ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 10 ಡಿಸೆಂಬರ್ 2021 (08:30 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ನೀವು ಮಾಡುವ ಕೆಲಸ ನಿಮಗೆ ತೃಪ್ತಿಕೊಡಲಿದೆ. ಬೇರೆಯವರ ಅಭಿಪ್ರಾಯಗಳಿಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ವಾಹನ ರಿಪೇರಿಗಾಗಿ ಸಣ್ಣ ಪುಟ್ಟ ಖರ್ಚುಗಳಾದೀತು. ಮನೆಯಲ್ಲಿ ಶುಭ ಕಾರ್ಯ ನಡೆಸಲು ಸಿದ್ಧತೆ ನಡೆಸುವಿರಿ.

ವೃಷಭ: ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗ ಕೂಡಿಬರಲಿದೆ. ವಾಹನಾದಿ ಸೌಕರ್ಯಗಳು ಶೀಘ್ರದಲ್ಲೇ ನಿಮ್ಮದಾಗಲಿದೆ. ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲು ಮುಂದಾಗಲಿದ್ದೀರಿ. ತಾಳ್ಮೆಯಿರಲಿ.

ಮಿಥುನ: ನಿಮ್ಮ ಸಮೀಪವರ್ತಿಗಳಿಗೆ ಸಮಸ್ಯೆಗಳು ಬಂದಾಗ ನೆರವಿಗೆ ಮುಂದಾಗಲಿದ್ದೀರಿ. ವೃತ್ತಿರಂಗದಲ್ಲಿ ಸಹನೆಯಿಂದ ಕಾರ್ಯನಿರ್ವಹಿಸುವುದು ಮುಖ್ಯ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗವಿದೆ.

ಕರ್ಕಟಕ:  ಪ್ರೀತಿ ಪಾತ್ರರೊಂದಿಗೆ ಪ್ರವಾಸ, ಕಿರು ಸಂಚಾರಕ್ಕೆ ಸಿದ್ಧರಾಗಲಿದ್ದೀರಿ. ಮಾನಸಿಕವಾಗಿ ಉತ್ಸಾಹ ಮೂಡಿಸುವಂತಹ ಕೆಲಸ ಮಾಡುವಿರಿ. ನಿಮ್ಮ ಮಾತು ಇತರರ ಗಮನ ಸೆಳೆಯಲಿದೆ.

ಸಿಂಹ: ವ್ಯಾವಹಾರಿಕ ಸಂಬಂಧಗಳ ಅಭಿವೃದ್ಧಿಗೆ ಮುಂದಾಗಲಿದ್ದೀರಿ. ಹೊಸ ವ್ಯವಹಾರದಲ್ಲಿ ಬಂಡವಾಳ ಹೂಡಲಿದ್ದೀರಿ. ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಿ. ದೇವತಾ ಪ್ರಾರ್ಥನೆ ಮಾಡಿ.

ಕನ್ಯಾ: ಅಭ್ಯಾಸದ ಕಡೆಗೆ ನಿಮ್ಮ ಗಮನ ಕೊಂಚ ಕಡಿಮೆಯಾದಂತನಿಸಬಹುದು. ಯಾರ ಜೊತೆಗೂ ಶತ್ರುತ್ವ ಬೇಡ. ಮಕ್ಕಳಿಗೆ ಅನಿರೀಕ್ಷಿತ ಉಡುಗೊರೆಗಳ ಮೂಲಕ ಸಂತೋಷ ಕೊಡಲಿದ್ದೀರಿ. ಅನಗತ್ಯ ಚಿಂತೆ ಬೇಡ.

ತುಲಾ: ಹೆಚ್ಚಿನ ಹಣ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ದೇಹಾರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಕಿರು ಓಡಾಟ ನಡೆಸುವಿರಿ.

ವೃಶ್ಚಿಕ: ನೆರೆಹೊರೆಯವರು ನಿಮ್ಮ ಬಗ್ಗೆ ಏನನ್ನುವರೋ ಎಂಬ ಕೀಳರಿಮೆ ಬೇಡ. ವೃತ್ತಿಸಂಬಂಧವಾದ ಅಸಮಾಧಾನಗಳನ್ನು ಮನೆಯಲ್ಲಿ ತೋರಿಸಲು ಹೋಗಿ ಅಸಮಾಧಾನಕ್ಕೆ ಕಾರಣರಾಗುವಿರಿ. ತಾಳ್ಮೆ, ಸಂಯಮ ಅಗತ್ಯ.

ಧನು: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಉನ್ನತ ಸ್ಥಾನಕ್ಕೇರುವ ಯೋಗ. ಮಹಿಳೆಯರಿಂದ ನಿಮ್ಮ ಕೆಲಸಗಳಿಗೆ ನೆರವು ಸಿಗಲಿದೆ. ನಿರುದ್ಯೋಗಿಗಳಿಗೆ ಸ್ವಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆ.

ಮಕರ: ನಿಮ್ಮ ಕೆಲಸ ಕಾರ್ಯಗಳಿಗೆ ಬಂಧು ಜನರಿಂದ ಪ್ರೋತ್ಸಾಹ ಕಂಡುಬರಲಿದೆ. ಬಾಕಿ ಬರಬೇಕಾಗಿದ್ದ ಹಣ ಪಾವತಿಯಾಗುವುದು. ಸರಕಾರಿ ನೌಕರರಿಗೆ ಕೆಲಸದೊತ್ತಡ ಕಡಿಮೆಯಾಗುವುದು. ಸಂತೋಷವಿರಲಿದೆ.

ಕುಂಭ: ಕೌಟುಂಬಿಕ ಸಮಸ್ಯೆಗಳಿಗೆ ಹಿರಿಯರ ಸಲಹೆಯಿಂದ ಪರಿಹಾರ ಕಂಡುಕೊಳ್ಳಲಿದ್ದೀರಿ. ಸಂತಾನಹೀನ ದಂಪತಿಗಳು ದೇವರ ಮೊರೆ ಹೋಗಲಿದ್ದಾರೆ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನಾದಿಗಳು ವೃದ್ಧಿಯಾಗಲಿವೆ.

ಮೀನ: ಪ್ರೇಮಿಗಳಿಗೆ ಇಂದು ಶುಭ ದಿನ. ಉದ್ಯೋಗಾರ್ಥಿಗಳಿಗೆ ಹೊಸ ಅವಕಾಶಗಳು ಸಿಗಲಿವೆ. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾದೀತು. ನಿಮ್ಮ ಪಾಲಿಗೆ ಬರಬೇಕಾಗಿದ್ದ ಸಂಪತ್ತು ಪಡೆಯಲು ಪ್ರಯತ್ನಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ತಪ್ಪುಗಳಿಗೆ ಕ್ಷಮಾಪಣೆ ಸಿಗಬೇಕೆಂದರೆ ಶಿವನ ಈ ಸ್ತೋತ್ರ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಪಠಣದ ಅದ್ಭುತ ಪ್ರಯೋಜನಗಳು

ಮಹಾಲಕ್ಷ್ಮಿ ಅಷ್ಟಕಂ ಮತ್ತು ಅದರ ಸರಳ ಅರ್ಥ ಇಲ್ಲಿದೆ

ಶ್ರೀ ವೆಂಕಟೇಶ್ವರ ಪ್ರಪತ್ತಿ ಸ್ತೋತ್ರ

ಸರಸ್ವತಿ ಅಷ್ಟೋತ್ತರ ಶತನಾಮಾವಳಿ

ಮುಂದಿನ ಸುದ್ದಿ
Show comments