Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 9 ಜನವರಿ 2022 (08:30 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಹಿರಿಯರಿಂದ ನಿಮ್ಮ ಸುಖ-ಸಂತೋಷ ವೃದ್ಧಿಯಾಗಲಿದೆ. ಆರೋಗ್ಯದ ವಿಚಾರದಲ್ಲಿ ನಿರ್ಲ್ಯಕ್ಷ ಬೇಡ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾದೀತು. ಮಾತಿನ ಮೇಲೆ ನಿಗಾ ಇರಲಿ.

ವೃಷಭ: ಸಂಗಾತಿಯೊಂದಿಗೆ ಸಹನೆ ಕಳೆದುಕೊಂಡು ಮಾತನಾಡುವುದರಿಂದ ಮನೆಯಲ್ಲಿ ಶಾಂತಿ ಭಂಗವಾದೀತು. ಹೊಸ ಕೆಲಸಗಳಿಗೆ ಕೈ ಹಾಕಲು ಕೆಲವು ದಿನ ಕಾಯುವುದು ಒಳಿತು. ಹಣಕಾಸಿನ ಹರಿವಿಗೆ ತೊಂದರೆಯಿರದು.

ಮಿಥುನ: ದೈಹಿಕವಾಗಿ ಆರೋಗ್ಯ ಸುಧಾರಣೆಯಾಗಲಿದ್ದು, ಮಾನಸಿಕ ನೆಮ್ಮದಿಗಾಗಿ ದೇವರ ಮೊರೆ ಹೋಗಲಿದ್ದೀರಿ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಕಾರ್ಯನಿಮಿತ್ತ ದೂರ ಸಂಚಾರಕ್ಕೆ ಸಿದ್ಧತೆ ನಡೆಸುವಿರಿ.

ಕರ್ಕಟಕ: ನಿಮ್ಮ ವ್ಯವಹಾರ ಚತುರತೆ ಇತರರ ಮೆಚ್ಚುಗೆಗೆ ಪಾತ್ರವಾಗಲಿದೆ. ಕಾರ್ಯನಿಮಿತ್ತ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ನೆರೆಹೊರೆಯವರಿಂದ ಸಹಾಯವೊದಗಿಬರುವುದು. ದೇವತಾ ಪ್ರಾರ್ಥನೆ ಮಾಡಿ.

ಸಿಂಹ: ಅತಿಯಾದ ಸ್ನೇಹ, ಸಲುಗೆ ನಿಮಗೆ ಮುಳುವಾಗುವ ಸಾಧ‍್ಯತೆಯಿದೆ. ಕಾರ್ಯಕ್ಷೇತ್ರದಲ್ಲಿ ಇನ್ನೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಪೂರ್ತಿ ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಕಠಿಣ ಪರೀಕ್ಷೆ ಎದುರಾಗಲಿದೆ.

ಕನ್ಯಾ: ಸಾಂಸಾರಿಕವಾಗಿ ದಾಂಪತ್ಯ ಸುಖಕ್ಕೆ ತೊಂದರೆಯಾಗದು. ಮಕ್ಕಳ ದೇಹಾರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಆರ್ಥಿಕವಾಗಿ ಸ್ಥಿತಿ ಗತಿ ಸುಧಾರಿಸಲು ಪ್ರಯತ್ನಿಸಲಿದ್ದೀರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ತುಲಾ: ಕೆಲವೊಂದು ಅವಕಾಶಗಳು ಕೈಗೆ ಬಂತು ಎನ್ನುವಾಗ ತಪ್ಪಿ ಹೋದ ಬೇಸರ ಕಾಡಲಿದೆ. ವೈಯಕ್ತಿಕ ಜೀವನದಲ್ಲಿ ಮೂರನೆಯವರ ಪ್ರವೇಶಕ್ಕೆ ಅವಕಾಶ ಕೊಡಬೇಡಿ. ಸಂಗಾತಿಯ ಹಿತವಚನಗಳನ್ನು ಪಾಲಿಸುವುದು ಉತ್ತಮ.

ವೃಶ್ಚಿಕ: ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಹಣ ಗಳಿಕೆಗೆ ಹೊಸ ದಾರಿ ಕಂಡುಕೊಳ್ಳಬೇಕಾಗುತ್ತದೆ.

ಧನು: ನಿಮ್ಮ ಮನಸ್ಸಿನ ಮಾತುಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಮನೆ, ವಾಹನ ರಿಪೇರಿ ಕೆಲಸಗಳಿಗೆ ಖರ್ಚು ವೆಚ್ಚಗಳಗಾಗುವ ಸಾಧ‍್ಯತೆ.

ಮಕರ: ಅನವಶ್ಯಕ ಸಂಚಾರಕ್ಕೆ ಆಸ್ಪದ ಕೊಡಬೇಡಿ. ಬಂಧು ಜನರೊಂದಿಗೆ ಸಂಬಂಧ ವೃದ್ಧಿಗೆ ಪ್ರಯತ್ನಿಸಲಿದ್ದೀರಿ. ವಿದ್ಯಾರ್ಥಿಗಳ ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಕಾರ್ಯನಿಮಿತ್ತ ಓಡಾಟ ನಡೆಸಲಿದ್ದೀರಿ.

ಕುಂಭ: ವೃತ್ತಿರಂಗದಲ್ಲಿ ನಿಮಗೆ ಅಡ್ಡಗಾಲು ಹಾಕುತ್ತಿರುವವರಿಂದ ಮುಕ್ತಿ ಸಿಗಲಿದೆ. ಹಿಂದೆ ಹೂಡಿದ್ದ ಬಂಡವಾಳಕ್ಕೆ ತಕ್ಕ ಫಲ ಪಡೆಯಲಿದ್ದೀರಿ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರುವುದು. ಕುಲದೇವರ ಪ್ರಾರ್ಥನೆ ಮಾಡಿ.

ಮೀನ: ಪ್ರೇಮ ನಿವೇದನೆ ಮಾಡಿಕೊಳ್ಳಲು ಉತ್ತಮ ದಿನ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ವೃತ್ತಿರಂಗದಲ್ಲಿ ಬದಲಾವಣೆಗೆ ಪ್ರಯತ್ನ ನಡೆಸಲಿದ್ದೀರಿ. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗವಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments