Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 17 ಡಿಸೆಂಬರ್ 2021 (08:30 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ಇತರರು ನಿಮ್ಮ ಕೆಲಸಕ್ಕೆ ಸಂಚಕಾರ ತಂದಾರೆಂಬ ಭೀತಿ ಕಾಡಲಿದೆ. ಮಾನಸಿಕವಾಗಿ ಗೊಂದಲದ ವಾತಾವರಣವಿರಲಿದ್ದು, ಆತ್ಮೀಯರೊಂದಿಗೆ ಭಾವನೆ ಹಂಚಿಕೊಂಡು ಹಗುರವಾಗಲಿದ್ದೀರಿ.

ವೃಷಭ: ಹೊಸದಾಗಿ ಕೆಲಸ ಆರಂಭಿಸುವ ಉತ್ಸಾಹದಲ್ಲಿ ಎಡವಿ ಬೀಳುವ ಅಪಾಯವಿದೆ. ತಾಳ್ಮೆ, ಸಂಯಮವಿರಲಿ. ಹಿರಿಯರ ಸಲಹೆಗಳು ಉಪಯೋಗಕ್ಕೆ ಬರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗುವುದು.

ಮಿಥುನ: ವೃತ್ತಿರಂಗದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗದೇ ನಿರಾಸೆಯಾದೀತು. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ದೊರೆಯಲಿದೆ. ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ನಿವಾರಣೆಯಾಗಲಿದೆ. ಚಿಂತೆ ಬೇಡ.

ಕರ್ಕಟಕ: ಕೈಗೆ ಬಂತು ಎನ್ನುವಷ್ಟರಲ್ಲಿ ಜಾರಿ ಹೋದ ಅನುಭವ ನಿಮಗಾಗಲಿದೆ. ಸಂಗಾತಿಯ ಸಲಹೆಗಳನ್ನು ಪಾಲಿಸುವುದು ಉತ್ತಮ. ನೂತನ ಕೆಲಸಗಳಿಗೆ ಕೈ ಹಾಕಲು ಕೆಲವು ದಿನ ಕಾಯುವುದು ಉತ್ತಮ. ದೇವತಾ ಪ್ರಾರ್ಥನೆ ಮಾಡಿ.

ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ವಿಶೇಷ ಅನುಭವಗಳು ನಿಮ್ಮದಾಗಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗಲಿದ್ದೀರಿ. ಶೈಕ್ಷಣಿಕ ರಂಗದಲ್ಲಿರುವವರಿಗೆ ಹಿನ್ನಡೆಯಾದೀತು. ಕಾರ್ನಿನಿಮಿತ್ತ ಪರವೂರಿಗೆ ಸಂಚಾರ ಮಾಡಲಿದ್ದೀರಿ.

ಕನ್ಯಾ: ಅನಿರೀಕ್ಷಿತವಾಗಿ ಧನಾಗಮನವಾಗಲಿದ್ದು, ಅಂದುಕೊಂಡ ಕೆಲಸಗಳನ್ನು ಪೂರ್ತಿ ಮಾಡಲಿದ್ದೀರಿ. ಸರಕಾರಿ ಉದ್ಯೋಗಿಗಳಿಗೆ ಮುಂಬಡ್ತಿಯ ಯೋಗವಿದೆ. ದಾಯಾದಿ ಕಲಹಗಳಿಗೆ ಪರಿಹಾರ ಕಂಡುಕೊಳ್ಳುವಿರಿ.

ತುಲಾ: ಆಸ್ತಿ ವಿಚಾರಗಳಲ್ಲಿ ಮುನ್ನಡೆ ಕಂಡುಬರುವುದು. ಸಹೋದರರ ಸಂಬಂಧಿಗಳೊಂದಿಗೆ ಭಿನ್ನಾಭಿಪ್ರಾಯಗಳು ದೂರವಾಗಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.

ವೃಶ್ಚಿಕ: ವಿಶೇಷವಾದ ವ್ಯಕ್ತಿಗಳು ನಿಮ್ಮ ಜೀವನವನ್ನೇ ಬದಲಾಯಿಸಲಿದ್ದಾರೆ. ಪ್ರೇಮಿಗಳಿಗೆ ಇದು ಶುಭ ದಿನ. ಮನೆಗೆ ಅನಿರೀಕ್ಷಿತ ಅತಿಥಿಗಳ ಆಗಮನವಾಗಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಹೆಚ್ಚಾದೀತು.

ಧನು: ನಿಮ್ಮ ಬಗ್ಗೆ ಇನ್ನೊಬ್ಬರ ಅತಿಯಾದ ಕಾಳಜಿಯೇ ನಿಮಗೆ ಉಸಿರುಗಟ್ಟುವಂತಾದೀತು. ಕೌಟುಂಬಿಕವಾಗಿ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ. ಸಂಗಾತಿಯ ಕಿವಿ ಮಾತುಗಳನ್ನು ಪಾಲಿಸುವುದು ಉತ್ತಮ.

ಮಕರ: ನಿಮ್ಮಲ್ಲೇ ರಹಸ್ಯವಾಗಿಟ್ಟುಕೊಂಡಿದ್ದ ವಿಚಾರಗಳು ಹೊರಗೆ ಬರಲಿವೆ. ಸಂತಾನಾಪೇಕ್ಷಿತ ದಂಪತಿಗಳು ದೇವರ ಮೊರೆ ಹೋಗಲಿದ್ದಾರೆ. ಮನೆಯಲ್ಲಿ ಸಣ್ಣ ಪುಟ್ಟ ರಿಪೇರಿ ಕೆಲಸಗಳಿಗೆ ಖರ್ಚು ವೆಚ್ಚಗಳಾಗಲಿವೆ.

ಕುಂಭ: ಆರ್ಥಿಕವಾಗಿ ಎಷ್ಟೇ ಧನಾದಾಯವಿದ್ದರೂ ಖರ್ಚೂ ಅಷ್ಟೇ ಇರಲಿದೆ. ಭವಿಷ್ಯದ ಬಗ್ಗೆ ಚಿಂತೆಯಾದೀತು. ಮಕ್ಕಳಿಂದ ಸಂತೋಷದ ವಾರ್ತೆ ಆಲಿಸಬಹುದು. ಉದ್ಯೋಗ ವ್ಯವಹಾರದಲ್ಲಿ ಸ್ಥಾನ ಮಾನ ವೃದ್ಧಿಯಾಗಲಿದೆ.

ಮೀನ: ಮಹಿಳೆಯರಿಗೆ ಚಿನ್ನಾಭರಣಗಳ ಖರೀದಿ ಯೋಗ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ವಾಹನ ಸವಾರರು ಎಚ್ಚರಿಕೆಯಿಂದಿರಬೇಕು. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

Tulsi Mantra: ಹೆಣ್ಣು ಮಕ್ಕಳಿಗಾಗಿ ತುಳಸಿ ಅಷ್ಟೋತ್ತರ ಮಂತ್ರ ಇಲ್ಲಿದೆ

ಮುಂದಿನ ಸುದ್ದಿ
Show comments