Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 22 ಡಿಸೆಂಬರ್ 2021 (08:33 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ನಯವಾದ ಮಾತುಗಳಿಂದ ಬೇಳೆ ಬೇಯಿಸಿಕೊಳ್ಳುವವರ ಬಗ್ಗೆ ಎಚ್ಚರಿಕೆಯಿಂದಿರಿ. ಸಾಂಸಾರಿಕವಾಗಿ ತಾಳ್ಮೆಯೇ ನಿಮ್ಮ ಅಸ್ತ್ರವಾಗಬೇಕು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಮನಸ್ಸಿಗೆ ಸಂತೋಷವಾಗಲಿದೆ.

ವೃಷಭ: ಕುಟುಂಬ ಸದಸ್ಯರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ನಿರ್ಧಾರ ತೆಗೆದುಕೊಳ್ಳಿ. ದಾಯಾದಿ ಕಲಹಗಳಿಗೆ ಪರಿಹಾರ ಸಿಗಲಿದೆ. ವೈಯಕ್ತಿಕ ಜೀವನದಲ್ಲಿ ಪ್ರಗತಿ ಕಂಡುಬಂದೀತು. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣವಿರಲಿ.

ಮಿಥುನ: ವಿಶೇಷವಾದ ವ್ಯಕ್ತಿಗಳಿಂದ ನಿಮ್ಮ ಕೆಲಸಕ್ಕೆ ಅನುಕೂಲವಾಗಲಿದೆ. ಹೊಸದಾಗಿ ಉದ್ದಿಮೆ ಆರಂಭಿಸಿದವರಿಗೆ ಅಡೆತಡೆಗಳು ಕಂಡುಬಂದರೂ ಅಂತಿಮ ಯಶಸ್ಸು ಸಿಗಲಿದೆ. ಮಹಿಳೆಯರಿಗೆ ಕೆಲಸದೊತ್ತಡವಿದ್ದೀತು.

ಕರ್ಕಟಕ: ನಿಮ್ಮನ್ನು ಇತರರು ನೋಡಿಕೊಳ್ಳುವ ದೃಷ್ಟಿಕೋನವೇ ಬದಲಾಗಲಿದೆ. ಸಾಮಾಜಿಕವಾಗಿ ಸ್ಥಾನ ಮಾನ ನಿಮ್ಮದಾಗಲಿದೆ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗುವುದು. ಆರಾಮದಾಯಕ ದಿನವಾಗಿರಲಿದೆ.

ಸಿಂಹ: ಕೆಲಸದ ಬಗ್ಗೆ ನಿಮ್ಮ ಅಸಮಾಧಾನಗಳು ನಿವಾರಣೆಯಾಗಲಿದೆ. ಮೇಲಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿದ್ದೀರಿ. ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ಕಿರು ಸಂಚಾರ ಮಾಡುವಿರಿ.

ಕನ್ಯಾ: ಅನಿವಾರ್ಯ ಕಾರಣಗಳಿಗೆ ದೂರ ಸಂಚಾರ ಮಾಡುವ ಸಂದರ್ಭ ಎದುರಾದೀತು. ನೀರಿನ ವಿಚಾರದಲ್ಲಿ ನೆರೆಹೊರೆಯವರೊಂದಿಗೆ ಸಂಘರ್ಷವಾಗದಂತೆ ಎಚ್ಚರಿಕೆ ವಹಿಸಿ. ದೇವತಾ ಪ್ರಾರ್ಥನೆ ಮರೆಯದಿರಿ.

ತುಲಾ: ತಲೆಮಾರುಗಳಿಂದ ಬಂದ ಸಂಪ್ರದಾಯ ಮುಂದುವರಿಸಿಕೊಂಡು ಹೋಗಲು ಕ್ರಮಕೈಗೊಳ್ಳಲಿದ್ದೀರಿ. ಹಿರಿಯರು ಸಕಾಲದಲ್ಲಿ ನೀಡುವ ಸಲಹೆಗಳು ಉಪಯೋಗಕ್ಕೆ ಬರಲಿವೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ವೃಶ್ಚಿಕ: ಅಗತ್ಯ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾದೀತು. ವ್ಯಾಪಾರಿಗಳಿಗೆ ಸಮೃದ್ಧಿಯ ದಿನವಾಗಿರಲಿದೆ. ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಕೀಳರಿಮೆ ಬೇಡ. ಕೃಷಿಕರಿಗೆ ಕೈಗೆ ಬಂದ ಬೆಳೆಗೆ ತಕ್ಕ ಬೆಲೆ ಸಿಗುವುದು.

ಧನು: ಮಹಿಳೆಯರು ಅಡುಗೆ ಮನೆ ವಿಚಾರದಲ್ಲಿ ಅನಾಹುತಗಳಾಗದಂತೆ ಎಚ್ಚರಿಕೆ ವಹಿಸುವುದು ಉತ್ತಮ. ಮಕ್ಕಳಿಂದ ಸಂತೋಷದ ವಾರ್ತೆ ಕೇಳಿಬಂದೀತು. ಮನೆಗೆ ನೆಂಟರಿಷ್ಟರ ಆಗಮನಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಮಕರ: ಉದ್ದಿಮೆದಾರರಿಗೆ ಇಂದು ಲಾಭದಾಯಕ ದಿನವಾಗಿರಲಿದೆ. ಹೊಸದಾಗಿ ವ್ಯವಹಾರ ಆರಂಭಿಸಲು ಇದು ಸಕಾಲ. ವಾಹನ ಸವಾರರು ಚಾಲನೆಯಲ್ಲಿ ಎಚ್ಚರಿಕೆ ವಹಿಸುವುದು ಸೂಕ್ತ. ಆಪ್ತ ಮಿತ್ರರ ಭೇಟಿಯಾಗಲಿದ್ದೀರಿ.

ಕುಂಭ: ಅನಿರೀಕ್ಷಿತವಾಗಿ ಧನಾಗಮನವಾಗಲಿದ್ದು, ಅಂದುಕೊಂಡ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಇಷ್ಟ ಭೋಜನ ಸವಿಯುವ ಯೋಗ ನಿಮ್ಮದಾಗಲಿದೆ. ಯೋಗ್ಯ ವಯಸ್ಕರಿಗೆ ವೈವಾಹಿಕ ಸಂಬಂಧಗಳು ಕೂಡಿಬರಲಿದೆ.

ಮೀನ: ನಿಮ್ಮ ಅಚ್ಚುಕಟ್ಟುತನ ಬೇರೆಯವರಿಗೂ ಇಷ್ಟವಾಗಲಿದೆ. ನೆರೆಹೊರೆಯವರೊಂದಿಗೆ ಅನಗತ್ಯ ಸಂಘರ್ಷ ಬೇಡ. ಹೊಸದಾಗಿ ಮದುವೆಯಾದವರಿಗೆ ಮಧುಚಂದ್ರದ ಯೋಗವಿದೆ. ಖರ್ಚು ವೆಚ್ಚದ ಬಗ್ಗೆ ನಿಗಾ ಇರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

Tulsi Mantra: ಹೆಣ್ಣು ಮಕ್ಕಳಿಗಾಗಿ ತುಳಸಿ ಅಷ್ಟೋತ್ತರ ಮಂತ್ರ ಇಲ್ಲಿದೆ

Parashurama Stuthi: ಪ್ರತಿನಿತ್ಯ ಬೆಳಿಗ್ಗೆ ಪರಶುರಾಮ ಸ್ತುತಿ ಓದಿ, ಎಷ್ಟು ಲಾಭವಿದೆ ನೋಡಿ

ಮುಂದಿನ ಸುದ್ದಿ
Show comments