ಮೇಷ: ಕೌಟುಂಬಿಕವಾಗಿ ನೆಮ್ಮದಿಯ ದಿನಗಳಾಗಿದ್ದು, ನೀವು ಅಂದುಕೊಂಡ ಕೆಲಸಗಳನ್ನು ಪೂರ್ತಿ ಮಾಡಲಿದ್ದೀರಿ. ಬಹು ದಿನಗಳ ನಂತರ ಇಷ್ಟ ಸ್ಥಳಗಳಿಗೆ ಭೇಟಿ ಕೊಡುವ ಯೋಗ ಕೂಡಿಬರಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ವೃಷಭ: ಅಭಿವೃದ್ಧಿ ಕಾರ್ಯಗಳಲ್ಲಿ ಆಸಕ್ತಿ ಕಂಡುಬರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾದೀತು. ವೈಯಕ್ತಿಕ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣವಿರಲಿದೆ.
ಮಿಥುನ: ಗುರುಹಿರಿಯರಿಂದ ಸೂಕ್ತ ಸಮಯದಲ್ಲಿ ಬರುವ ಸಲಹೆಗಳು ಉಪಯೋಗಕ್ಕೆ ಬರಲಿವೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರುವುದು. ಸುದೀರ್ಘ ಪ್ರಯಾಣದಿಂದ ದೇಹಾಯಾಸವಾಗದಂತೆ ಎಚ್ಚರವಹಿಸಿ.
ಕರ್ಕಟಕ: ವೈಯಕ್ತಿಕವಾಗಿ ಪ್ರಗತಿ ಕಂಡುಬರಲಿದೆ. ಆರ್ಥಿಕವಾಗಿ ಚೇತರಿಕೆ ಕಂಡುಬರಲಿದ್ದು, ಹೊಸ ವ್ಯವಹಾರಗಳಿಗೆ ಕೈ ಹಾಕಲಿದ್ದೀರಿ. ಅಧ್ಯಯನ ಶೀಲರಿಗೆ ಹೊಸ ಯೋಚನೆಗಳು ಬರಲಿವೆ. ದೇವತಾ ಪ್ರಾರ್ಥನೆ ಮಾಡಿ.
ಸಿಂಹ: ಮಹಿಳೆಯರಿಗೆ ಮಂಗಳ ವಸ್ತ್ರ ಖರೀದಿ ಯೋಗ ಕೂಡಿಬರಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಸಲು ಸಿದ್ಧತೆ ನಡೆಸಲಿದ್ದೀರಿ. ನೂತನ ಜನರ ಭೇಟಿಯಿಂದ ನಿಮ್ಮ ವ್ಯವಹಾರದಲ್ಲಿ ಮುನ್ನಡೆ ಕಂಡುಬರುವುದು. ಚಿಂತೆ ಬೇಡ.
ಕನ್ಯಾ: ವೃತ್ತಿರಂಗದಲ್ಲಿ ನೀವು ಅಂದುಕೊಂಡಂತೆಯೇ ಕೆಲಸಗಳು ಸಾಗಲಿವೆ. ಆದರೆ ವೈಯಕ್ತಿಕ ವಿಚಾರದಲ್ಲಿ ಮೂರನೆಯವರು ಮೂಗು ತೂರಿಸಲು ಅವಕಾಶ ಕೊಡಬೇಡಿ. ದೇವಾಲಯ ಸಂದರ್ಶನದಿಂದ ನೆಮ್ಮದಿ.
ತುಲಾ: ಸಾಂಸಾರಿಕವಾಗಿ ಸುಖ-ದುಃಖ ಸಮನಾಗಿರಲಿದೆ. ಪಾಲುದಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ಕಂಡುಬರಲಿದೆ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ.
ವೃಶ್ಚಿಕ: ಇನ್ನೊಬ್ಬರ ತಪ್ಪಿಗೆ ಬೆಲೆ ತೆರುವ ಸಂದರ್ಭ ಎದುರಾದೀತು. ಮನರಂಜನಾ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಸಂಪಾದಿಸುವ ಯೋಗ. ನಿರೀಕ್ಷಿತ ಮೂಲಗಳಿಂದ ಧನಾಗಮನವಾಗಲಿದ್ದು, ಸಾಲಗಾರರ ಕಾಟದಿಂದ ಮುಕ್ತಿ.
ಧನು: ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಅಭಿವೃದ್ಧಿ ಕಂಡುಬರುವುದು. ಮಿತ್ರರ ಭೇಟಿಯಿಂದ ಮನಸ್ಸಿಗೆ ಸಂತೋಷವಾಗಲಿದೆ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದಿದ್ದರೆ ಆರೋಗ್ಯ ಸಮಸ್ಯೆಯಾದೀತು. ತಾಳ್ಮೆ, ಸಂಯಮವಿರಲಿ.
ಮಕರ: ಮುಂದಿನ ಭವಿಷ್ಯಕ್ಕೆ ಪೂರಕವಾದ ಯೋಜನೆಗಳನ್ನು ಹಾಕಿಕೊಳ್ಳಲಿದ್ದೀರಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಅಭಿವೃದ್ಧಿ ಕಂಡುಬರಲಿದೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ.
ಕುಂಭ: ಪ್ರೀತಿ ಪಾತ್ರರನ್ನು ಭೇಟಿಯಾಗುವ ಯೋಗ ಕೂಡಿಬರಲಿದೆ. ಮಕ್ಕಳಿಂದ ಸಂತೋಷ ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಪರರ ಸಹಾಯ ಅಪೇಕ್ಷಿಸುವಿರಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ತಾಳ್ಮೆಯಿರಲಿ.
ಮೀನ: ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದು, ಮನಸ್ಸಿಗೆ ನೆಮ್ಮದಿಯಾಗುವುದು. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಒದಗಿಬರಲಿವೆ. ಆತುರದ ನಿರ್ಧಾರ ಕೈಗೊಳ್ಳಲು ಹೋಗಬೇಡಿ.