ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 21 ಡಿಸೆಂಬರ್ 2021 (08:32 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಸಂಗಾತಿಯ ಮಾತುಗಳು ಈಗ ಅಪಥ್ಯವೆನಿಸಿದರೂ ಭವಿಷ್ಯದ ದೃಷ್ಟಿಯಿಂದ ಸರಿಯಾಗಿರಲಿದೆ. ಸಾಂಸಾರಿಕವಾಗಿ ಕೆಲವೊಂದು ಸೂಕ್ಷ್ಮಗಳನ್ನು ಅರಿತು ನಡೆಯಬೇಕು. ಆರ್ಥಿಕವಾಗಿ ಸಬಲರಾಗುವ ಯೋಜನೆ ರೂಪಿಸಲಿದ್ದೀರಿ.

ವೃಷಭ: ಸಹೋದರ ವರ್ಗದವರ ನಿರ್ಧಾರಗಳು ನಿಮ್ಮ ಅಸಮಾಧಾನಕ್ಕೆ ಗುರಿಯಾದೀತು. ಆದರೆ ತಾಳ್ಮೆ, ಸಂಯಮದಿಂದ ಯೋಚಿಸಬೇಕು. ಮನೆಯಲ್ಲಿ ಕಳ್ಳತನದ ಭೀತಿಯಿದ್ದು, ಅಪರಿಚಿತರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ.

ಮಿಥುನ: ಬಹುದಿನಗಳ ಕನಸು ನನಸು ಮಾಡಲು ಮುಂದಾಗಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ನಿಮ್ಮ ಕ್ರಿಯಾಶೀಲತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ. ಚಿಂತೆ ಬೇಡ.

ಕರ್ಕಟಕ: ವ್ಯಾವಹಾರಿಕ ಸಂಬಂಧ ವೃದ್ಧಿಗೆ ಮುಂದಾಗಲಿದ್ದೀರಿ. ಅವಿವಾಹಿತರಿಗೆ ವಿವಾಹ ಯೋಗಕ್ಕೆ ಕೆಲವು ದಿನ ಕಾಯುವುದು ಉತ್ತಮ. ಹಿರಿಯರಿಗೆ ಪುಣ್ಯ ಕ್ಷೇತ್ರಗಳಿಗೆ ಸಂದರ್ಶನ ಮಾಡುವ ಯೋಗವಿದೆ.

ಸಿಂಹ: ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಚಿಂತೆ ಬೇಡ. ಕಾರ್ಯಕ್ಷೇತ್ರದಲ್ಲಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಇನ್ನೊಬ್ಬರಿಗೆ ಸಹಾಯ ಮಾಡುವ ಅವಕಾಶ ನಿಮ್ಮದಾಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಕನ್ಯಾ: ಸಂದರ್ಭೋಚಿತವಾಗಿ ನಿರ್ಧಾರ ತೆಗೆದುಕೊಳ್ಳುವುದರಿಂದ ಯಶಸ್ಸು ನಿಮ್ಮದಾಗಲಿದೆ. ಅವಕಾಶಗಳು ಬಂದಾಗ ಸರಿಯಾಗಿ ಬಳಸಿಕೊಳ್ಳಿ. ಶೈಕ್ಷಣಿಕ ರಂಗದಲ್ಲಿರುವವರಿಗೆ ಕಠಿಣ ಪರೀಕ್ಷೆಗಳು ಎದುರಾಗಲಿವೆ.

ತುಲಾ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸಗಳು ಮೇಲಧಿಕಾರಿಗಳ ಪ್ರಶಂಸೆಗೊಳಗಾಗಲಿದೆ. ವ್ಯಾಪಾರೀ ವರ್ಗದವರಿಗೆ ಆರ್ಥಿಕ ಚೇತರಿಕೆಗೆ ದಾರಿ ಕಂಡುಬರಲಿದೆ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಮಾಡಬೇಡಿ.

ವೃಶ್ಚಿಕ: ಇನ್ನೊಬ್ಬರ ಕೆಲಸಗಳಲ್ಲಿ ಸಹಾಯ ಮಾಡುವ ಗುಣ ಎಲ್ಲರಿಗೂ ಮೆಚ್ಚುಗೆಯಾಗಲಿದೆ. ಕೌಟುಂಬಿಕವಾಗಿ ಅನಿರೀಕ್ಷಿತ ಅತಿಥಿಗಳ ಆಗಮನವಾಗಲಿದ್ದು, ಸಂತೋಷವಿರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ.

ಧನು: ವಿಶೇಷವಾದ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ನಿಮ್ಮ ಅಭಿಪ್ರಾಯಗಳನ್ನು ಬೇರೆಯವರ ಮೇಲೆ ಹೇರಲು ಹೋಗಬೇಡಿ. ಸಂಗಾತಿಯ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಿ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಮಕರ: ನಿಮ್ಮ ಬಹುದಿನಗಳ ಕನಸು ನನಸಾಗಲಿದೆ. ಆರ್ಥಿಕವಾಗಿ, ವ್ಯಾವಹಾರಿಕವಾಗಿ ಚೇತರಿಕೆಯ ದಿನಗಳಿವು. ಹೊಸ ಯೋಜನೆಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಗಲಿದೆ.

ಕುಂಭ: ಮಾನಸಿಕವಾಗಿ ಖುಷಿಕೊಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಯಿರಲಿ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ಸರಕಾರಿ ಉದ್ಯೋಗಿಗಳಿಗೆ ಮುಂಬಡ್ತಿಯ ಯೋಗವಿದೆ.

ಮೀನ: ಕೈಗೆ ಬಂದಿದ್ದು ಬಾಯಿಗೆ ಬರದ ಸ್ಥಿತಿ ಎದುರಾದೀತು. ತಾಳ್ಮೆ, ಸಂಯಮವಿರಲಿ. ಬಂಧುವರ್ಗದವರ ಚಾಡಿಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಸಾಂಸಾರಿಕವಾಗಿ ಮಧ್ಯಮ ಸುಖವಿರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಶುಕ್ರವಾರ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಓದಬೇಕಾದ ಗಣೇಶ ಸ್ತೋತ್ರ

ಮುಂದಿನ ಸುದ್ದಿ
Show comments