ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 8 ಅಕ್ಟೋಬರ್ 2021 (08:30 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ದೇಹಾರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ಕೃಷಿಕರಿಗೆ ಮುನ್ನಡೆಯ ಯೋಗವಿದೆ. ಕಾರ್ಯರಂಗದಲ್ಲಿ ಹಿತಶತ್ರುಗಳ ಕಾಟ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಪಡಬೇಕಾಗುತ್ತದೆ.

ವೃಷಭ: ಅವಿವಾಹಿತರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಹೊಸ ಜನರ ಭೇಟಿಯಿಂದ ನಿಮ್ಮ ಕಾರ್ಯ ಸರಾಗವಾಗಿ ನೆರವೇರಲಿದೆ. ನಿರೀಕ್ಷಿತ ಆದಾಯ ಕೈಗೆ ಬರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ಕಂಡುಬರಲಿದೆ.

ಮಿಥುನ: ಮನೆಯಲ್ಲಿ ಹೆಚ್ಚಿನ ಜವಾಬ್ಧಾರಿಯು ಹೆಗಲಿಗೇರಲಿದ್ದು, ತಾಳ್ಮೆಯಿಂದ ವ್ಯವಹರಿಸಬೇಕಾಗುತ್ತದೆ. ಗುರುಹಿರಿಯರಿಂದ ನಿಮ್ಮ ಕೆಲಸಗಳಿಗೆ ಸೂಕ್ತ ಸಲಹೆ ಸಿಗಲಿದೆ. ವ್ಯಾವಹಾರಿಕವಾಗಿ ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡಿ.

ಕರ್ಕಟಕ: ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ದೂರವಾಗಲಿದ್ದು, ನೆಮ್ಮದಿಯಾಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡುಬರಲಿದೆ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರುವುದು.

ಸಿಂಹ: ಆಸ್ತಿ ಖರೀದಿ ವ್ಯವಹಾರದಲ್ಲಿ ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಿ. ಮನರಂಜನಾ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಸಂಪಾದಿಸುವ ಯೋಗ. ದೀರ್ಘ ಪ್ರಯಾಣದಿಂದ ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ದಿನದಂತ್ಯಕ್ಕೆ ನೆಮ್ಮದಿ.

ಕನ್ಯಾ: ನಿರೀಕ್ಷಿತ ಸಮಯದಲ್ಲಿ ಧನಾಗಮನವಾಗುವುದರಿಂದ ಕಾರ್ಯಗಳು ಸರಾಗವಾಗಿ ನಡೆಯಲಿದೆ. ನೆರೆಹೊರೆಯವರೊಂದಿಗೆ ಸಂಘರ್ಷಗಳಾಗದಂತೆ ಎಚ್ಚರಿಕೆ ವಹಿಸಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ತುಲಾ: ಬಹಳ ದಿನಗಳಿಂದ ಬಾಕಿಯಿದ್ದ ಕೆಲಸಗಳನ್ನು ಪೂರ್ತಿ ಮಾಡಲು ಮುಂದಾಗಲಿದ್ದೀರಿ. ಸರಕಾರೀ ವ್ಯವಹಾರಗಳಲ್ಲಿ ನಿರೀಕ್ಷಿತ ವೃದ್ಧಿ ಕಂಡುಬರಲಿದೆ. ಸಾಂಸಾರಿಕವಾಗಿ  ಅತಿಥಿಗಳ ಆಗಮನಕ್ಕೆ ಸಿದ್ಧರಾಗಿ.

ವೃಶ್ಚಿಕ: ದಾಂಪತ್ಯದಲ್ಲಿ ಅನಗತ್ಯ ಸಂಘರ್ಷಕ್ಕೆ ಎಡೆಮಾಡಿಕೊಡದಿರಿ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆಬರಲಿದೆ. ಇಷ್ಟಮಿತ್ರರೊಂದಿಗೆ ಇಷ್ಟ ಭೋಜನ ಸವಿಯುವ ಯೋಗ ಕೂಡಿಬರಲಿದೆ.

ಧನು: ನಿಮ್ಮ ಕ್ರಿಯಾಶೀಲತೆಯಿಂದ ಮಾಡುವ ಕೆಲಸಗಳಿಂದ ಇತರರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ದಂಪತಿಗಳಿಗೆ ಏಕಾಂತದ ಸಮಯ ಕಳೆಯಲು ಅವಕಾಶ ಸಿಗಲಿದೆ. ಸಾಮಾಜಿಕವಾಗಿ ಕೀರ್ತಿ ಸಂಪಾದಿಸುವ ಯೋಗ.

ಮಕರ: ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಕೀಳರಿಮೆ ಬೇಡ. ಸರಕಾರಿ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಆಸ್ತಿ ವಿಚಾರದಲ್ಲಿ ಸಹೋದರರೊಂದಿಗೆ ವಾಗ್ವಾದಗಳಾಗದಂತೆ ಎಚ್ಚರಿಕೆ ವಹಿಸಿ.

ಕುಂಭ: ನೀವು ಇಂದು ಕೈಗೊಳ್ಳುವ ಕೆಲಸಗಳು ನಿಮ್ಮ ಭವಿಷ್ಯ ನಿರ್ಧರಿಸಲಿವೆ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟವಾಗುವ ಭೀತಿ. ಮನೆಯಲ್ಲಿ ಶುಭಮಂಗಲ ಕಾರ್ಯಕ್ಕೆ ಸಿದ್ಧತೆ ನಡೆಸಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ಮೀನ: ಸಾಂಸಾರಿಕವಾಗಿ ಸುಖ, ಶಾಂತಿ ಇರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ನಿರೀಕ್ಷೆಗೂ ಮೀರಿದ ಆದಾಯ ಒದಗಿಬರಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಹಣಕಾಸಿನ ಸಮಸ್ಯೆ ನಿವಾರಣೆಗೆ ಓದಬೇಕಾದ ಗಣೇಶ ಸ್ತೋತ್ರ

ಮಂಗಳವಾರ ಆಂಜನೇಯನ ಕೃಪೆಗೆ ಹನುಮದಷ್ಟಕಂ ಓದಿ

ಶ್ರೀ ಕಾಲಭೈರವ ಬ್ರಹ್ಮ ಕವಚಂ ಸ್ತೋತ್ರವನ್ನು ತಪ್ಪದೇ ಓದಿ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಮುಂದಿನ ಸುದ್ದಿ
Show comments