Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 4 ನವೆಂಬರ್ 2021 (08:35 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ವಾತಾವರಣ ಬದಲಾವಣೆಯಿಂದ ದೇಹಾರೋಗ್ಯದಲ್ಲಿ ಏರುಪೇರಾದೀತು. ಹೊಸ ಜನರ ಭೇಟಿ ಮನಸ್ಸಿಗೆ ಸಂತೋಷ ಕೊಡಲಿದೆ. ಆಪ್ತರೊಂದಿಗೆ ಕಿರು ಸಂಚಾರ ಮಾಡಲಿದ್ದೀರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.

ವೃಷಭ: ಸಣ್ಣ ಪುಟ್ಟ ವಿಚಾರಕ್ಕೆ ಕೋಪ ಮಾಡಿಕೊಳ್ಳಬೇಡಿ. ಕೌಟುಂಬಿಕವಾಗಿ ಹೊಂದಾಣಿಕೆ ಕಾಪಾಡಿಕೊಳ್ಳುವ ಜವಾಬ್ಧಾರಿ ನಿಮ್ಮದಾಗುವುದು. ಆರ್ಥಿಕವಾಗಿ ಹಣಕಾಸಿನ ಹರಿವಿದ್ದರೂ ಖರ್ಚು ವೆಚ್ಚಗಳಾಗಲಿವೆ. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ಬಹುದಿನಗಳ ನಂತರ ಆಪ್ತ ಮಿತ್ರರ ಭೇಟಿಯಾದ ಸಂತೋಷ ನಿಮ್ಮದಾಗುವುದು. ಹಿರಿಯರಿಗೆ ಆರೋಗ್ಯ ಸಮಸ್ಯೆಯಾದರೂ ಆತಂಕ ಬೇಕಿಲ್ಲ. ಹೊಸ ವಾಹನ ಖರೀದಿ ಕನಸು ನನಸಾಗಲಿದೆ.

ಕರ್ಕಟಕ: ಕುಟುಂಬದ ಹಿರಿಯರೊಂದಿಗೆ ಚರ್ಚಿಸಿ ಭವಿಷ್ಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದೀರಿ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಲಾಭವಾದೀತು. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ.

ಸಿಂಹ: ದೈನಂದಿನ ಕೆಲಸಗಳಿಂದ ಬಿಡುವು ಸಿಗಲಿದೆ. ಸಾಂಸಾರಿಕವಾಗಿ ಸುಂದರ ದಿನವಾಗಿದ್ದು, ಆಪ್ತರೊಂದಿಗೆ ಸಮಯ ಕಳೆಯಲಿದ್ದೀರಿ. ಮಕ್ಕಳಿಗೆ ಉಡುಗೊರೆ ನೀಡಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ಕನ್ಯಾ: ಮನಸ್ಸಿಗೆ ಖುಷಿಯೆನಿಸುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಉದ್ಯೋಗ ರಂಗದಲ್ಲಿ ಬದಲಾವಣೆಯ ಪ್ರಯತ್ನಕ್ಕೆ ಫಲ ಸಿಗುವುದು. ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯಲಿದ್ದೀರಿ. ಕಿರು ಸಂಚಾರ ಮಾಡಲಿದ್ದೀರಿ.

ತುಲಾ: ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡುವ ಅನಿವಾರ್ಯತೆ ಎದುರಾಗಲಿದೆ. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ.

ವೃಶ್ಚಿಕ: ನೂತನ ದಂಪತಿಗಳಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ. ನಿರುದ್ಯೋಗಿಗಳು ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಪಡೆಯಲಿದ್ದಾರೆ. ಅನಗತ್ಯ ಮಾತುಗಳಿಗೆ ಕಡಿವಾಣ ಹಾಕುವುದು ಉತ್ತಮ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಧನು: ಅಸಮಾಧಾನಗಳನ್ನು ಬದಿಗೊತ್ತಿ ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಲಿದ್ದೀರಿ. ಮಕ್ಕಳಿಗೆ ಖುಷಿ ಕೊಡುವ ಘಟನೆಗಳು ನಡೆಯಲಿವೆ. ಬಂಧು ಮಿತ್ರರ ಭೇಟಿ ಮಾಡಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆಯಾಗುವುದು.

ಮಕರ: ಮನಸ್ಸಿನಲ್ಲಿದ್ದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ನಿಮ್ಮ ಕೆಲಸಗಳಿಗೆ ಸಂಗಾತಿಯ ಸಹಕಾರ ಸಿಗುವುದು. ಹೊಸ ಮಿತ್ರರ ಸಂಪಾದಿಸಲಿದ್ದೀರಿ. ಮಹಿಳೆಯರಿಗೆ ಕೆಲಸದೊತ್ತಡ ಹೆಚ್ಚಾದೀತು.

ಕುಂಭ: ನಿಮ್ಮ ಕೆಲವೊಂದು ಸಂಗಾತಿಯ ಅಸಮಾಧಾನಕ್ಕೆ ಗುರಿಯಾದೀತು. ತಾಳ್ಮೆ, ಸಂಯಮಿರಲಿ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಿ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡಲಿದ್ದೀರಿ.

ಮೀನ: ವೃತ್ತಿರಂಗದಲ್ಲಿ ಕೆಳ ಹಂತದ ನೌಕರರಿಗೆ ಉದ್ಯೋಗ ನಷ್ಟ ಭೀತಿ ಎದುರಾಗಲಿದೆ. ಮನಸ್ಸಿನ ಭಾವನೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಪಡೆಯಲಿದ್ದೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shiva mantra: ಇಂದು ಶಿವ ಅಷ್ಟೋತ್ತರ ತಪ್ಪದೇ ಓದಿ

Surya Mantra: ಇಂದು ಸೂರ್ಯನ ಕುರಿತಾದ ಈ ಸ್ತೋತ್ರವನ್ನು ತಪ್ಪದೇ ಓದಿ

Anjaneya Mantra: ಶನಿದೋಷವಿದ್ದವರು ಆಂಜನೇಯನ ಈ ಸ್ತೋತ್ರವನ್ನು ಓದಿ

Lakshmi Mantra: ಮನಸ್ಸಿನ ಭಯ ದೂರ ಮಾಡಲು ಧೈರ್ಯ ಲಕ್ಷ್ಮಿ ಸ್ತೋತ್ರ ಇಲ್ಲಿದೆ ನೋಡಿ

Vishnu Mantra: ಶ್ರೀ ವಿಷ್ಣು ಅಷ್ಟೋತ್ತರ ನಾಮಾವಳಿ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಓದಿ

ಮುಂದಿನ ಸುದ್ದಿ
Show comments