಿದೆ. ಸಹೋದರಾದಿಗಳೊಂದಿಗಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲು ಮುಂದಾಗಲಿದ್ದೀರಿ. ಸಾಮಾಜಿಕವಾಗಿ ಕೀರ್ತಿ ಸಂಪಾದಿಸುವ ಯೋಗ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕರ್ಕಟಕ: ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರುವುದು. ಪಾಲುದಾರಿಕೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡುಬರಲಿದೆ. ದಿನದಂತ್ಯಕ್ಕೆ ನೆಮ್ಮದಿ ಸಿಗುವುದು.

ಸಿಂಹ: ಸಾಂಸಾರಿಕವಾಗಿ ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳುವಾಗ ಸಂಗಾತಿಯೊಂದಿಗೆ ಪರಾಮರ್ಶಿಸಿ. ದೂರದ ನೆಂಟರಿಷ್ಟರ ಸಮಾಗಮವಾಗಲಿದೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು.

ಕನ್ಯಾ: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಒದಗಿಬರಲಿವೆ. ಉದ್ಯೋಗ ವ್ಯವಹಾರದಲ್ಲಿ ಬದಲಾವಣೆ ಕಂಡುಬರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ತುಲಾ: ನಿರೀಕ್ಷೆಗೂ ಮೀರಿದ ದನಾರ್ಜನೆಯಾಗಲಿದ್ದು, ಹೊಸ ವ್ಯವಹಾರಗಳಿಗೆ ಕೈ ಹಾಕಲಿದ್ದೀರಿ. ಸರಕಾರಿ ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ. ಅಪರಿಚಿತ ವ್ಯಕ್ತಿಗಳಿಂದಲೂ ನಿಮ್ಮ ಕೆಲಸಗಳಿಗೆ ಸಹಕಾರ ಸಿಗುವುದು. ತಾಳ್ಮೆಯಿರಲಿ.

ವೃಶ್ಚಿಕ: ನಿಮ್ಮ ಕೆಲಸ ಕಾರ್ಯಗಳಿಗೆ ಬಂಧು ಮಿತ್ರರಿಂದ ಪ್ರೋತ್ಸಾಹ, ಸಹಕಾರ ಕಂಡುಬರುವುದು. ಮನೆಗೆ ಅಗತ್ಯ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ವ್ಯಾಪಾರೀ ವರ್ಗದವರಿಗೆ ಮುನ್ನಡೆಯ ಯೋಗ.

ಧನು: ಗುರುಹಿರಿಯರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಹಣಕಾಸಿನ ವಿಚಾರಗಳಲ್ಲಿ ಆಪ್ತರೊಂದಿಗೆ ವೈಮನಸ್ಯಗಳಾಗದಂತೆ ಎಚ್ಚರಿಕೆ ವಹಿಸಿ. ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡವಿರುವುದು.

ಮಕರ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ ಕಂಡುಬರುವುದು. ಮಕ್ಕಳ ಭವಿಷ್ಯಕ್ಕಾಗಿ ಹೊಸ ಯೋಜನೆಗಳನ್ನು ಹಾಕಿಕೊಳ್ಳಲಿದ್ದೀರಿ. ಸಾಂಸಾರಿಕವಾಗಿ ಸುಖ, ನೆಮ್ಮದಿ ಕಂಡುಬರಲಿದೆ.

ಕುಂಭ: ಸಾಂಸಾರಿಕವಾಗಿ ಮಧ್ಯಮ ಸುಖ, ಆರ್ಥಿಕವಾಗಿ ಖರ್ಚು ವೆಚ್ಚಗಳನ್ನು ಸರಿದೂಗಿಸಿಕೊಂಡು ಹೋಗುವ ಅನಿವಾರ್ಯತೆ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ದೇವರ ಪ್ರಾರ್ಥನೆ ಮಾಡಿ.

ಮೀನ: ಆಸ್ತಿ ವಿಚಾರದಲ್ಲಿ ಸಹೋದರರೊಂದಿಗೆ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ. ಉದ್ಯೋಗ, ವ್ಯವಹಾರದಲ್ಲಿ ಬದಲಾವಣೆಗೆ ಪ್ರಯತ್ನಿಸಲಿದ್ದೀರಿ. ಸಂಗಾತಿಯ ಬಹುದಿನಗಳ ಕನಸು ನನಸು ಮಾಡಲು ಮುಂದಾಗಲಿದ್ದೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಜೆ ದೀಪ ಹಚ್ಚುವಾಗ ಪಠಿಸಬಹುದಾದ ಸ್ತೋತ್ರಗಳು ಇಲ್ಲಿವೆ

ಕೆಟ್ಟ ದೃಷ್ಟಿ ನಿವಾರಿಸಿ ಸಂಪತ್ತು ವೃದ್ಧಿಗೆ ಈ ಲಕ್ಷ್ಮೀ ಮಂತ್ರ ಪಠಿಸಿ

ಸಂಜೆ ದೀಪ ಹಚ್ಚುವ ಅತ್ಯಂತ ಮಂಗಳಕರ ಸಮಯ ಯಾವುದು ಗೊತ್ತಾ

ಮೇಷಾದಿ ದ್ವಾದಶ ರಾಶಿಫಲ 2026: ಖ್ಯಾತ ಜ್ಯೋತಿಷಿ ಶ್ರೀ ವೆಂಕಟೇಶ್ವರ ಭಟ್ ಅವರಿಂದ

ಬುಧವಾರ ಗಣೇಶನ ಅನುಗ್ರಹಕ್ಕೆ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments